ಪ್ರಧಾನಿ ನರೇಂದ್ರಮೋದಿಯಲ್ಲಿ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಆನ್​​ಲೈನ್​​ನಲ್ಲಿ ನಿಂದನೆ; ಅಮೆರಿಕದ ಶ್ವೇತಭವನದಿಂದ ಖಂಡನೆ

|

Updated on: Jun 27, 2023 | 2:38 PM

ಅನೇಕ ಮಾನವ ಹಕ್ಕುಗಳ ಗುಂಪುಗಳು ಭಾರತದಲ್ಲಿ ತಾರತಮ್ಯ ಮತ್ತು ವಿಮರ್ಶಕರ ಮೌನದ ಬಗ್ಗೆ ಮಾತನಾಡುತ್ತವೆ. ನಿಮ್ಮ ದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನೀವು ಮತ್ತು ನಿಮ್ಮ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ? ಎಂದು ಸಿದ್ದಿಕಿ ಕೇಳಿದ್ದರು.

ಪ್ರಧಾನಿ ನರೇಂದ್ರಮೋದಿಯಲ್ಲಿ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಆನ್​​ಲೈನ್​​ನಲ್ಲಿ ನಿಂದನೆ; ಅಮೆರಿಕದ ಶ್ವೇತಭವನದಿಂದ ಖಂಡನೆ
ಸಬ್ರಿನಾ ಸಿದ್ದಿಕಿ
Follow us on

ದೆಹಲಿ: ಕಳೆದ ವಾರ ಅಮೆರಿಕಅಧ್ಯಕ್ಷ ಜೋ ಬೈಡನ್ (Joe Biden) ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದ  ವಾಲ್ ಸ್ಟ್ರೀಟ್ ಜನರಲ್ (Wall Street Journal) ವರದಿಗಾರ್ತಿ ಸಬ್ರಿನಾ ಸಿದ್ದಿಕಿ (Sabrina Siddiqui) ಮೇಲೆ ತೀವ್ರ ಆನ್‌ಲೈನ್ ಕಿರುಕುಳ ನಡೆದಿದ್ದು ಇದನ್ನು ಶ್ವೇತಭವನ ಖಂಡಿಸಿದೆ. ಆ ಕಿರುಕುಳದ ವರದಿಗಳ ಬಗ್ಗೆ ಶ್ವೇತಭವನಕ್ಕೆ ತಿಳಿದಿದೆ ಎಂದು ಉನ್ನತ ಅಧಿಕಾರಿ ಜಾನ್ ಕಿರ್ಬಿ ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಅವರು ಈ ಪ್ರಶ್ನೆಯನ್ನು ಕೇಳಿದಾಗಿನಿಂದ, ಸಿದ್ದಿಕಿ ಅವರ ಮೇಲೆ ಭಾರತದಲ್ಲಿರುವ ಕೆಲವು ಜನರು ಆನ್ ಲೈನ್ ನಲ್ಲಿ ತೀವ್ರ ಕಿರುಕುಳ ನೀಡಿದ್ದಾರೆ. ಆಕೆ ಮುಸ್ಲಿಂ ಆಗಿದ್ದರಿಂದ ಆಕೆಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಪತ್ರಿಕೆ ಹೇಳಿದೆ.

ಇದು ಸ್ವೀಕಾರಾರ್ಹವಲ್ಲ.ಯಾವುದೇ ಸಂದರ್ಭಗಳಲ್ಲಿ ಎಲ್ಲಿಯೇ ಆದರೂ ಪತ್ರಕರ್ತರಿಗೆ ಯಾವುದೇ ಕಿರುಕುಳವನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕರಾಗಿರುವ ಕಿರ್ಬಿ ಹೇಳಿದ್ದಾರೆ.

ಕಿರ್ಬಿ ಅವರ ಹೇಳಿಕೆಯ ನಂತರ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ವೇದಿಕೆಗೆ ಹೋಗಿ ಜಾನ್ ಹೇಳಿದ್ದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ.ನಾವು ಖಂಡಿತವಾಗಿಯೂ ಈ ಆಡಳಿತದ ಅಡಿಯಲ್ಲಿ ಶ್ವೇತಭವನದಲ್ಲಿದ್ದೇವೆ. ನಾವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದೇವೆ. ಅದಕ್ಕಾಗಿಯೇ ನಾವು ಕಳೆದ ವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ್ದೇವೆ. ಹಾಗಾಗಿ ಜನರಿಗೆ ನೆನಪಿಸಲು ಬಯಸುತ್ತೇನೆ. ಅದಕ್ಕಾಗಿಯೇ ನಾವು ಕಳೆದ ವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ್ದೇವೆ. ಅಲ್ಲದೆ, ಯಾವುದೇ ಪತ್ರಕರ್ತರಿಗೆ ಬೆದರಿಕೆ ಅಥವಾ ಕಿರುಕುಳದ ಯಾವುದೇ ಪ್ರಯತ್ನಗಳನ್ನು ನಾವು ಖಂಡಿತವಾಗಿಯೂ ಖಂಡಿಸುತ್ತೇವೆ. ಅವರು ತಮ್ಮ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.


ಗುರುವಾರ ಅಧ್ಯಕ್ಷ ಬೈಡನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿದ್ದಿಕಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಿಎಂ ಮೋದಿ, ತಮ್ಮ ಸರ್ಕಾರವು ಸಂವಿಧಾನವನ್ನು ಅನುಸರಿಸಿರುವುದರಿಂದ ಭಾರತದಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಅನೇಕ ಮಾನವ ಹಕ್ಕುಗಳ ಗುಂಪುಗಳು ಭಾರತದಲ್ಲಿ ತಾರತಮ್ಯ ಮತ್ತು ವಿಮರ್ಶಕರ ಮೌನದ ಬಗ್ಗೆ ಮಾತನಾಡುತ್ತವೆ. ನಿಮ್ಮ ದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನೀವು ಮತ್ತು ನಿಮ್ಮ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ? ಎಂದು ಸಿದ್ದಿಕಿ ಕೇಳಿದ್ದರು.

ನೀವು ಹೇಳಿದ್ದಕ್ಕೆ ನನಗೆ ಆಶ್ಚರ್ಯವಾಗಿದೆ. ನಮ್ಮದು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವವು ನಮ್ಮ ಆತ್ಮದಲ್ಲಿದೆ ಮತ್ತು ನಮ್ಮ ರಕ್ತನಾಳಗಳಲ್ಲಿ ಹರಿಯುತ್ತದೆ. ನಾವು ಪ್ರಜಾಪ್ರಭುತ್ವವನ್ನು ಬದುಕುತ್ತೇವೆ ಮತ್ತು ಉಸಿರಾಡುತ್ತೇವೆ. ಅದು ನಮ್ಮ ಸಂವಿಧಾನದಲ್ಲಿದೆ  ಎಂದು ಪ್ರಧಾನಿ ಉತ್ತರಿಸಿದ್ದರು.

ಮಾನವೀಯ ಮೌಲ್ಯಗಳು ಮತ್ತು ಮಾನವ ಹಕ್ಕುಗಳು ಇಲ್ಲದಿದ್ದರೆ, ಪ್ರಜಾಪ್ರಭುತ್ವವಿಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಜೀವಿಸಿದಾಗ, ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಧರ್ಮ, ಜಾತಿ, ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಸೌಲಭ್ಯಗಳು ಲಭ್ಯವಿರುತ್ತವೆ ಎಂದಿದ್ದರು.

ಇದನ್ನೂ ಓದಿ: My India My Life Goals: ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಜನತೆಗೆ ಪ್ರಧಾನಿ ಮೋದಿ ಸಂದೇಶ

ಪ್ರಧಾನಿ ಮೋದಿಯವರಲ್ಲಿ ಪತ್ರಕರ್ತೆ ಕೇಳಿದ ಈ ಪ್ರಶ್ನೆಗೆ ಆನ್​​ಲೈನ್​​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಿದ್ದಿಕಿ, ಆನ್‌ಲೈನ್‌ನಲ್ಲಿ ತನ್ನ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, ಭಾರತದಲ್ಲಿ ಜನಿಸಿದ ತನ್ನ ತಂದೆಯೊಂದಿಗೆ ಟೀಮ್ ಇಂಡಿಯಾ ಟೀ ಶರ್ಟ್ ಧರಿಸಿ ಕ್ರಿಕೆಟ್ ತಂಡಕ್ಕಾಗಿ ಹುರಿದುಂಬಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ನನ್ನ ವೈಯಕ್ತಿಕ ಹಿನ್ನೆಲೆಯನ್ನು ಕೆದಕಿ ಪಾಯಿಂಚ್ ಮಾಡಿರುವುದರಿಂದ ಇದಕ್ಕೆ ಉತ್ತರಿಸಲೇಬೇಕಿದೆ. ಕೆಲವೊಮ್ಮೆ ಐಡೆಂಟಿಟಿ ತೋರುತ್ತಿರುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿರುತ್ತವೆ ಎಂದು ಸಿದ್ದಿಕಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:31 pm, Tue, 27 June 23