ಸೋನಿಕ್ ಬೂಮ್, ಭೂಕಂಪ, ಸುನಾಮಿ ಅಲೆಗಳು: ಟೊಂಗಾ ಜ್ವಾಲಾಮುಖಿ ಸ್ಫೋಟ ಸಣ್ಣ ಘಟನೆ ಅಲ್ಲ ಯಾಕೆ?

| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2022 | 12:51 PM

Tonga Volcanic Eruption ಈ ರೀತಿಯ ಸ್ಫೋಟವು ಸಮುದ್ರದ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯಲ್ಲಿ ಸಂಭವಿಸುತ್ತದೆ. ಅಂದಾಜು ಒಂದು ಮಿಲಿಯನ್ ನಷ್ಟು ಜ್ವಾಲಾಮುಖಿಗಳು ಸಮುದ್ರದೊಳಗಿವೆ. ಅವುಗಳಲ್ಲಿ ಹೆಚ್ಚಿನವು ಟೆಕ್ಟೋನಿಕ್ ಪ್ಲೇಟ್‌ಗಳ ಬಳಿ ಇವೆ.

ಸೋನಿಕ್ ಬೂಮ್, ಭೂಕಂಪ, ಸುನಾಮಿ ಅಲೆಗಳು: ಟೊಂಗಾ ಜ್ವಾಲಾಮುಖಿ ಸ್ಫೋಟ ಸಣ್ಣ ಘಟನೆ ಅಲ್ಲ ಯಾಕೆ?
ಸಮುದ್ರದಡಿಯಲ್ಲಿ ಜ್ವಾಲಾಮುಖಿ ಸ್ಫೋಟ (ಉಪಗ್ರಹ ಚಿತ್ರ)
Follow us on

ವೆಲ್ಲಿಂಗ್ಟನ್: ಟೊಂಗಾದ (Tonga) ದಕ್ಷಿಣ ಪೆಸಿಫಿಕ್ ದ್ವೀಪದಲ್ಲಿರುವ ಹಂಗಾ ಟೊಂಗಾ ಹಂಗಾ ಹಾಪೈ (Hunga Tonga Hunga Ha’apai )ಜ್ವಾಲಾಮುಖಿ ಸ್ಫೋಟವು ಸಣ್ಣ ಘಟನೆಯಾಗಿರಲಿಲ್ಲ. ಇದು ಪೆಸಿಫಿಕ್ ಸುತ್ತ ಸುನಾಮಿ ಅಲೆಗಳನ್ನು ಪ್ರಚೋದಿಸಿತು ಮತ್ತು ಟೊಂಗಾವನ್ನು ಧೂಳಿನಲ್ಲಿ ಮುಳುಗಿಸಿತು. ಶನಿವಾರದ ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಅದು ಪ್ರಪಂಚದಾದ್ಯಂತ ದಾಖಲಾಗಿದೆ ಮತ್ತು ಗ್ರಹದ ಸುತ್ತ ಎರಡು ಬಾರಿ ಒತ್ತಡದ ಆಘಾತವನ್ನು ಕಳುಹಿಸಿತು. ನೈಸರ್ಗಿಕ ಘಟನೆಯ ಬಗ್ಗೆ ಹೆಚ್ಚು ಹೆಚ್ಚು ವಿವರಗಳು ಹೊರಹೊಮ್ಮುತ್ತಿದ್ದಂತೆ, ಜ್ವಾಲಾಮುಖಿ ಸ್ಫೋಟ ಎಂದರೇನು ಮತ್ತು ಟೊಂಗಾದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಜಾಗತಿಕ ಪ್ರಭಾವದ ಬಗ್ಗೆ  ಒಂದು ನೋಟ ಇಲ್ಲಿದೆ. ನಾವು ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ಮಾತನಾಡುವ ಮೊದಲು, ಜ್ವಾಲಾಮುಖಿ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಜ್ವಾಲಾಮುಖಿಯು ಭೂಮಿಯ ಮೇಲ್ಮೈಯಲ್ಲಿ ಒಂದು ತೆರೆಯುವಿಕೆ ಅಥವಾ ಛಿದ್ರವಾಗಿದ್ದು ಅದು ಮಾಗ್ಮಾವನ್ನು ಹೊರಸೂಸುತ್ತದೆ. ಮಾಗ್ಮಾ – ಇದು ಬಿಸಿ ದ್ರವ ಮತ್ತು ಅರೆ-ದ್ರವ ಬಂಡೆಯಾಗಿ ಹೊರಬರುತ್ತದೆ. ಈ ವೇಳೆ ಜ್ವಾಲಾಮುಖಿ ಬೂದಿ ಮತ್ತು ಅನಿಲಗಳು ಹೊರ ಬರುತ್ತವೆ. ಜ್ವಾಲಾಮುಖಿ ಹಾಟ್‌ಸ್ಪಾಟ್‌ಗಳು ಭೂಮಿಯ ಟೆಕ್ಟೋನಿಕ್ ಪ್ಲೇಟ್‌ಗಳು ಒಟ್ಟಿಗೆ ಸೇರುವ ಸ್ಥಳಗಳಾಗಿವೆ.  ಜ್ವಾಲಾಮುಖಿಯಿಂದ ಲಾವಾ ಮತ್ತು ಅನಿಲವನ್ನು ಬಿಡುಗಡೆ ಮಾಡಿದಾಗ ಜ್ವಾಲಾಮುಖಿ ಉಂಟಾಗುತ್ತಿದ್ದು ಇದು ಕೆಲವೊಮ್ಮೆ ಸ್ಫೋಟವಾಗುತ್ತದೆ.


ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟ

ಈ ರೀತಿಯ ಸ್ಫೋಟವು ಸಮುದ್ರದ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯಲ್ಲಿ ಸಂಭವಿಸುತ್ತದೆ. ಅಂದಾಜು ಒಂದು ಮಿಲಿಯನ್ ನಷ್ಟು ಜ್ವಾಲಾಮುಖಿಗಳು ಸಮುದ್ರದೊಳಗಿವೆ. ಅವುಗಳಲ್ಲಿ ಹೆಚ್ಚಿನವು ಟೆಕ್ಟೋನಿಕ್ ಪ್ಲೇಟ್‌ಗಳ ಬಳಿ ಇವೆ.
ಲಾವಾದ ಹೊರತಾಗಿ ಈ ರಂಧ್ರಗಳು ಬೂದಿಯನ್ನು ಸಹ ಹೊರಹಾಕುತ್ತವೆ. ಇವುಗಳು ಸಮುದ್ರದ ತಳದಲ್ಲಿ ರಾಶಿಯಾಗಿದ್ದು ಸಮುದ್ರದ ದಿಬ್ಬಗಳ ರಚನೆಗೆ ಕಾರಣವಾಗುತ್ತವೆ. ಸಾಗರ ತಳದಲ್ಲಿ ರೂಪುಗೊಂಡ ನೀರೊಳಗಿನ ಪರ್ವತಗಳು ಇವುಗಳಾಗಿದ್ದು ನೀರಿನ ಮೇಲ್ಮೈಯನ್ನು ತಲುಪುವುದಿಲ್ಲ.

ಭೂಮಿಯ ಮೇಲೆ ಎಷ್ಟು ಸಕ್ರಿಯ ಜ್ವಾಲಾಮುಖಿಗಳಿವೆ?

ಯುಎಸ್​​ಜಿಎಸ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1,350 ಸಂಭಾವ್ಯ ಸಕ್ರಿಯ ಜ್ವಾಲಾಮುಖಿಗಳಿವೆ. ಯುಎಸ್​​ಜಿಎಸ್​​ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅವುಗಳಲ್ಲಿ ಸುಮಾರು 500 ಸ್ಫೋಟಗೊಂಡಿವೆ. ಅವುಗಳಲ್ಲಿ ಹಲವು “ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುವ ಪೆಸಿಫಿಕ್ ರಿಮ್‌ನಲ್ಲಿವೆ.

ಭೂಮಿಯ ಹವಾಮಾನದ ಮೇಲೆ ಜ್ವಾಲಾಮುಖಿ ಸ್ಫೋಟದ ಪರಿಣಾಮ

ಸಲ್ಫರ್ ಡೈಆಕ್ಸೈಡ್ ಅನ್ನು ವಾಯುಮಂಡಲಕ್ಕೆ ಪಂಪ್ ಮಾಡುವುದರಿಂದ ಬೃಹತ್ ಜ್ವಾಲಾಮುಖಿ ಸ್ಫೋಟಗಳು ಕೆಲವೊಮ್ಮೆ ತಾತ್ಕಾಲಿಕ ಜಾಗತಿಕ ತಂಪಾಗಿಸುವಿಕೆಗೆ ಕಾರಣವಾಗಬಹುದು. ಆದರೆ ಟೊಂಗಾ ಸ್ಫೋಟದ ಸಂದರ್ಭದಲ್ಲಿ ಆರಂಭಿಕ ಉಪಗ್ರಹ ಮಾಪನಗಳು ಬಿಡುಗಡೆಯಾದ ಸಲ್ಫರ್ ಡೈಆಕ್ಸೈಡ್ ಪ್ರಮಾಣವು ಬಹುಶಃ 0.01 ಸೆಲ್ಸಿಯಸ್ (0.02 ಫ್ಯಾರನ್‌ಹೀಟ್) ಜಾಗತಿಕ ಸರಾಸರಿ ತಂಪಾಗುವಿಕೆಯ ಸಣ್ಣ ಪರಿಣಾಮವನ್ನು ಹೊಂದಿರುತ್ತದೆ ಎಂದು ರಟ್ಜರ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲನ್ ರೊಬಾಕ್ ಹೇಳಿದ್ದಾರೆ.

ಟಾಂಗಾದಲ್ಲಿ ಏನಾಯಿತು?

ಉಪಗ್ರಹ ಚಿತ್ರಗಳು ಶನಿವಾರ ಸಂಜೆ ಸಮುದ್ರದೊಳಗಿನ ಸ್ಫೋಟವನ್ನು ತೋರಿಸಿದವು, ಬೂದಿ, ಉಗಿ ಮತ್ತು ಅನಿಲ ದಕ್ಷಿಣ ಪೆಸಿಫಿಕ್ ನೀರಿನ ಮೇಲೆ ದೈತ್ಯ ಅಣಬೆಯಂತೆ ಏರುತ್ತಿವೆ. ಅಲಾಸ್ಕಾದ ದೂರದವರೆಗೆ ದೊಡ್ಡ ಸದ್ದು ಕೇಳಿಸಿತು. ಸ್ಫೋಟವು ವಾತಾವರಣದ ಒತ್ತಡವನ್ನು ಬದಲಿಸಿದೆ ಎಂದು ಕೆಲವು ಹವಾಮಾನ ತಜ್ಞರು ಹೇಳಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನ ಸಿಯಾಟಲ್‌ನಲ್ಲಿ ಮಂಜನ್ನು ತೆರವುಗೊಳಿಸಲು  ಸಹಾಯ ಮಾಡಿರಬಹುದು.

ಸುಮಾರು 80 ಸೆಂಟಿಮೀಟರ್‌ಗಳಷ್ಟು (2.7 ಅಡಿ) ಸುನಾಮಿ ಅಲೆಗಳು ಟೊಂಗಾದ ತೀರಕ್ಕೆ ಅಪ್ಪಳಿಸಿತು. ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್, ಟೊಂಗಾದ ತೀರದಲ್ಲಿ ದೋಣಿಗಳು ಮತ್ತು ಅಂಗಡಿಗಳಿಗೆ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದರು.  ಅಲೆಗಳು ಪೆಸಿಫಿಕ್ ಅನ್ನು ದಾಟಿ, ಪೆರುವಿನಲ್ಲಿ ಇಬ್ಬರನ್ನು ಮುಳುಗಿಸಿತು. ನ್ಯೂಜಿಲೆಂಡ್‌ನಿಂದ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್‌ಗೆ ಸಣ್ಣ ಹಾನಿಯನ್ನುಂಟುಮಾಡಿತು. 5.8 ತೀವ್ರತೆಯ ಭೂಕಂಪಕ್ಕೆ ಸಮನಾದ ಸ್ಫೋಟವು ಉಂಟಾಯಿತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಂದಾಜಿಸಿದೆ.

ಇದನ್ನೂ ಓದಿ:  ಸಮುದ್ರದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ: 20 ಕಿಮೀಗಳಷ್ಟು ದೂರ ಹರಡಿದ ಅನಿಲ

Published On - 12:41 pm, Mon, 17 January 22