ಮೊನ್ನೆಯಷ್ಟೇ ಕಠಿಣ ಕಾನೂನುಗಳ ತಂದು ಇಂದು ಮಹಿಳೆಯರು ಸೂಕ್ಷ್ಮ ಹೂವುಗಳಿದ್ದಂತೆ ಎಂದ ಖಮೇನಿ

ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಯ್ತು, ಇರಾನ್ ಸರ್ವೋಚ್ಚ ನಾಯಕನಾಡುವ ಮಾತು. ನಿತ್ಯ ಮಹಿಳೆಯರಿಗೆ ತೊಂದರೆಯಾಗುವಂತಹ ಹತ್ತಾರು ನಿಯಮಗಳನ್ನು ಜಾರಿಗೆ ತರುತ್ತಿರುವ ಇರಾನ್ ಸರ್ವೋಚ್ಚ ನಾಯಕ ಖಮೇನಿ ಇದೀಗ ಮಹಿಳೆಯರು ಸೂಕ್ಷ್ಮ ಹೂವಿದ್ದಂತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮನೆಯಲ್ಲಿ ಮಹಿಳೆಯರ ಪಾತ್ರ ಹೇಗಿರಬೇಕು ಎಂದು ವಿವರಿಸಿದ್ದಾರೆ, ಆದರೆ ಇಸ್ಲಾಮಿಕ್ ಗಣರಾಜ್ಯದಲ್ಲಿ, ಅವರ ಆಳ್ವಿಕೆಯಲ್ಲಿ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ವರ್ಷಗಳಿಂದ ಹೋರಾಡುತ್ತಿದ್ದಾರೆ.

ಮೊನ್ನೆಯಷ್ಟೇ ಕಠಿಣ ಕಾನೂನುಗಳ ತಂದು ಇಂದು ಮಹಿಳೆಯರು ಸೂಕ್ಷ್ಮ ಹೂವುಗಳಿದ್ದಂತೆ ಎಂದ ಖಮೇನಿ
Iran Supreme Leader

Updated on: Dec 19, 2024 | 2:29 PM

ಮಹಿಳೆಯರಿಗೆ ಉಸಿರುಗಟ್ಟಿಸುವಂತಹ ನಿರ್ಬಂಧವನ್ನು ಹೇರುತ್ತಿರುವ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಮಹಿಳೆಯರನ್ನು ಸೂಕ್ಷ್ಮ ಹೂವುಗಳೆಂದು ಕರೆದಿದ್ದಾರೆ. ಮನೆಯಲ್ಲಿ ಮಹಿಳೆಯರ ಪಾತ್ರ ಹೇಗಿರಬೇಕು ಎಂದು ವಿವರಿಸಿದ್ದಾರೆ, ಆದರೆ ಇಸ್ಲಾಮಿಕ್ ಗಣರಾಜ್ಯದಲ್ಲಿ, ಅವರ ಆಳ್ವಿಕೆಯಲ್ಲಿ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ವರ್ಷಗಳಿಂದ ಹೋರಾಡುತ್ತಿದ್ದಾರೆ.

ಮಹಿಳೆ ಸೂಕ್ಷ್ಮವಾದ ಹೂವಿನಂತೆ, ಸೇವಕಿ ಅಲ್ಲ, ಮಹಿಳೆಯನ್ನು ಮನೆಯಲ್ಲಿ ಹೂವಿನಂತೆ ಕಾಣಬೇಕು. ಒಂದು ಹೂವಿನ ಆರೈಕೆ ಮಾಡಬೇಕು. ಅದರ ತಾಜಾತನ ಮತ್ತು ಸಿಹಿ ಪರಿಮಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ಗಾಳಿಯನ್ನು ಸುಗಂಧಗೊಳಿಸಲು ಬಳಸಬೇಕು ಎಂದು ಬರೆದಿದ್ದಾರೆ.

ಕುಟುಂಬದಲ್ಲಿ ಮಹಿಳೆ ಮತ್ತು ಪುರುಷರ ಪಾತ್ರಗಳು ವಿಭಿನ್ನವಾಗಿವೆ. ಉದಾಹರಣೆಗೆ, ಪುರುಷನು ಕುಟುಂಬದ ಖರ್ಚಿಗೆ ಜವಾಬ್ದಾರನಾಗಿರುತ್ತಾನೆ, ಆದರೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಮಹಿಳೆಯಾಗಿರುತ್ತದೆ. ಇದರರ್ಥ ಒಬ್ಬರು ಶ್ರೇಷ್ಠ ಎಂದಲ್ಲ ಎಂದರು.

ಕಳೆದ ವಾರವಷ್ಟೇ ಇರಾನ್ ಹೊಸ ಕಟ್ಟುನಿಟ್ಟಾದ ಹಿಜಾಬ್ ಕಾನೂನನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಿ, ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಈ ಹೊಸ ಕಾನೂನು ಕಳೆದ ಶುಕ್ರವಾರ ಅಂದರೆ ಡಿಸೆಂಬರ್ 13 ರಿಂದ ಜಾರಿಗೆ ಬಂದಿದೆ. ಆದರೆ ಅಂತರರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ವಿರೋಧ ಪ್ರಾರಂಭವಾಯಿತು.

ಮತ್ತಷ್ಟು ಓದಿ:
ಕಾನ್ಸರ್ಟ್​ನಲ್ಲಿ ಹಿಜಾಬ್ ಧರಿಸದ ಇರಾನ್ ಗಾಯಕಿಯ ಬಂಧನ

ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ವಿವಾದಾತ್ಮಕ ಹಿಜಾಬ್ ಮತ್ತು ಶುದ್ಧತೆಯ ಕಾನೂನನ್ನು ಡಿಸೆಂಬರ್ 16 ರಂದು ನಿಷೇಧಿಸಿದೆ. ಕಟ್ಟುನಿಟ್ಟಾದ ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸುವ ಮಹಿಳೆಯರಿಗೆ ಇರಾನ್‌ನಲ್ಲಿ ಜೈಲು ಶಿಕ್ಷೆ ಮತ್ತು ಚಿತ್ರಹಿಂಸೆ ನೀಡಲಾಗುತ್ತಿದೆ.

ಖಮೇನಿಯ ನಿರಂಕುಶ ಆಡಳಿತದ ವಿರುದ್ಧ ವಿಶೇಷವಾಗಿ 2022 ರಲ್ಲಿ 22 ವರ್ಷದ ಮಹ್ಸಾ ಅಮಿನಿಯ ಮರಣದ ನಂತರ ಅನೇಕ ಮಹಿಳೆಯರು ಬೀದಿಗಿಳಿದಿದ್ದಾರೆ. ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ವಿವಾದಾತ್ಮಕ ಹಿಜಾಬ್  ಕಾನೂನನ್ನು ಡಿಸೆಂಬರ್ 16 ರಂದು ನಿಷೇಧಿಸಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:27 pm, Thu, 19 December 24