ಏನಿದು ಡ್ರೆಕೋನಿಯನ್ ಕಾನೂನು? ಅಥೆನ್ಸ್ನ ಕಾನೂನಿಗೆ ಈ ಹೆಸರು ಹೇಗೆ ಬಂತು?
ಡ್ರೆಕೋನಿಯನ್ ಕಾನೂನುಗಳು ಕ್ರಿಸ್ತಪೂರ್ವ 7 ನೇ ಶತಮಾನದಲ್ಲಿ ಪ್ರಾಚೀನ ಅಥೆನಿಯನ್ ಆಡಳಿತಗಾರ ಡ್ರಾಕೋ ಸ್ಥಾಪಿಸಿದ ಕಾನೂನು ಸಂಹಿತೆ. ಡ್ರಾಕೋನ ಕಾನೂನುಗಳು ಕಠಿಣ ಶಿಕ್ಷೆಗಳಿಗೆ ಹೆಸರುವಾಸಿಯಾಗಿದ್ದವು. ಸಣ್ಣ ಪುಟ್ಟ ಅಪರಾಧಗಳಿಗೂ ಇಲ್ಲಿ ಮರಣದಂಡನೆ ಶಿಕ್ಷೆ ಇರುತ್ತಿತ್ತು. ಪ್ರಾಚೀನ ಗ್ರೀಸ್‌ನಲ್ಲಿ ಕಾನೂನುಗಳನ್ನು ಕ್ರೋಡೀಕರಿಸುವ ಆರಂಭಿಕ ಪ್ರಯತ್ನಗಳಲ್ಲಿ ಕಾನೂನು ವ್ಯವಸ್ಥೆಗೆ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ತರುವ ಗುರಿಯನ್ನು ಹೊಂದಿರುವ ಈ ಕಾನೂನುಗಳು ಮಹತ್ವದ್ದಾಗಿವೆ. ಸೊಲೊನ್ ಪರಿಚಯಿಸಿದಂತಹ ಕಾನೂನು ವ್ಯವಸ್ಥೆಗಳಿಂದ ಬದಲಾಯಿಸಲ್ಪಡುವ ಮೊದಲು ಡ್ರೆಕೋನಿಯನ್ ಕಾನೂನುಗಳು ಗಮನಾರ್ಹ ಅವಧಿಯವರೆಗೆ ಜಾರಿಯಲ್ಲಿದ್ದವು. ಈ ಕಾನೂನಿನ ಬಗ್ಗೆ ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಯಾವುದೇ ಕಾನೂನು ಜಾರಿಗೊಳಿಸಿದಾಗ ಅದರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಆದರೆ ಕೆಲವೊಂದು ನಿಯಮ ಅಥವಾ ಕಾನೂನು ಇರುತ್ತದೆ, ಅದು ಕಠಿಣ ಕಾನೂನು. ಅಂದಹಾಗೆ ಸರ್ಕಾರ ಜಾರಿಗೆ ತರುವಯಾವುದೇ ಕಾನೂನು ಮಾನವ ಹಕ್ಕುಗಳನ್ನು ಉಲ್ಲಂಘಿಸಬಾರದು, ಹಾಗೇನಾದರೂ ಕಾನೂನು ಜಾರಿಯಾದರೆ ಇದೇನು ಡ್ರೆಕೋನಿಯನ್ ಕಾನೂನಾ? ಎಂದು ಕೇಳುತ್ತೇವೆ. ಹಾಗಾದರೆ ಡ್ರೆಕೋನಿಯನ್ ಕಾನೂನು ಎಂದರೆ ಏನು? ಈ ಹೆಸರು ಹೇಗೆ ಬಂತು? ಡ್ರೆಕೋನಿಯನ್ ಕಾನೂನು ರಚಿಸಿದವರು ಯಾರು? ಇತಿಹಾಸದ ಪುಟಗಳಲ್ಲಿ ಡ್ರೆಕೋನಿಯನ್ ಸಂವಿಧಾನವನ್ನು ಯಾವ ರೀತಿ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ನೋಡೋಣ. ಡ್ರೆಕೋನಿಯನ್ ಪದ ಹುಟ್ಟಿದ್ದು ಇಲ್ಲಿಂದ ‘ ಡ್ರೆಕೋನಿಯನ್ ‘ ಎಂಬ ಪದ ಹುಟ್ಟಿದ್ದು ಡ್ರೆಕೊ ಎಂಬ ವ್ಯಕ್ತಿಯಿಂದ. ಡ್ರಾಕೋ ಅಥವಾ ಡ್ರೆಕೋ ಎಂದಾಗ ಡ್ರಾಕುಲಾ ನೆನಪಾಗದೇ ಇರಲಿಕ್ಕಿಲ್ಲ. ಡ್ರೆಕೋ ಕೂಡಾ ಒಂಥರಾ ಭಯ ಹುಟ್ಟಿಸುವ ಆಡಳಿತಗಾರ. ಅಥೆನ್ಸ್ ಆಡಳಿತಗಾರನಾದ ಈತ ಕ್ರಿಸ್ತಪೂರ್ವ 621ರಲ್ಲಿ ಡ್ರೆಕೋನಿಯನ್ ಸಂವಿಧಾನವನ್ನು ಜಾರಿಗೆ ತಂದಿದ್ದ. ಈತ ಜಾರಿಗೆ ತಂದ ಹೆಚ್ಚಿನ ಕಾನೂನುಗಳು ಹೇಗಿದ್ದವು ಅಂದರೆ ಸಣ್ಣ ಕೃತ್ಯಗಳಿಗೂ ಮರಣದಂಡನೆ ವಿಧಿಸಲಾಗುತ್ತಿತ್ತು..ಸಣ್ಣ ಅಪರಾಧಗಳಿಗೆ ದಂಡ ವಿಧಿಸುವುದು ಯಾಕೆ ಎಂದು ಕೇಳಿದಾಗ “ಸಣ್ಣ ಅಪರಾಧಗಳನ್ನು ನಿಲ್ಲಿಸಲು ಮರಣದಂಡನೆ ಬೇಕು. ದೊಡ್ಡ ಅಪರಾಧಗಳಿಗೆ, ನಾನು ಯಾವುದೇ ಕಠಿಣ ಶಿಕ್ಷೆಯನ್ನು ಕಲ್ಪಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದನಂತೆ. ಅಂದರೆ ಯಾವುದೇ ಅತ್ಯಂತ ಕಠಿಣ ಕಾನೂನು ಅಥವಾ ದಯೆಯಿಲ್ಲದ ಇತರ ಕಠಿಣ ಕ್ರಮಗಳನ್ನು ನಿರೂಪಿಸುವುದಕ್ಕೆ ಡ್ರೆಕೋನಿಯನ್ ಎಂಬ ಪದವನ್ನು ಬಳಸಲಾಗುತ್ತದೆ. ಡ್ರೆಕೋನಿಯನ್ ಕಾನೂನು ಎಂದರೆ ಏನು? ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, “ಕಠಿಣ ಕಾನೂನುಗಳು, ಸರ್ಕಾರಿ ಕಾಯಿದೆಗಳು, ಇತ್ಯಾದಿಗಳು ವಿಪರೀತವಾಗಿ ಕಠಿಣವಾಗಿವೆ ಅಥವಾ ಅಗತ್ಯಕ್ಕಿಂತ...
Published On - 6:30 pm, Thu, 4 April 24