Viral: ರೈಲಿನ ಮಹಿಳಾ ಬೋಗಿಗೆ ನಗ್ನವಾಗಿ ನುಗ್ಗಿದ ವ್ಯಕ್ತಿ; ಗಾಬರಿಗೊಂಡು ಕಿರುಚಾಡಿದ ಮಹಿಳಾ ಪ್ರಯಾಣಿಕರು

ಬಸ್‌, ರೈಲಿನಲ್ಲಿ ಕೆಲ ಪ್ರಯಾಣಿಕರು ಮಾಡುವಂತಹ ಕಿತಾಪತಿ, ಎಡವಟ್ಟುಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನಲ್ಲಿ ಮಹಿಳೆಯರಿದ್ದ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ್ದಾನೆ. ಈ ನಗ್ನ ವ್ಯಕ್ತಿಯನ್ನು ಕಂಡು ಮಹಿಳೆಯರು ಭಯದಿಂದ ಕಿರುಚಾಡಿದ್ದು, ಕೊನೆಗೆ ಟಿಟಿಇ ಬಂದು ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Viral: ರೈಲಿನ ಮಹಿಳಾ ಬೋಗಿಗೆ ನಗ್ನವಾಗಿ ನುಗ್ಗಿದ ವ್ಯಕ್ತಿ; ಗಾಬರಿಗೊಂಡು ಕಿರುಚಾಡಿದ ಮಹಿಳಾ ಪ್ರಯಾಣಿಕರು
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 11:25 AM

ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ರೀತಿಯಲ್ಲಿ ವರ್ತಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಆದ್ರೆ ಕೆಲವೊಂದಿಷ್ಟು ಜನ ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಅಸಂಬದ್ಧವಾಗಿ ವರ್ತಿಸುವುದು ಮಾತ್ರವಲ್ಲದೆ ಇತರರಿಗೂ ಮುಜುಗರವನ್ನು ಉಂಟು ಮಾಡುತ್ತಿರುತ್ತಾರೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನಲ್ಲಿ ಮಹಿಳೆಯರಿದ್ದ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ್ದಾನೆ. ಈ ನಗ್ನ ವ್ಯಕ್ತಿಯನ್ನು ಕಂಡು ಮಹಿಳೆಯರು ಭಯದಿಂದ ಕಿರುಚಾಡಿದ್ದು, ಕೊನೆಗೆ ಟಿಟಿಇ ಬಂದು ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಮುಂಬೈನಲ್ಲಿ ನಡೆದಿದ್ದು, ನಗ್ನ ವ್ಯಕ್ತಿಯೊಬ್ಬ ರೈಲಿನಲ್ಲಿ ಮಹಿಳೆಯರಿದ್ದ ಭೋಗಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾನೆ. ಸೋಮವಾರ (ಡಿ. 16) ಸಂಜೆ ಈ ಘಟನೆ ನಡೆದಿದ್ದು, ಕಲ್ಯಾಣ್‌ನಿಂದ ಛತ್ರವತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ಗೆ ಪ್ರಯಾಣಿಸುತ್ತಿದ್ದ ಲೋಕಲ್‌ ಟ್ರೈನ್‌ ಘಾಟ್‌ಕೋಪರ್‌ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಂಪೂರ್ಣ ಬೆತ್ತಲಾಗಿದ್ದ ವ್ಯಕ್ತಿಯೊಬ್ಬ ರೈಲಿನ ಮಹಿಳಾ ಕೋಚ್‌ಗೆ ನುಗ್ಗಿದ್ದಾನೆ. ಈತನನ್ನು ಕಂಡು ಮಹಿಳಾ ಪ್ರಯಾಣಿಕರು ಭಯದಿಂದ ಕಿರಿಚಾಡಿದ್ದು, ನಂತರ ಟಿಟಿಇ ಸ್ಥಳಕ್ಕಾಗಮಿಸಿ ಆತನನ್ನು ಬಾಗಿಲಿನಿಂದ ಹೊರ ದಬ್ಬಿದ್ದಾರೆ.

ಇದನ್ನೂ ಓದ: ಚಿತ್ರದಲ್ಲಿ ಮೊದಲು ನೋಡಿದ್ದು ಏನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

santryal ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನ ಬಾಗಿಲಿನ ಬಳಿ ನಿಂತಿರುವ ದೃಶ್ಯವನ್ನು ಕಾಣಬಹುದು. ಕೂಡಲೇ ಅಲ್ಲಿದ್ದ ಮಹಿಳೆಯರು ಸಹಾಯಕ್ಕಾಗಿ ಟಿಟಿಇಯನ್ನು ಕರೆದಿದ್ದು, ತಕ್ಷಣ ಬಂದ ಟಿಟಿಇ ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ಘಟನೆಯ ಬಗ್ಗೆ ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಸುರಕ್ಷತೆಯ ದೃಷ್ಟಿಯಿಂದ ರೈಲಿನಲ್ಲಿ ಆರ್‌ಪಿಎ ಸಿಬ್ಬಂದಿಗಳನ್ನು ನೇಮಿಸಿ ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ