Joe Biden : ಮತ್ತೆ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, ವೈರಲ್ಲಾಯ್ತು ವಿಡಿಯೋ

|

Updated on: Jun 02, 2023 | 9:29 AM

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಮತ್ತೆ ಎಡವಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಬೈಡನ್ ಎಡವಿ ಬಿದ್ದಿದ್ದಾರೆ.

Joe Biden : ಮತ್ತೆ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, ವೈರಲ್ಲಾಯ್ತು ವಿಡಿಯೋ
ಜೋ ಬೈಡನ್
Follow us on

ಅಮೆರಿಕ ಅಧ್ಯಕ್ಷ ಜೋ ಬೈಡನ್​(Joe Biden) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಮತ್ತೆ ಎಡವಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಬೈಡನ್ ಎಡವಿ ಬಿದ್ದಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಯುಎಸ್ ಏರ್ ಫೋರ್ಸ್​ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಜೋ ಬೈಡನ್ ಕಾಲು ಜಾರಿತ್ತು ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಕುಸಿದುಬಿದ್ದರು.

90 ನಿಮಿಷಗಳ ಕಾಲ ಕೆಡೆಟ್‌ಗಳನ್ನು ಅಭಿನಂದಿಸಿ ಪ್ರಮಾಣಪತ್ರಗಳನ್ನು ವಿತರಿಸಿದ ನಂತರ ಅವರು ತಮ್ಮ ಆಸನಕ್ಕೆ ತೆರಳಿದರು ಆದರೆ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾರೆ. 80 ವರ್ಷ ವಯಸ್ಸಿನ ಬೈಡನ್ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ. ಕೆಡೆಟ್‌ನೊಂದಿಗೆ ಕೈಕುಲುಕಿದ ನಂತರ ಬೈಡನ್ ಕುಸಿದುಬಿದ್ದರು, ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು.

ಇನ್ನೊಂದು ಹೆಜ್ಜೆ ಇಟ್ಟ ತಕ್ಷಣ ಎಡವಿ ಕೆಳಗೆ ಬಿದ್ದರು. ಬೈಡನ್ ಬಿದ್ದ ತಕ್ಷಣ, ಅವರು ಒಂದು ವಸ್ತುವನ್ನು ತೋರಿಸಿದರು. ಈ ವಸ್ತುವಿಗೆ ಕಾಲು ತಾಗಿ ಎಡವಿ ಕೆಳಗೆ ಬಿದ್ದಿದ್ದಾರೆ. ವೇದಿಕೆಯ ಮೇಲೆ ಸಣ್ಣ ಕಪ್ಪು ಮರಳಿನ ಚೀಲವನ್ನು ಹಾಕಲಾಗಿತ್ತು. ಜೋ ಬೈಡೆನ್ ಈ ಚೀಲದ ಮೇಲೆ ಮುಗ್ಗರಿಸಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗುತ್ತದೆ.

ಕಾಲು ಮುರಿದುಕೊಂಡಿದ್ದರು
2020 ರಲ್ಲಿ, ಬಿಡೆನ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುವಾಗ ಬಿದ್ದಾಗ ಅವನ ಕಾಲು ಮುರಿದುಕೊಂಡಿದ್ದರು.

ವಿಮಾನ ಏರುವಾಗ ಎಡವಿದ್ದರು
ಅದಾದ ಬಳಿಕ ಏರ್​ಫೋರ್ಸ್​ ಒನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬೀಳುವಂತಾದ ಘಟನೆ ನಡೆದಿತ್ತು. ಪೋಲೆಂಡ್​ಗೆ ತೆರಳುವ ನಿಟ್ಟಿನಲ್ಲಿ ಬೈಡನ್ ವಿಮಾನವೇರುತ್ತಿದ್ದರು, ಅದರ ವಿಡಿಯೋ ವೈರಲ್ ಆಗಿತ್ತು. ಎರಡು ವಾರಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಲಾಸ್​ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಅನುಭವ ಉಂಟಾಗಿತ್ತು.