Back Scratchers: ಬೆನ್ನು ತುರ್ಸೋ ಕೆಲಸ ಅಂತೆ ನೋಡಿ, ಗಂಟೆಗೆ ಪಡೆಯೋ ಹಣ ಕೇಳಿದ್ರೆ ಇದೇ ಕೆಲ್ಸ ಬೆಟರ್ ಅನ್ಸುತ್ತೆ
ಕೆಲಸ ಎಂದಾಕ್ಷಣ ಕೆಲವು ಸಾಂಪ್ರದಾಯಿಕ ಉದ್ಯೋಗಗಳು ಮಾತ್ರ ನಮ್ಮ ಮನಸ್ಸಿಗೆ ಬರುತ್ತವೆ. ಅದರಲ್ಲಿ ಹಣದ ಜತೆಗೆ ಗೌರವವೂ ಸಿಗುತ್ತದೆ ಎಂಬುದು ನಂಬಿಕೆ.ಆದರೆ ಈಗ ಕಾಲ ಬದಲಾಗಿದೆ ಜನರು ಕೆಲಸವನ್ನು ಕೇವಲ ಕೆಲಸವೆಂದಷ್ಟೇ ಪರಿಗಣಿಸುತ್ತಾರೆ, ಒಳ್ಳೆಯ ಹಣ ಸಿಗುತ್ತಿದ್ದರೆ ಮರ್ಯಾದಿ ಹೋಗುವಂಥದ್ದು ಬಿಟ್ಟು ಇನ್ಯಾವುದೇ ಕೆಲಸಕ್ಕೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ.
ಕೆಲಸ ಎಂದಾಕ್ಷಣ ಕೆಲವು ಸಾಂಪ್ರದಾಯಿಕ ಉದ್ಯೋಗಗಳು ಮಾತ್ರ ನಮ್ಮ ಮನಸ್ಸಿಗೆ ಬರುತ್ತವೆ. ಅದರಲ್ಲಿ ಹಣದ ಜತೆಗೆ ಗೌರವವೂ ಸಿಗುತ್ತದೆ ಎಂಬುದು ನಂಬಿಕೆ. ಆದರೆ ಈಗ ಕಾಲ ಬದಲಾಗಿದೆ ಜನರು ಕೆಲಸವನ್ನು ಕೇವಲ ಕೆಲಸವೆಂದಷ್ಟೇ ಪರಿಗಣಿಸುತ್ತಾರೆ, ಒಳ್ಳೆಯ ಹಣ ಸಿಗುತ್ತಿದ್ದರೆ ಮರ್ಯಾದಿ ಹೋಗುವಂಥ ಕೆಲಸವೊಂದನ್ನು ಮಾತ್ರ ಬಿಟ್ಟು ಇನ್ಯಾವುದೇ ಕೆಲಸಕ್ಕೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ.
ಕಡಿಮೆ ಶ್ರಮದಿಂದ ಉತ್ತಮ ಹಣ ಗಳಿಸುವ ಅನೇಕ ಉದ್ಯೋಗಗಳಿವೆ, ಆದರೆ ಇದನ್ನು ನೀವು ಉದ್ಯೋಗ ಎಂದು ಪರಿಗಣಿಸಲು ನಿರಾಕರಿಸಬಹುದು. ಆದರೆ ಒಳ್ಳೆಯ ಆದಾಯವನ್ನಂತೂ ತಂದುಕೊಡುತ್ತದೆ. ಈ ಕೆಲಸ ಬೆನ್ನು ತುರಿಸುವುದು, ಇದಕ್ಕಾಗಿಯೇ ಪಾರ್ಲರ್ ಮಾದರಿಯ ಸ್ಥಳವೂ ಕೂಡ ಇದೆ.
ಟೋನಿ ಜಾರ್ಜ್ ಎಂಬ ಮಹಿಳೆ ಈ ಸೇವೆಯನ್ನು ಪ್ರಾರಂಭಿಸಿದ್ದಾರೆ, ಇದನ್ನು ಸ್ಕ್ರ್ಯಾಚರ್ ಗರ್ಲ್ಸ್ ಎಂದು ಹೆಸರಿಸಲಾಗಿದೆ. ಹೆಸರೇ ಸೂಚಿಸುವಂತೆ, ಸ್ವಲ್ಪ ಉದ್ದವಾದ ಉಗುರುಗಳನ್ನು ಹೊಂದಿರುವ ಹುಡುಗಿಯರು ಮಾತ್ರ ಇಲ್ಲಿ ಕೆಲಸ ಮಾಡುತ್ತಾರೆ. 55ರ ಹರೆಯದ ಟೋನಿ ಅವರು ಬಾಲ್ಯದಿಂದಲೂ ಬೆನ್ನು ಕೆರೆದುಕೊಳ್ಳುವುದನ್ನು ಆನಂದಿಸುತ್ತಿದ್ದರು, ಆದ್ದರಿಂದ ವಿಶೇಷವಾಗಿ ಬೊಜ್ಜು ಹೊಂದಿರುವವರಿಗೆ ಈ ಸಂತೋಷವನ್ನು ಒದಗಿಸಲು ಸೇವೆಯನ್ನು ಪ್ರಾರಂಭಿಸಲು ಯೋಚಿಸಿದೆ ಎಂದು ಹೇಳುತ್ತಾರೆ.
ಮತ್ತಷ್ಟು ಓದಿ: ISRO Scientist Salary 2024: ಇಸ್ರೋ ವಿಜ್ಞಾನಿಗಳಿಗೆ ಸಿಗುವ ತಿಂಗಳ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ
ಈಗ ಇದೇ ಇವರ ವೃತ್ತಿಯಾಗಿ ಮಾರ್ಪಟ್ಟಿದ್ದು, ಪ್ರತಿ ಗಂಟೆಗೆ 11 ಸಾವಿರ ರೂ. ಪಡೆಯುತ್ತಾರೆ. ತುರಿಕೆಯನ್ನು 3 ಇಂಚು ಉದ್ದದ ಉಗುರುಗಳಿಂದ ತುರಿಸಲಾಗುತ್ತದೆ. 1-ಗಂಟೆಯ ಅವಧಿಯಲ್ಲಿ, ಚಿಕಿತ್ಸಕರು ಕ್ಲೈಂಟ್‌ನ ಬೆನ್ನು, ಕೈ, ನೆತ್ತಿ ಮತ್ತು ಕಿವಿಯ ಒಳಭಾಗವನ್ನು ತಮ್ಮ ಉಗುರುಗಳಿಂದ ಸ್ಕ್ರಾಚ್ ಮಾಡುತ್ತಾರೆ.
ನ್ಯೂಯಾರ್ಕ್, ಲಾಸ್ ಏಂಜಲೀಸ್ ಮತ್ತು ಫಿಲಡೆಲ್ಫಿಯಾದಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಈ ಸೇವೆ ಬಹಳ ಜನಪ್ರಿಯವಾಗಿದೆ. ಸಾಕಷ್ಟು ಸಂಶೋಧನೆ ನಡೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಟೋನಿ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ