AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಪು ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ, ಇದು ಇಡೀ ಹಿಂದೂ ಸಮಾಜದ ಹೋರಾಟ -ಪ್ರಕಾಶ್ ಕುಕ್ಕೆಹಳ್ಳಿ

ಕಾನೂನು ಹೋರಾಟ ನಡೆಸಿದ ನಂತರ ಹಿಜಾಬ್ ತೀರ್ಪು ಬಂದಿದೆ. ಹೈಕೋರ್ಟ್ ತೀರ್ಪು ಬಂದ ನಂತರವೂ ಕಾನೂನು ಹೋರಾಟ ಮಾಡಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ಬಂದ್ ಗೆ ಕರೆ ನೀಡಿದ್ದಾರೆ. ಮುಸಲ್ಮಾನ ವ್ಯಾಪಾರಿಗಳು ವ್ಯಾಪಾರ-ವಹಿವಾಟು ಬಂದ್ ಮಾಡಿದ್ದರು. ಇದು ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಅದರ ಪರಿಣಾಮ ಕಾಪು ಮಾರಿಪೂಜೆಯಲ್ಲಿ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.

ಕಾಪು ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ, ಇದು ಇಡೀ ಹಿಂದೂ ಸಮಾಜದ ಹೋರಾಟ -ಪ್ರಕಾಶ್ ಕುಕ್ಕೆಹಳ್ಳಿ
ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ
TV9 Web
| Edited By: |

Updated on: Mar 20, 2022 | 2:59 PM

Share

ಉಡುಪಿ: ಹಿಜಾಬ್(Hijab) ಕುರಿತು ಹೈಕೋರ್ಟ್ ತೀರ್ಪು ಬಂದ ನಂತರ ಮುಸ್ಲಿಂ ವ್ಯಾಪಾರಿಗಳು(Muslims) ಒಂದು ದಿನದ ಬಂದ್ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳನ್ನು ನಿಷೇಧಿಸಬೇಕೆಂಬ ಒತ್ತಾಯ ಕರಾವಳಿಯಲ್ಲಿ ಕೇಳಿಬಂದಿದೆ. ಉಡುಪಿಯ ಕಾಪು ಮಾರಿಪೂಜೆಯಲ್ಲಿ(Kapu Mari Pooje) ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿದ್ದು ಮಂಗಳವಾರ ನಡೆಯಲಿರುವ ಕಾಪು ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧಕ್ಕೆ ಬೇಡಿಕೆ ಇದೆ. ಇದು ಇಡೀ ಹಿಂದೂ ಸಮಾಜದ ಹೋರಾಟ ಎಂದಿದ್ದಾರೆ.

ಕಾನೂನು ಹೋರಾಟ ನಡೆಸಿದ ನಂತರ ಹಿಜಾಬ್ ತೀರ್ಪು ಬಂದಿದೆ. ಹೈಕೋರ್ಟ್ ತೀರ್ಪು ಬಂದ ನಂತರವೂ ಕಾನೂನು ಹೋರಾಟ ಮಾಡಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ಬಂದ್ ಗೆ ಕರೆ ನೀಡಿದ್ದಾರೆ. ಮುಸಲ್ಮಾನ ವ್ಯಾಪಾರಿಗಳು ವ್ಯಾಪಾರ-ವಹಿವಾಟು ಬಂದ್ ಮಾಡಿದ್ದರು. ಇದು ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಅದರ ಪರಿಣಾಮ ಕಾಪು ಮಾರಿಪೂಜೆಯಲ್ಲಿ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ಈ ಕುರಿತು ನಾವು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದೆವು. ಹಿಂದೂ ಸಮಾಜದ ಆಗ್ರಹವನ್ನು ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಅಡಿಯಲ್ಲಿ ನಿಷೇಧಕ್ಕೆ ಅವಕಾಶವಿದೆ. ಈ ಕಾನೂನಿನ ಅಡಿಯಲ್ಲಿ ನಿರ್ಣಯ ಮಾಡಿದ್ದಾರೆ. ಹಿಂದೂ ದೇವಾಲಯಕ್ಕೆ ಸೇರಿದ ಭೂಮಿಯಲ್ಲಿ ಅನ್ಯಮತೀಯರಿಗೆ ಅವಕಾಶ ಇಲ್ಲ. ಬಡ ವ್ಯಾಪಾರಿಗಳಿಗೆ ಕಷ್ಟವಾಗಬಹುದು ನಿಜ. ಬಡ ವ್ಯಾಪಾರಿಗಳು ತಮ್ಮ ಅಭಿಪ್ರಾಯ ಹೇಳಬೇಕಲ್ಲ. ಇಸ್ಲಾಂನಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬೇಕಲ್ಲವೇ. ಅವರು ಎಲ್ಲದಕ್ಕೂ ಮೌನವಾಗಿರುತ್ತಾರೆ. ಮೌನಂ ಸಮ್ಮತಿ ಲಕ್ಷಣಂ ಎಂದು ಭಾವಿಸಿದ್ದೇವೆ. ಹಾಗಾಗಿ ಹಿಂದೂ ಸಮಾಜಕ್ಕೆ ಆಕ್ರೋಶ ಬಂದಿದೆ. ಮುಸಲ್ಮಾನರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಬೇಕು. ಹಿಜಾಬ್ ಬಗ್ಗೆ ಅನೇಕ ಮುಸ್ಲಿಂ ವ್ಯಾಪಾರಿಗಳಿಗೆ ಸಮಾಧಾನ ಇಲ್ಲ. ಆದರೆ ಯಾರೂ ಕೂಡ ಬಹಿರಂಗವಾಗಿ ಹೇಳುತ್ತಿಲ್ಲ. ಮೌಲ್ವಿಗಳ ಫತ್ವಾಗೆ ಹೆದರಿ ತಲೆಬಾಗಿ ಕೊಂಡು ಪಾಲಿಸುತ್ತಾರೆ. ಪರಿಣಾಮ ಈ ಬಹಿಷ್ಕಾರ ಎದುರಿಸಲೇಬೇಕು. ವ್ಯಾಪಾರ ಬಹಿಷ್ಕರಿಸಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪ್ರಕಾಶ್ ಕುಕ್ಕೆಹಳ್ಳಿ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಗಂಗೊಳ್ಳಿಯಲ್ಲಿ ಮುಸಲ್ಮಾನರು ಹಿಂದೂ ಮೀನಿನ ವ್ಯಾಪಾರಿಗಳನ್ನು ಬಹಿಷ್ಕರಿಸಿದ್ದರು. ಆವಾಗ ಯಾಕೆ ಸಿದ್ದರಾಮಯ್ಯ ಮಾತನಾಡಲಿಲ್ಲ. ಇದರಲ್ಲಿ ಯಾವುದೇ ರಾಜಕೀಯ ವಿಚಾರ ಇಲ್ಲ. ಇದು ಹಿಂದೂ ಸಮಾಜದ ನೆಲದ ಅಸ್ಥಿತ್ವದ ಪ್ರಶ್ನೆ. ಈ ದೇಶವನ್ನು ಉಳಿಸುವ ಜವಾಬ್ದಾರಿ ಹಿಂದೂ ಸಮಾಜಕ್ಕೆ ಇದೆ. ಕಾಪು ಮಾರಿಪೂಜೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಭಾಗವಹಿಸಲು ಅವಕಾಶ ಇಲ್ಲ. ಭಾಗವಹಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಮುಂದೆ ಇದು ಎಲ್ಲಾ ಹಿಂದೂ ಜಾತ್ರೆಗಳಲ್ಲಿ ನಡೆಯುವ ಸಾಧ್ಯತೆ ಇದೆ. ಜಾಗೃತ ಸುಶಿಕ್ಷಿತ ಮುಸಲ್ಮಾನ ಸಮಾಜ ಗಂಭೀರವಾಗಿ ಯೋಚಿಸಬೇಕು. ಸಾಮರಸ್ಯ ಸಹಬಾಳ್ವೆಯಿಂದ ಇರಲು ನೆಲದ ಕಾನೂನು ಗೌರವಿಸಲಿ. ಆಗ ಎಲ್ಲಾ ಸಮಸ್ಯೆ ಪರಿಹಾರ ಆಗುತ್ತೆ ಎಂದರು.

ಒಂದಲ್ಲ ಒಂದುದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜ ಆಗಬಹುದು ಇನ್ನು ಮತ್ತೊಂದು ಕಡೆ ಒಂದಲ್ಲ ಒಂದುದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜ ಆಗಬಹುದು ಎಂದು ಕುತ್ತಾರಿನ ಕೊರಗಜ್ಜ ಕ್ಷೇತ್ರದ ನಡೆ ಸಮಾರೋಪದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಧ್ವಜ ತುಂಡಾಯಿತು. ಒಂದಲ್ಲ ಒಂದುದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜ ಆಗಬಹುದು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು. ಮೊದಲು ಬ್ರಿಟಿಷರ ಧ್ವಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಮೂರನೆಯವರ ಬಹುಮತ ಪಡೆದ್ರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದ್ರೆ ಹಿಂದೂ ಸಮಾಜ ಒಟ್ಟಾಗುತ್ತೆ. ಇವತ್ತು ದಿ ಕಾಶ್ಮೀರ್ ಫೈಲ್ಸ್ ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತು. ಇವತ್ತು‌ ಅದೇ ರೀತಿ ಹಿಜಾಬ್ ಬಂದಿದೆ, ಹಿಜಾಬ್ ಬೇಡ‌. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಅನ್ನೋ ಮನೋಭಾವ ಇದೆ. ಇದು ಈ ದೇಶವನ್ನು ಮುಂದೆ ತುಂಡು ಮಾಡುವ ಪ್ರಯತ್ನ ಎಂದಿದ್ದಾರೆ.

ಇದನ್ನೂ ಓದಿ: ತುಮಕೂರು ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು: ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರು ಬಯಸಿದರೆ ಸರ್ಕಾರ ಪುನರ್‌ವಸತಿ ಕಲ್ಪಿಸಲಿದೆ: ಪ್ರಲ್ಹಾದ್ ಜೋಶಿ