Dinga Dinga Disease: ಇಡೀ ದೇಹ ಕಂಪಿಸುತ್ತೆ, ನೃತ್ಯ ಮಾಡುತ್ತಿರುವ ರೀತಿ ಕಾಣುತ್ತೆ, ಏನಿದು ಡಿಂಗಾ ಡಿಂಗಾ ಕಾಯಿಲೆ

ಕೊರೊನಾ ವೈರಸ್ ನಂತರ, ಆಫ್ರಿಕಾದಲ್ಲಿ ಹೊಸ ರೋಗ ಹೊರಹೊಮ್ಮಿದೆ. ಈ ರೋಗವು ಆಫ್ರಿಕಾದ ಉಗಾಂಡಾದ ಅನೇಕ ಜನರನ್ನು ಬಾಧಿಸಿದೆ. ಈ ನಿಗೂಢ ಕಾಯಿಲೆಯ ಹೆಸರು ಡಿಂಗಾ ಡಿಂಗಾ ಎಂದು ಹೇಳಲಾಗುತ್ತಿದೆ. ವರದಿಗಳನ್ನು ನಂಬುವುದಾದರೆ, ಉಗಾಂಡಾದಲ್ಲಿ 300 ಕ್ಕೂ ಹೆಚ್ಚು ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ವೈದ್ಯರು ಕೂಡ ಈ ಕಾಯಿಲೆಗೆ ಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

Dinga Dinga Disease: ಇಡೀ ದೇಹ ಕಂಪಿಸುತ್ತೆ, ನೃತ್ಯ ಮಾಡುತ್ತಿರುವ ರೀತಿ ಕಾಣುತ್ತೆ, ಏನಿದು ಡಿಂಗಾ ಡಿಂಗಾ ಕಾಯಿಲೆ
Disease
Follow us
ನಯನಾ ರಾಜೀವ್
|

Updated on: Dec 18, 2024 | 3:04 PM

ಡಿಂಗಾ ಡಿಂಗಾ ವೈರಸ್ ಕೊರೊನಾ ಸಾಂಕ್ರಾಮಿಕದ ನಂತರ ಕಾಣಿಸಿಕೊಂಡ ಮತ್ತೊಂದು ಭಯಾನಕ ವೈರಸ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಸಾಂಕ್ರಾಮಿಕ ರೋಗದ ಬಗ್ಗೆ ಇಡೀ ಜಗತ್ತನ್ನು ಎಚ್ಚರಿಸುತ್ತಿದೆ. ಈ ರೋಗದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ, ವಿಜ್ಞಾನಿಗಳು ಇದನ್ನು ಡಿಸೀಸ್ ಎಕ್ಸ್ ಎಂದು ಹೆಸರಿಸಿದ್ದಾರೆ. ಒಂದು ನಿಗೂಢ ಕಾಯಿಲೆಯು ಆಫ್ರಿಕಾದಲ್ಲಿ ನಿರಂತರವಾಗಿ ಜನರನ್ನು ತನ್ನ ಬಲಿಪಶುಗಳನ್ನಾಗಿ ಮಾಡುತ್ತಿದೆ, ಅದನ್ನು ಡಿಸೀಸ್ ಎಕ್ಸ್ ಎಂದು ಹೆಸರಿಸಲಾಯಿತು. ಈ ಕುರಿತು ಎನ್​ಡಿಟಿವಿ ವರದಿ ಮಾಡಿದೆ.

ಉಗಾಂಡಾದಲ್ಲಿಯೂ ನಿಗೂಢ ರೋಗವು ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ಉಗಾಂಡಾದಲ್ಲಿ ಹೆಚ್ಚುತ್ತಿರುವ ಈ ರೋಗವನ್ನು ಡಿಂಗಾ ಡಿಂಗಾ ಕಾಯಿಲೆ ಎಂದು ಕರೆಯಲಾಗಿದೆ. ಈ ಸೋಮಕು ತಗುಲಿರುವ ವ್ಯಕ್ತಿ ನಡೆದರೆ ನೃತ್ಯ ಮಾಡುತ್ತಿರುವಂತೆ ಭಾಸವಾಗುತ್ತದೆ.

ನಿಖರವಾದ ರೋಗಲಕ್ಷಣಗಳನ್ನು ಕಂಡುಹಿಡಿಯುವುದು ಕಷ್ಟ. ಆದಾಗ್ಯೂ, ಈ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಅನೇಕ ರೀತಿಯ ರೋಗಲಕ್ಷಣಗಳು ಕಂಡುಬಂದಿವೆ, ಅದರಲ್ಲಿ ಅತ್ಯಂತ ಅಪಾಯಕಾರಿ ಅತಿಯಾದ ದೇಹದ ಚಲನೆ, ಇದು ನೃತ್ಯ ಚಲನೆಗಳಿಗೆ ಹೋಲುತ್ತದೆ.

ಉಗಾಂಡಾದ ಬುಂಡಿಬಾಗ್ಯೊ ಪ್ರದೇಶದಲ್ಲಿ ಡಿಂಗಾ ಡಿಂಗಾ ರೋಗ ವೇಗವಾಗಿ ಹರಡುತ್ತಿದೆ. ಈ ಕಾಯಿಲೆಯಿಂದ ಯಾವುದೇ ಸಾವು ಸಂಭವಿಸಿದ ಸುದ್ದಿ ಇಲ್ಲ. ಇದನ್ನು ಹೋಗಲಾಡಿಸಲು ವೈದ್ಯರು ಆ್ಯಂಟಿಬಯೋಟಿಕ್‌ಗಳ ಸಹಾಯ ಪಡೆಯುತ್ತಿದ್ದಾರೆ. ಡಿಂಗಾ ಡಿಂಗಾದಿಂದ ಬಳಲುತ್ತಿರುವ ರೋಗಿಗಳು ಒಂದು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ. ಆದರೆ, ಈ ಕಾಯಿಲೆ ಜನರಲ್ಲಿ ಭಯ ಹುಟ್ಟಿಸತೊಡಗಿದೆ.

ಮತ್ತಷ್ಟು ಓದಿ: Cancer Vaccine: ಕ್ಯಾನ್ಸರ್​ ಲಸಿಕೆ ಸಿದ್ಧ, ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾದ ಸಾಧನೆ, ಲಸಿಕೆ ಉಚಿತ

ಉಗಾಂಡಾದ ಪಕ್ಕದಲ್ಲಿರುವ ಕಾಂಗೋ ದೇಶದಲ್ಲಿ ವಿಚಿತ್ರ ರೋಗ ಹರಡುತ್ತಿದೆ. ಈ ಕಾರಣದಿಂದಾಗಿ, ಜನರು ಜ್ವರ, ತಲೆನೋವು, ಕೆಮ್ಮು, ಮೂಗು ಮತ್ತು ದೇಹದ ನೋವಿನ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಕಾಂಗೋದಲ್ಲಿ 400 ಕ್ಕೂ ಹೆಚ್ಚು ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ.

ಜ್ವರ, ಪಾರ್ಶ್ವವಾಯು, ದೇಹ ದೌರ್ಬಲ್ಯಕ್ಕೆ ಕಾರಣವಾಗಬಹುದು, ಕೆಂದರೆ ಅವರ ದೇಹವು ಅನಿಯಂತ್ರಿತವಾಗಿ ನಡುಗಲು ಪ್ರಾರಂಭಿಸುತ್ತದೆ. ಜ್ವರ, ದೇಹ ನಡುಗುವಿಕೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞರ ಸಲಹೆ ಪಡೆಯಿರಿ.

ಸೂಚನೆ: ಕೇವಲ ಈ ರೋಗದ ಬಗ್ಗೆ ತಿಳಿದಿರಲಿ ಎನ್ನುವ ದೃಷ್ಟಿಯಿಂದ ಇಲ್ಲಿ ಮಾಹಿತಿ ನೀಡಿದ್ದೇವೆ, ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ. ಯಾವುದೇ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?