ಮಹಿಳೆಯ ಅಂಡಾಶಯದಲ್ಲಿ 10 ಕೆಜಿ ತೂಕದ ಗಡ್ಡೆ, ಅದರ ಮೇಲೆ ಕೂದಲು-ಹಲ್ಲು; ಭಯಾನಕ ಅನುಭವ ಬಿಚ್ಚಿಟ್ಟ ನರ್ಸ್​

| Updated By: Lakshmi Hegde

Updated on: Mar 20, 2022 | 11:11 AM

ಟೆಕ್ಸಾಸ್​​ನ ನರ್ಸ್​ ಆಗಿರುವ ಜೈಮಿ ಕಾನ್ವೆಲ್​,  ತಜ್ಞರು, ಪರಿಣತರ ಸಲಹೆ ಪಡೆದುಕೊಂಡೇ  ಡಯಟ್​ ಮಾಡುತ್ತಿದ್ದರು. ಆದರೆ ಎರಡು ವರ್ಷ ಡಯಟ್​ ಮಾಡಿದರೂ ದೇಹದಲ್ಲಿ ಬದಲಾವಣೆ ಆಗಲಿಲ್ಲ. ಅದರ ಬದಲಿಗೆ ಆರೋಗ್ಯ ಸಮಸ್ಯೆ ಶುರುವಾಯಿತು.

ಮಹಿಳೆಯ ಅಂಡಾಶಯದಲ್ಲಿ 10 ಕೆಜಿ ತೂಕದ ಗಡ್ಡೆ, ಅದರ ಮೇಲೆ ಕೂದಲು-ಹಲ್ಲು; ಭಯಾನಕ ಅನುಭವ ಬಿಚ್ಚಿಟ್ಟ ನರ್ಸ್​
ಸರ್ಜರಿಗೆ ಒಳಗಾದ ಯುವತಿ
Follow us on

ಮನುಷ್ಯನ ದೇಹದಲ್ಲಿ ಅದೆಂತೆಂತಾ ಆರೋಗ್ಯ ಸಮಸ್ಯೆ (Health Problems) ಕಾಣಿಸಿಕೊಳ್ಳುತ್ತದೆಯೋ ದೇವರೇ ಬಲ್ಲ. ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತ ವಿಚಿತ್ರ ಕಾಯಿಲೆಗಳೂ ಈಗೀಗ ಹೆಚ್ಚಾಗಿವೆ. ಅಂತೆಯೇ, ಇಲ್ಲೊಬ್ಬರು 28 ವರ್ಷದ ಯುವತಿಯೂ ಕೂಡ ಇದುವರೆಗೆ ಕೇಳಿರದ ಸಮಸ್ಯೆಗೆ ತುತ್ತಾಗಿದ್ದಾರೆ. ಈಕೆ ದಪ್ಪಗಿದ್ದ ಕಾರಣ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರು. ತುಂಬ ದಿನಗಳಿಂದ ತೂಕ ಇಳಿಸಲು ಅಗತ್ಯ ಡಯಟ್​​ ಮಾಡುತ್ತಿದ್ದರು. ಕೊನೆಗಂತೂ ಕೆಟೋ ಡಯಟ್​​ಗೆ ಮೊರೆ ಹೋದರು. ಪ್ರತಿ ದಿನ ಎರಡು ಬಾರಿ ಭರ್ಜರಿ ವರ್ಕೌಟ್​ ಮಾಡುತ್ತಿದ್ದರು. ಇಷ್ಟೆಲ್ಲ ಆಗಿಯೂ ಕೂಡ ಏನೂ ಪ್ರಯೋಜನ ಆಗದಿದ್ದಾಗ ವೈದ್ಯರ ಬಳಿ ದೇಹ ತಪಾಸಣೆ ಮಾಡಿಸಿದರು. ಆಗ ಆಕೆಯ ಅಂಡಾಶಯದಲ್ಲಿ (Ovary) 10 ಕೆಜಿ ತೂಕದ ಗಡ್ಡೆಯೊಂದು ಬೆಳೆಯುತ್ತಿರುವುದು ಗೊತ್ತಾಯಿತು. ಆ ಗಡ್ಡೆ ಕೂಡ ವಿಚಿತ್ರವಾಗಿತ್ತು, ಅದರ ಮೇಲೆ ಕೂದಲು, ಹಲ್ಲುಗಳೆಲ್ಲ ಬೆಳೆದಿದ್ದವು !

ಟೆಕ್ಸಾಸ್​​ನ ನರ್ಸ್​ ಆಗಿರುವ ಜೈಮಿ ಕಾನ್ವೆಲ್​,  ತಜ್ಞರು, ಪರಿಣತರ ಸಲಹೆ ಪಡೆದುಕೊಂಡೇ  ಡಯಟ್​ ಮಾಡುತ್ತಿದ್ದರು. ಆದರೆ ಎರಡು ವರ್ಷ ಡಯಟ್​ ಮಾಡಿದರೂ ದೇಹದಲ್ಲಿ ಬದಲಾವಣೆ ಆಗಲಿಲ್ಲ. ಅದರ ಬದಲಿಗೆ ಆರೋಗ್ಯ ಸಮಸ್ಯೆ ಶುರುವಾಯಿತು. ಕೊನೆಗಂತೂ ವಾಕರಿಕೆಯಂತಹ ಲಕ್ಷಣವೂ ಕಾಣಿಸಿಕೊಳ್ಳತೊಡಗಿತು. 2021ರ ಮಾರ್ಚ್​​ನಲ್ಲಿ ಆಕೆ ವೈದ್ಯರ ಬಳಿ ಹೋದಳು.  ಆಗ ಆಕೆಯ ಇಡೀ ದೇಹವನ್ನು ಸ್ಕ್ಯಾನ್​ ಮಾಡಿದಾಗ ಬಲಭಾಗದ ಅಂಡಾಶಯದಲ್ಲಿ ಸುಮಾರು 10 ಕೆಜಿ ತೂಕದ ಗಡ್ಡೆ ಇರುವುದು  ಗೊತ್ತಾಯಿತು. ಈ ಗಡ್ಡೆ ಕಳೆದ ಹಲವು ವರ್ಷಗಳಿಂದಲೂ ಆಕೆಯ ದೇಹದಲ್ಲಿ ಬೆಳೆಯುತ್ತಲೇ ಇದೆ ಎಂಬುದನ್ನೂ  ವೈದ್ಯರು ಪತ್ತೆ ಹಚ್ಚಿದೆ. ತಡ ಮಾಡದೆ ವೈದ್ಯರು ಆ ಗಡ್ಡೆಯನ್ನು ಸರ್ಜರಿ ಮೂಲಕ ಹೊರತೆಗೆದಿದ್ದಾರೆ. ಗಡ್ಡೆ ಹೊರ ಬೀಳುತ್ತಿದ್ದಂತೆ ಜೈಮಿ ತೂಕ 46 ಕೆಜಿಗೆ ಇಳಿದಿದೆ.

ಲಕ್ಷಣಗಳು ಏನಿತ್ತು?
ತನ್ನ ಅನುಭವವನ್ನು ಜೈಮಿ ಹೇಳಿಕೊಂಡಿದ್ದಾರೆ. ತುಂಬ ತೂಕವಿದ್ದ ಕಾರಣ ಅದನ್ನು ಇಳಿಸಿಕೊಳ್ಳಲು ಡಯಟ್ ಮಾಡಿದೆ. ಆದರೆ ಎರಡು ವರ್ಷವಾದರೂ ಪ್ರಯೋಜನ ಆಗಲಿಲ್ಲ. ನಾನು ನನ್ನ ಶೂ ಹಾಕಿಕೊಳ್ಳಲು ಬಾಗಿದರೂ ವಾಂತಿ ಬಂದ ಹಾಗೆ ಆಗುತ್ತಿತ್ತು. ಕೊನೆಗೆ ಯಾಕೋ ಅನುಮಾನ ಬಂದು ನಾನು ಕೆಂಪುರಕ್ತಕಣ ಮತ್ತು ಬಿಳಿ ರಕ್ತಕಣ ಕೌಂಟ್​ ಚೆಕ್​ ಮಾಡಿಸಿದೆ. ಅದರಲ್ಲಿ ಡಬ್ಲ್ಯೂಬಿಸಿ (ಬಿಳಿ ರಕ್ತಕಣ) ಕೌಂಟ್​ ಸರಿಯಾಗಿ ಇರಲಿಲ್ಲ. ನಂತರ ಅನುಮಾನ ಬಂದು ಸ್ಕ್ಯಾನ್​ ಮಾಡಿಸಿದಾಗ ಬಲ ಅಂಡಾಶಯದಲ್ಲಿ ಗಡ್ಡೆ ಕಂಡುಬಂತು. ಅದು ಹಾಗೇ ಬಿಟ್ಟರೆ ಕ್ಯಾನ್ಸರ್​ಗೆ ತಿರುಗುತ್ತಿತ್ತು. ಕೂಡಲೇ ವೈದ್ಯರು ಸರ್ಜರಿ ಮೂಲಕ ತೆಗೆದರು. ಆ ಗಡ್ಡೆಯೊಂದಿಗೆ ನನ್ನ ಬಲ ಅಂಡಾಶಯವನ್ನೂ ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಈ ಗಡ್ಡೆ, ಜೈಮಿ ಸೇವಿಸುವ ಆಹಾರದಲ್ಲಿರುವ ಪೋಶಕಾಂಶಗಳನ್ನೆಲ್ಲ ಹೀರಿಕೊಳ್ಳುತ್ತಿತ್ತು. ಹೀಗಾಗಿ ಆಕೆಗೆ ಸುಸ್ತು, ವಾಕರಿಕೆಯಂಥ ಸಮಸ್ಯೆಗಳು ಕಂಡುಬಂದಿದ್ದವರು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಚ್ 23ರವರೆಗೆ ಬೆಂಗಳೂರು ನಗರದಲ್ಲಿ ಮಳೆ ಸಾಧ್ಯತೆ; ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

Published On - 11:09 am, Sun, 20 March 22