AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್

ರಣರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್

ಝಾಹಿರ್ ಯೂಸುಫ್
|

Updated on: May 02, 2026 | 12:28 PM

Share

ಮೊದಲ ಮೂರು ಎಸೆತಗಳಲ್ಲಿ ಕೇವಲ ಹುನೈನ್ ಶಾ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ ನಾಲ್ಕನೇ ಎಸೆತದಲ್ಲಿ ಫಯೀಮ್ ಅಶ್ರಫ್ ವಿಕೆಟ್ ಕಬಳಿಸಿದರು. ಇನ್ನು 5ನೇ ಮತ್ತು 6ನೇ ಎಸೆತಗಳಲ್ಲಿ ನೀಡಿದ್ದು ಕೇವಲ 2 ರನ್​ ಮಾತ್ರ. ಈ ಮೂಲಕ ಕೊನೆಯ ಓವರ್​ನಲ್ಲಿ ಕೇವಲ 2 ರನ್​ಗಳ ರೋಚಕ ಜಯ ತಂದುಕೊಡುವ ಮೂಲಕ ಹೈದರಾಬಾದ್ ಕಿಂಗ್ಸ್​ಮೆನ್ ತಂಡವನ್ನು ಫೈನಲ್​ಗೇರಿಸಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಹೈದರಾಬಾದ್​ ಕಿಂಗ್ಸ್​ಮೆನ್ ತಂಡ ಫೈನಲ್​​ಗೇರಿದೆ. ಅದು ಕೂಡ ಕೇವಲ 2 ರನ್​ಗಳ ರೋಚಕ ಜಯದೊಂದಿಗೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್​ಮೆನ್ ಹಾಗೂ ಇಸ್ಲಾಮಾಬಾದ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಿಂಗ್ಸ್​​ಮೆನ್ ತಂಡವು 20 ಓವರ್​​ಗಳಲ್ಲಿ 186 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು ಕೇವಲ 6 ರನ್​ಗಳ ಅವಶ್ಯಕತೆಯಿತ್ತು. ಅದರಂತೆ ಅಂತಿಮ ಓವರ್​ನಲ್ಲಿ ದಾಳಿಗಿಳಿದ ಹುನೈನ್ ಶಾ ಮಾರಕ ದಾಳಿಯೊಂದಿಗೆ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು..

ಮೊದಲ ಮೂರು ಎಸೆತಗಳಲ್ಲಿ ಕೇವಲ ಹುನೈನ್ ಶಾ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ ನಾಲ್ಕನೇ ಎಸೆತದಲ್ಲಿ ಫಯೀಮ್ ಅಶ್ರಫ್ ವಿಕೆಟ್ ಕಬಳಿಸಿದರು. ಇನ್ನು 5ನೇ ಮತ್ತು 6ನೇ ಎಸೆತಗಳಲ್ಲಿ ನೀಡಿದ್ದು ಕೇವಲ 2 ರನ್​ ಮಾತ್ರ. ಈ ಮೂಲಕ ಕೊನೆಯ ಓವರ್​ನಲ್ಲಿ ಕೇವಲ 2 ರನ್​ಗಳ ರೋಚಕ ಜಯ ತಂದುಕೊಡುವ ಮೂಲಕ ಹೈದರಾಬಾದ್ ಕಿಂಗ್ಸ್​ಮೆನ್ ತಂಡವನ್ನು ಫೈನಲ್​ಗೇರಿಸಿದ್ದಾರೆ.

ಅದರಂತೆ ಫೈನಲ್ ಪಂದ್ಯವು ಮೇ 3 ರಂದು ನಡೆಯಲಿದ್ದು, ಅಂತಿಮ ಹಣಾಹಣಿಯಲ್ಲಿ ಬಾಬರ್ ಆಝಂ ನೇತೃತ್ವದ ಪೇಶಾವರ್ ಝಲ್ಮಿ ಹಾಗೂ ಮಾರ್ನಸ್ ಲಾಬುಶೇನ್ ಮುಂದಾಳತ್ವದ ಹೈದರಾಬಾದ್ ಕಿಂಗ್ಸ್​ಮೆನ್ ತಂಡಗಳು ಮುಖಾಮುಖಿಯಾಗಲಿದೆ.

Follow Us