ಅಳಿವಿನಂಚಿನಲ್ಲಿರುವ ತಳಿಯ ಘೇಂಡಾಮೃಗದ ಮರಿಗೆ ಕೀವ್​ ಎಂದು ನಾಮಕರಣ; ಉಕ್ರೇನ್​ ರಾಜಧಾನಿ ಹೆಸರಿಟ್ಟಿದ್ದೇಕೆ?

ಮಾರ್ಚ್​ 4ರಂದು ಜನಿಸಿದ ಕೀವ್​​ಗೆ ಈಗ ಕೇವಲ 12 ದಿನ. ಮಾಧ್ಯಮದವರಿಗೂ ಕ್ಯೂಟ್​ ಆಗಿ ಪೋಸ್​ ಕೊಟ್ಟಿದ್ದಾನೆ. ನಾವೆಲ್ಲರೂ ಈ ಮರಿಯ ಮೇಲೆ ತುಂಬ ಆಸಕ್ತಿ ತೋರಿಸುತ್ತಿದ್ದೇವೆ ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಳಿವಿನಂಚಿನಲ್ಲಿರುವ ತಳಿಯ ಘೇಂಡಾಮೃಗದ ಮರಿಗೆ ಕೀವ್​ ಎಂದು ನಾಮಕರಣ; ಉಕ್ರೇನ್​ ರಾಜಧಾನಿ ಹೆಸರಿಟ್ಟಿದ್ದೇಕೆ?
ಘೇಂಡಾಮೃಗದ ಮರಿ
Follow us
TV9 Web
| Updated By: Lakshmi Hegde

Updated on:Mar 24, 2022 | 11:09 AM

ಜೆಕ್​ ಗಣರಾಜ್ಯದ ಪ್ರಾಣಿಸಂಗ್ರಹಾಲಯದಲ್ಲಿರುವ ಕಪ್ಪು ಘೇಂಡಾಮೃಗ (Eastern Black Rhinoceros)ವೊಂದು ಜನ್ಮ ನೀಡಿರುವ ಮರಿಗೆ ಕೀವ್ (Kyiv) ಎಂದು ಹೆಸರಿಡಲಾಗಿದೆ. ಅಂದಹಾಗೆ, ಇದು ಈಸ್ಟರ್ನ್​ ಬ್ಲ್ಯಾಕ್ ಪ್ರಬೇಧಕ್ಕೆ ಸೇರಿದ​ ರೈನೋಸರ್ಸ್​ (ಘೇಂಡಾಮೃಗ) ಆಗಿದ್ದು ಅಳಿವನಂಚಿನಲ್ಲಿರುವ ತಳಿಯೆನಿಸಿದೆ. ಹಾಗಾಗಿ ಅದರ ಮರಿಯನ್ನು ತುಂಬ ಜೋಪಾನ ಮಾಡಲಾಗುತ್ತಿದೆ. ಈ ಮಧ್ಯೆ ಮರಿಗೆ ಉಕ್ರೇನ್​ ರಾಜಧಾನಿ ಕೀವ್​ ಹೆಸರಿಟ್ಟಿದ್ದು ಇನ್ನಷ್ಟು ವಿಶೇಷ ಎನ್ನಿಸಲು ಕಾರಣವಾಗಿದೆ. ಸದ್ಯ ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​​ ಉಳಿಯುವುದೋ, ಅಳಿಯುವುದೋ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.  ಉಕ್ರೇನ್​ ಗೆಲ್ಲಲಿ ಎಂದು ಆಶಿಸಿ, ಉಕ್ರೇನಿಯನ್ನರಿಗೆ ಧೈರ್ಯ ತುಂಬುವ ಸಲುವಾಗಿ ಈ ಮರಿಗೆ ಕೀವ್​ ಎಂದು ಹೆಸರಿಟ್ಟಿದ್ದಾಗಿ ಸ್ಥಳೀಯ ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೇ, ಜೆಕಿಯಾ (ಜೆಕ್​ ಗಣರಾಜ್ಯ)ದ ದ್ವೂರ್​ ಕ್ರಾಲೋವ್​ ಎಂಬ ಝೂನಲ್ಲಿ ಮಾರ್ಚ್​ 4ರಂದು ಈ ಮರಿ ಹುಟ್ಟಿದೆ. ಈ ತಳಿಯ ಘೇಂಡಾಮೃಗಗಳು ಬೆರಳಣಿಕೆಯಲ್ಲಿವೆ. ಹಾಗೇ ಇವುಗಳ ಸಂತಾನೋತ್ಪತ್ತಿ ಪ್ರಮಾಣವೂ ತೀವ್ರ ಕುಗ್ಗಿದೆ. ಹೀಗಿರುವಾಗ ಮರಿ ಜನಿಸಿದ್ದು ತುಂಬ ಸಂತೋಷ ತಂದಿದೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣಿ ಸಂಗ್ರಹಾಲಯ ಒಂದು ಪ್ರಕಟಣೆಯನ್ನು ಹೊರಡಿಸಿದ್ದು, ದ್ವೂರ್​ ಕ್ರಾಲೋವ್​ ಸಫಾರಿ ಪಾರ್ಕ್​​ನಲ್ಲಿ ಮತ್ತೊಂದು ಪ್ರಾಣಿ ಹೆಚ್ಚಾಗಿದ್ದು ಸಂತೋಷ ಕೊಟ್ಟಿದೆ. ಪ್ರಸಕ್ತ ಉದ್ಯಾನ ಈ ತಳಿಯ ಘೇಂಡಾಮೃಗಗಳ ಸಂತಾನೋತ್ಪತ್ತಿಗೆ ಪ್ರಸಿದ್ಧ ತಾಣ ಎಂದು ಹೇಳಿದೆ.

ಮಾರ್ಚ್​ 4ರಂದು ಜನಿಸಿದ ಕೀವ್​​ಗೆ ಈಗ ಕೇವಲ 12 ದಿನ. ಮಾಧ್ಯಮದವರಿಗೂ ಕ್ಯೂಟ್​ ಆಗಿ ಪೋಸ್​ ಕೊಟ್ಟಿದ್ದಾನೆ. ನಾವೆಲ್ಲರೂ ಈ ಮರಿಯ ಮೇಲೆ ತುಂಬ ಆಸಕ್ತಿ ತೋರಿಸುತ್ತಿದ್ದೇವೆ. ಅವನನ್ನು ಆರೋಗ್ಯವಂತವಾಗಿ, ಸರಿಯಾಗಿ ಬೆಳೆಸಬೇಕು. ಕಳೆದ ವರ್ಷದಿಂದ ಇಲ್ಲಿಯವರೆಗೆ ಜಾಗತಿಕವಾಗಿ ಈ ತಳಿಯ ಘೇಂಡಾಮೃಗಗಳ ನಾಲ್ಕೇ ಮರಿಗಳು ಹುಟ್ಟಿವೆ ಎಂದು ಹೇಳಿರುವ ಪ್ರಾಣಿ ಸಂಗ್ರಹಾಲಯ, ಮರಿಯನ್ನು ಸದೃಢವಾಗಿ ಬೆಳೆಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಜೆಕ್ ಪ್ರಾಣಿಶಾಸ್ತ್ರಜ್ಞ ಜೋಸೆಫ್ ವ್ಯಾಗ್ನರ್ ಪ್ರಕಾರ ಈಗ ಹುಟ್ಟಿರುವ ಮರಿಯನ್ನೂ ಸೇರಿಸಿ ಜೆಕ್​ ಗಣರಾಜ್ಯದಲ್ಲಿ ಈಸ್ಟರ್ನ್​ ಬ್ಲ್ಯಾಕ್ ಪ್ರಬೇಧಕ್ಕೆ ಸೇರಿದ​ ರೈನೋಸರ್ಸ್ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಕೇವಲ 800 ಪೂರ್ವ ಕಪ್ಪು ಘೇಂಡಾಮೃಗಗಳು ಇವೆ. ಆದರೆ ಇವುಗಳ ತಳಿ ವರ್ಧನೆ ತೀವ್ರ ಕುಗ್ಗಿದೆ.

ಇದನ್ನೂ ಓದಿ: ಕಾಪು ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ, ಇದು ಇಡೀ ಹಿಂದೂ ಸಮಾಜದ ಹೋರಾಟ -ಪ್ರಕಾಶ್ ಕುಕ್ಕೆಹಳ್ಳಿ

Published On - 3:24 pm, Sun, 20 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ