Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಾಳು ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಕೀವ್​​ನಿಂದ ಕರೆದುಕೊಂಡು ಹೋದ ಚಾಲಕನಿಗೆ ಧನ್ಯವಾದ ಸಲ್ಲಿಸಿದ ರಾಯಭಾರಿ ಕಚೇರಿ

700 ಕಿಮೀ ಕ್ರಮಿಸುವಾಗ ಎದುರಾದ ಕಷ್ಟಗಳ ಬಗ್ಗೆಯೂ ಭಾರತೀಯ ರಾಯಭಾರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಯುದ್ಧ ವಲಯದಲ್ಲೆಲ್ಲ ಬಾಂಬ್​ ದಾಳಿ, ಶೆಲ್ಲಿಂಗ್​ ದಾಳಿ ಆಗುತ್ತಿದೆ. ಇಂಧನ ಕೊರತೆಯ ಅಪಾಯ ಇತ್ತು ಎಂದು ಹೇಳಿದೆ.

ಗಾಯಾಳು ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಕೀವ್​​ನಿಂದ ಕರೆದುಕೊಂಡು ಹೋದ ಚಾಲಕನಿಗೆ ಧನ್ಯವಾದ ಸಲ್ಲಿಸಿದ ರಾಯಭಾರಿ ಕಚೇರಿ
ಹರ್ಜೋತ್​ ಸಿಂಗ್​ರನ್ನು 700 ಕಿಮೀ ಕರೆದುಕೊಂಡು ಹೋದ ಚಾಲಕ
Follow us
TV9 Web
| Updated By: Lakshmi Hegde

Updated on:Mar 08, 2022 | 5:08 PM

ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಷ್ಯಾ ಸೇನೆಯ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಬಾರತದ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಈಗಾಗಲೇ ಪೋಲ್ಯಾಂಡ್​ ಗಡಿಯವರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಭಾರತದ ವಿಮಾನ ಹತ್ತಿಸಲಾಗಿದೆ.  ಸ್ಟ್ರೆಚರ್​ ಮೇಲೆ ಮಲಗಿದ್ದ ಅವರನ್ನು ಆಂಬುಲೆನ್ಸ್ ಮೂಲಕ ಪೋಲ್ಯಾಂಡ್​ ಗಡಿಗೆ ಕರೆದುಕೊಂಡು ಬರಲಾಗಿದೆ. ಕೀವ್​​ನಿಂದ ಪೋಲ್ಯಾಂಡ್​ ಬರೋಬ್ಬರಿ 700 ಕಿಮೀಗಳಷ್ಟು ದೂರ ಇದ್ದು, ಆಂಬುಲೆನ್ಸ್​​ನಲ್ಲಿ ಕರೆದುಕೊಂಡು ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹೀಗಿದ್ದಾಗ್ಯೂ ಚಾಲಕ ತುಂಬ ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಹರ್ಜೋತ್​ ಸಿಂಗ್​ರಿಗೆ ಯಾವುದೇ ತೊಂದರೆಯಾಗದಂತೆ ನೆರೆರಾಷ್ಟ್ರದ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದಾನೆ. ಆ ಚಾಲಕನನ್ನು ಉಕ್ರೇನ್​ನಲ್ಲಿರುವ ಭಾರತೀಯರ ರಾಯಭಾರಿ ಕಚೇರಿ ಪ್ರಶಂಸಿಸಿದೆ.

ಹೀಗೆ 700 ಕಿಮೀ ಕ್ರಮಿಸುವಾಗ ಎದುರಾದ ಕಷ್ಟಗಳ ಬಗ್ಗೆಯೂ ಭಾರತೀಯ ರಾಯಭಾರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಯುದ್ಧ ವಲಯದಲ್ಲೆಲ್ಲ ಬಾಂಬ್​ ದಾಳಿ, ಶೆಲ್ಲಿಂಗ್​ ದಾಳಿ ಆಗುತ್ತಿದೆ. ಇಂಧನ ಕೊರತೆಯ ಅಪಾಯ ಇತ್ತು. ರಸ್ತೆಗಳು ಬ್ಲಾಕ್​ ಆಗಿದ್ದವು. ಅಷ್ಟೇ ಅಲ್ಲ, ಟ್ರಾಫಿಕ್​ ಜಾಮ್​ ಸಮಸ್ಯೆಯೂ ಇತ್ತು. ಇನ್ನೂ  ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಅದೆಲ್ಲದರ ಮಧ್ಯೆ ಹರ್ಜೋತ್​ ಸಿಂಗ್​ರನ್ನು 700 ಕಿಮೀ ದೂರದ ಪೋಲ್ಯಾಂಡ್​ ಗಡಿಯಾದ ಬೊಡೊಮಿಯರ್ಜ್​ಗೆ ಸ್ಥಳಾಂತರ ಮಾಡಲಾಯಿತು.  ಎಲ್ಲ ಅಡೆತಡೆಗಳನ್ನೂ ಮೀರಿ ಹರ್ಜೋತ್​ರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಭಾರತೀಯ ರಾಯಭಾರಿ ಕಚೇರಿಯ ಉಕ್ರೇನ್​ ಚಾಲಕನಿಗೆ ಧನ್ಯವಾದಗಳು ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಸದ್ಯ ಹರ್ಜೋತ್​ ಸಿಂಗ್​(31) ಅವರು ಸಿ-17 ವಾಯು ಪಡೆ ವಿಮಾನದ ಮೂಲಕ ದೆಹಲಿ ಬಳಿಯ ಹಿಂಡನ್​ ಏರ್​ಫೋರ್ಸ್​ ಸ್ಟೇಶನ್​​ಗೆ ತಲುಪಿದ್ದಾರೆ. ನಿನ್ನೆ ಪೋಲ್ಯಾಂಡ್ ಏರ್​ಪೋರ್ಟ್ ತಲುಪಿದ್ದ ಅವರನ್ನು ಕೇಂದ್ರ ಸಚಿವ ವಿ.ಕೆ.ಸಿಂಗ್ ಭೇಟಿಯಾಗಿದ್ದರು.  ಯುದ್ಧ ಪೀಡಿತ ಉಕ್ರೇನ್​ನಿಂದ ಆಪರೇಷನ್​ ಗಂಗಾ ಮೂಲಕ ಈಗಾಗಲೇ 83 ವಿಮಾನಗಳಿಂದ 17,100 ಭಾರತೀಯರನ್ನು ಕರೆ ತಂದಿದೆ. ಉಕ್ರೇನ್​ ವಾಯು ಮಾರ್ಗ ಬಂದ್​ ಆಗಿರುವ ಕಾರಣ, ಅಲ್ಲಿರುವ ಭಾರತೀಯರನ್ನು ನೆರೆ ರಾಷ್ಟ್ರಗಳಾದ ರೊಮೇನಿಯಾ, ಪೋಲ್ಯಾಂಡ್, ಹಂಗೇರಿ, ಸ್ಲೊವಾಕಿಯಾ, ಮೊಲ್ಡೊವಾಗಳಿಗೆ ತಲುಪುವಂತೆ ಮಾಡಿ, ಅಲ್ಲಿಂದ ವಿಮಾನ ವ್ಯವಸ್ಥೆ ಮಾಡಿದೆ. ಭಾರತೀಯ ವಾಯುಪಡೆಯ ವಿಮಾನಗಳೂ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ.

ಇದನ್ನೂ ಓದಿ: ಗೋವಾದಲ್ಲಿ ಪಕ್ಷಾಂತರ ಭೀತಿ: ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್​​ಗೆ ಕರೆದೊಯ್ದ ಕಾಂಗ್ರೆಸ್

Published On - 5:07 pm, Tue, 8 March 22

ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​