ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!

| Updated By: ಸಾಧು ಶ್ರೀನಾಥ್​

Updated on: Aug 23, 2022 | 8:01 PM

Viral Video: ಇದು ಉಲ್ಟಾ ಝೂ! ಇದೊಂಥರಾ ವಿಚಿತ್ರ. ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ! ಎಲ್ಲಿ ಗೊತ್ತಾ? ಏನಿದರ ವಿಶೇಷತೆ.

ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!
ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!
Follow us on

ಈ ವನ್ಯಜೀವಿ ಮೃಗಾಲಯದಲ್ಲಿ ಮುಕ್ತವಾಗಿ ವಿಹರಿಸಲು ಪ್ರಾಣಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಮೃಗಾಲಯದಲ್ಲಿ ಮನುಷ್ಯರನ್ನು ಪಂಜರದಲ್ಲಿ ಇರಿಸಲಾಗಿದೆ! ಹುಲಿ, ಸಿಂಹ ಮತ್ತು ಕರಡಿಗಳಂತಹ ಕಾಡು ಪ್ರಾಣಿಗಳು ಪರಸ್ಪರ ಅಟ್ಟಿಸಿಕೊಂಡು ಹೋಗುವುದನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ.

ವೈರಲ್ ನ್ಯೂಸ್: ಸಿಂಹ, ಹುಲಿಗಳಂತಹ ಶಕ್ತಿಶಾಲಿ ಮತ್ತು ಕ್ರೂರ ಕಾಡುಪ್ರಾಣಿಗಳನ್ನು ಪಂಜರದಲ್ಲಿ ಬಂಧಿಸಿಡುವುದನ್ನು ನಾವು ಆಗಾಗ ನೋಡುತ್ತೇವೆ.. ಜನರ ಮನರಂಜನೆಗಾಗಿ ಮೃಗಾಲಯಗಳಿಗೆ ಬೀಗ ಹಾಕುವುದು ಮತ್ತು ಕೆಲವು ಸಂದರ್ಭಗಳಲ್ಲಿ ಪ್ರದರ್ಶನಕ್ಕೆ ಇಡುವುದು ಒಂದು ರೀತಿ ದುಃಖಕರ ಸಂಗತಿಯೆ. ಕಾಡಿನಲ್ಲಿ ಮುಕ್ತವಾಗಿ ವಿಹರಿಸುವ ಈ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ವಾಸ ಸ್ಥಾನಗಳಿಂದ ಸ್ಥಳಾಂತರಿಸಲಾಗುತ್ತದೆ ಮತ್ತು ಸೆರೆಯಲ್ಲಿ ಇರಿಸಲಾಗುತ್ತದೆ. ಆದಾಗ್ಯೂ, ಚೀನಾದಲ್ಲಿ ವಿಶಿಷ್ಟವಾದ ಮೃಗಾಲಯವಿದೆ. ಇಲ್ಲಿ ಪ್ರಾಣಿಗಳಲ್ಲ, ಆದರೆ ಮನುಷ್ಯರನ್ನೇ ಪಂಜರದಲ್ಲಿ ಇರಿಸಲಾಗುತ್ತದೆ. ಸಿಂಹ, ಹುಲಿಯಂತಹ ವನ್ಯಮೃಗಗಳು ಮನುಷ್ಯರನ್ನು ಕಂಡರೆ ವಿಚಿತ್ರವಾಗಿ ವರ್ತಿಸುವುದನ್ನು ಇಲ್ಲಿ ಕಾಣಬಹುದು.. ಇನ್ನು ಈ ಪ್ರಾಣಿ ಸಂಗ್ರಹಾಲಯದ ಸಂಪೂರ್ಣ ವಿವರಕ್ಕೆ ಹೋದರೆ…

ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಲೆಹೆ ಲೆಡು ವನ್ಯಜೀವಿ ಮೃಗಾಲಯವು ಪ್ರಾಣಿಗಳಿಗೆ ಮುಕ್ತವಾಗಿ ವಿಹರಿಸಲು ವ್ಯವಸ್ಥೆ ಮಾಡಿದೆ. ಆದರೆ ಈ ಮೃಗಾಲಯದಲ್ಲಿ ಜನರನ್ನು ಪಂಜರದಲ್ಲಿ ಬಂಧಿಸಲಾಗಿದೆ. ಹುಲಿ, ಸಿಂಹ ಮತ್ತು ಕರಡಿಗಳಂತಹ ಕಾಡು ಪ್ರಾಣಿಗಳನ್ನು ಅಟ್ಟಿಸಿಕೊಂಡು ಹೋಗುವುದನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಇದಕ್ಕಾಗಿ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಇದೆ. ಬ್ಯಾರಿಕೇಡ್ ಮಾಡಿದ ಟ್ರಕ್‌ನ ಬಾರ್‌ಗಳಿಗೆ ಹಸಿ ಮಾಂಸದ ಉಂಡೆಗಳನ್ನು ಕಟ್ಟಿರುತ್ತಾರೆ. ಸಂದರ್ಶಕರು ಅಂತಹ ಪ್ರಾಣಿಗಳನ್ನು ಹೆಚ್ಚು ಹತ್ತಿರದಿಂದ ನೋಡುವ ಅವಕಾಶವನ್ನು ಹೊಂದಿರುತ್ತಾರೆ. ಪ್ರಾಣಿಗಳು ಆಹಾರದ ನಿರೀಕ್ಷೆಯಲ್ಲಿ ಮನುಷ್ಯರು ಇರುವ ಪಂಜರಗಳತ್ತ ಸುಳಿಯುತ್ತವೆ. ಕೆಲವೊಮ್ಮೆ ಅವು ಮನುಷ್ಯರನ್ನು ಇರಿಸಲಾಗಿರುವ ಪಂಜರದ ಮೇಲೂ ಏರಿಬರುತ್ತವೆ.

ಈ ವೀಡಿಯೊವನ್ನು ತನ್ಸು ಯೆಗೆನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಮಾನವ ಮೃಗಾಲಯವಾಗಿದ್ದು, ಪ್ರಾಣಿಗಳು ಪಂಜರ ಸೇರಿರುವ ಅಪಾಯಕಾರಿ ಮನುಷ್ಯರನ್ನು ನೋಡಬಹುದು” ಎಂದು ಶೀರ್ಷಿಕೆ ನೀಡಲಾಯಿತು.

ಅಲ್ಲದೆ, ಈ ವಿಡಿಯೋ 8,27,000 ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು 5,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿಸಿದೆ. ಇನ್ನು ಒಬ್ಬ ನೆಟ್ಟಿಗರಂತೂ “ಇದು ಎಲ್ಲೆಡೆಯೂ ಹೀಗಿರಬೇಕು. ಅಸಲಿಗೆ ಪ್ರಾಣಿಗಳನ್ನೇ ಏಕೆ ಪಂಜರದಲ್ಲಿ ಇಡಲು ಬಯಸುತ್ತಾರೆ? ಎಂದಿದ್ದಾರೆ.

To read in Telugu click here