AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrs World 2022: ಬೆಸ್ಟ್ ನ್ಯಾಷನಲ್​​ ಕಾಸ್ಟ್ಯೂಮ್​ ಪ್ರಶಸ್ತಿ ಗೆದ್ದ ಮಿಸೆಸ್​ ವರ್ಲ್ಡ್​ 2022 ಸ್ಪರ್ಧಿ ನವದೀಪ್​ ಕೌರ್​

2021ರಲ್ಲಿ ಮಿಸಸ್​ ಇಂಡಿಯಾ ಪಟ್ಟವನ್ನು ಗೆದ್ದು ಬೀಗಿದ್ದ ನವದೀಪ್​ ಕೌರ್​ ಅವರು  2022 ರ ಮಿಸಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಇದೀಗ ಸ್ಪರ್ಧೆಯಲ್ಲಿ ಅತ್ಯುತ್ತಮ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದು, ಮಿಸಸ್​ ವರ್ಲ್ಡ್​ ಪಟ್ಟವನ್ನೂ ಗೆಲ್ಲುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

Mrs World 2022: ಬೆಸ್ಟ್ ನ್ಯಾಷನಲ್​​ ಕಾಸ್ಟ್ಯೂಮ್​ ಪ್ರಶಸ್ತಿ ಗೆದ್ದ ಮಿಸೆಸ್​ ವರ್ಲ್ಡ್​ 2022 ಸ್ಪರ್ಧಿ ನವದೀಪ್​ ಕೌರ್​
ನವದೀಪ್​ ಕೌರ್​
TV9 Web
| Updated By: Digi Tech Desk|

Updated on:Jan 17, 2022 | 9:38 AM

Share

2021ರ ಮಿಸೆಸ್ ಇಂಡಿಯಾ ಪಟ್ಟ ಗೆದ್ದು ಲಾಸ್​ ವೇಗಾಸ್​ನಲ್ಲಿ ನಡೆಯುತ್ತಿರುವ ಮಿಸೆಸ್​ ವರ್ಲ್ಡ್​ 2022ರ ಸ್ಪರ್ಧೆಗೆ ಆಯ್ಕೆಯಾಗಿರುವ ಭಾರತದ ನವದೀಪ್​ ಕೌರ್​ ಮಿಸೆಸ್​ ವರ್ಲ್ಡ್ ಸ್ಪರ್ಧೆಯಲ್ಲಿ ನಡೆದ ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​​ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಕುಂಡಲಿನಿ ಚಕ್ರದ ವೇಷಭೂಷಣ ಧರಿಸಿ ಪ್ರಶಸ್ತಿ ಗೆದ್ದಿದ್ದಾರೆ.  ಈ ವಸ್ತ್ರವಿನ್ಯಾಸವನ್ನು ಕಲಾವಿದ ಎಗ್ಗಿ ಜಾಸ್ಮಿನ್ ಕೌರ್​ ವಿನ್ಯಾಸಗೊಳಿಸಿದ್ದಾರೆ. ಈ ವಿಶೇಷ ವಸ್ತ್ರ ವಿನ್ಯಾಸವನ್ನು ಧರಿಸಿದ ಫೋಟೋವನ್ನು ನವದೀಪ್​ ಕೌರ್​ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್​ ಮಾಡಿದ ಅವರು ಉಡುಗೆಯ ಬಗ್ಗೆ ಚಕ್ರವು ತಲೆಯ ಮೇಲೆ ಧರಿಸಿದ ಕಿರೀಟದ ಬುಡದಿಂದ ಬೆನ್ನುಮೂಳೆಯವರೆಗೆ ದೇಹದ ಶಕ್ತಿಯ ಚಲನೆಯನ್ನು ಸಂಕೇತಿಸುತ್ತದೆ ಎಂದು ತಮ್ಮ ಉಡುಪಿನ ಅರ್ಥವನ್ನು ಹೇಳಿದ್ದಾರೆ. ನವದೀಪ್​ ಕವರ್​ ಅವರು ಧರಿಸಿರುವ ಚಿನ್ನದ ವೇಷಭೂಷಣದಲ್ಲಿ ದೈತ್ಯಾಕಾರದ ಸರ್ಪದ ಆಕೃತಿಯನ್ನು ತಲೆಯ ಇಟ್ಟುಕೊಂಡಿರುವುದನ್ನು ಕಾಣಬಹದು. ಜತೆಗೆ ಹಾವಿನ ಬೆತ್ತದ ಜೊತೆಗೆ ಚಿನ್ನದ ಬಣ್ಣದಲ್ಲಿ ಉಡುಗೆಯನ್ನು ಧರಿಸಿದ್ದಾರೆ.

ಮಿಸೆಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ವೇಷಭೂಷಣ ರೌಂಡ್​ನಲ್ಲಿ ಕುಂಡಲಿನಿ ಚಕ್ರದ ಉಡುಪನ್ನು ನವದೀಪ್​ ಕೌರ್​ ಧರಿಸಿದ್ದಾರೆ. ಕುಂಡಲಿನಿ ಚಕ್ರ ಮಾನವನ ದೇಹದ ವಿವಿಧ ಸಕಾರಾತ್ಮಕ ಗುಣಗಳನ್ನು ಪ್ರಚೋದಿಸುತ್ತದೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಅವರು ಅಧಿಕೃತ ಇನ್ಸ್ಟಾಗ್ರಾಮ್​  ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಯಾವುದೆ ಪ್ಯಾಷನ್​ ಜಗತ್ತಿನ ಹಿನ್ನಲೆಯಿಲ್ಲದೆ  ಬಂದ ನವದೀಪ್​ ಒಡಿಶಾ, ಮೂಲದ ರೋರ್ಕೆಲಾದವರು. 2021ರಲ್ಲಿ ಮಿಸಸ್​ ಇಂಡಿಯಾ ಪಟ್ಟವನ್ನು ಗೆದ್ದು ಬೀಗಿದ್ದ ನವದೀಪ್​ ಕೌರ್​ ಅವರು  2022ರ ಮಿಸಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಇದೀಗ ಸ್ಪರ್ಧೆಯಲ್ಲಿ ಅತ್ಯುತ್ತಮ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದು, ಮಿಸಸ್​ ವರ್ಲ್ಡ್​ ಪಟ್ಟವನ್ನೂ ಗೆಲ್ಲುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

21

ಇದನ್ನೂ ಓದಿ:

ಆಸ್ಕರ್​ ಸಮಾರಂಭ ನಿರೂಪಣೆ ಮಾಡ್ತಾರಾ ಸೆಲೆನಾ ಗೊಮೆಜ್​? ಕೇಳಿಬರ್ತಿವೆ ಹಲವರ ಹೆಸರು​

Published On - 6:26 pm, Sun, 16 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ