Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಚೇರಿಯಲ್ಲಿ ಹಿರಿಯ ವ್ಯಕ್ತಿಯನ್ನು ಗಂಟೆಗಟ್ಟಲೆ ಕಾಯಿಸಿದ ಸರ್ಕಾರಿ ನೌಕರರಿಗೆ ವಿಶಿಷ್ಟ ಶಿಕ್ಷೆ ನೀಡಿದ ಸಿಇಒ; ವಿಡಿಯೋ ವೈರಲ್‌

ಸರ್ಕಾರಿ ನೌಕರರು ಕಛೇರಿಯಲ್ಲಿ ಜನರನ್ನು ಅಲೆದಾಡಿಸುವುದು, ಕಾಯುವಂತೆ ಮಾಡಿಸುವುದು ಹೊಸದೇನು ಅಲ್ಲ ಬಿಡಿ. ಹೆಚ್ಚಿನ ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಕಡೆ ಇದೇ ರೀತಿಯ ಘಟನೆ ನಡೆದಿದ್ದು, ಸರ್ಕಾರಿ ಕಛೇರಿಯ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆಯನ್ನು ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಗರಂ ಆದ ಸಿಇಒ ನೀವು ಕೂಡಾ ಹೀಗೆಯೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಅವರಿಗೆ ಶಿಕ್ಷೆಯ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 18, 2024 | 3:11 PM

ಯಾವುದೋ ಕೆಲಸದ ನಿಮಿತ್ತ ಸರ್ಕಾರಿ ಕಛೇರಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಕೆಲವೊಂದಿಷ್ಟು ನೌಕರರು ಸಮಯಕ್ಕೆ ಸರಿಯಾಗಿ ಸೇವೆಯನ್ನು ನೀಡದೆ ಜನರನ್ನು ಕಾಯುವಂತೆ ಮಾಡುವ ಅಥವಾ ಅಲೆದಾಡುವಂತೆ ಮಾಡುವ, ಅಮಾಯಕರ ಮೇಲೆ ದರ್ಪವನ್ನು ತೋರುವ ಕೆಲಸವನ್ನು ಮಾಡುತ್ತಿರುತ್ತಾರೆ. ಬಹುಷಃ ಇದು ನಿಮ್ಮ ಅನುಭವಕ್ಕೂ ಕೂಡಾ ಬಂದಿರಬಹುದು. ಇಲ್ಲೊಂದು ಸರ್ಕಾರಿ ಕಛೇರಿಯಲ್ಲೂ ಕೂಡಾ ಇದೇ ರೀತಿಯ ಘಟನೆ ನಡೆದಿದ್ದು, ಅಲ್ಲಿನ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆ ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಕೋಪಕೊಂಡ ಸಿಇಒ ನೀವು ಕೂಡಾ ಹೀಗೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಶಿಕ್ಷೆಯನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ತಮ್ಮ ಕೆಲಸದ ನಿಮಿತ್ತ ಸರ್ಕಾರಿ ಕಛೇರಿಯೊಂದಕ್ಕೆ ಬಂದಿದ್ದ ಹಿರಿಯರೊಬ್ಬರಿಗೆ ಅಲ್ಲಿನ ನೌಕರರು ಸರಿಯಾದ ಸಮಯಕ್ಕೆ ಸೇವೆಯನ್ನು ಒದಗಿಸದೆ 50 ನಿಮಿಷಗಳಿಗೂ ಹೆಚ್ಚು ಹೊತ್ತು ಕಾಯುವಂತೆ ಮಾಡಿದ್ದಾರೆ. ಈ ದೃಶ್ಯವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ʼನೀವು ಕೂಡಾ ಹೀಗೆ 30 ನಿಮಿಷಗಳ ಕಾಲ ನಿಂತುಕೊಂಡು ಕೆಲಸ ಮಾಡಿʼ ಎಂದು ಅಲ್ಲಿದ್ದ 16 ನೌಕರರಿಗೆ ಸ್ಟ್ಯಾಂಡ್‌ ಅಪ್‌ ಶಿಕ್ಷೆಯನ್ನು ನೀಡಿದ್ದಾರೆ.

ವರದಿಗಳ ಪ್ರಕಾರ ಹೊಸ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಡಾ. ಲೋಕೇಶ್‌ ವೃದ್ಧ ವ್ಯಕ್ತಿಯನ್ನು ಕಾಯಿಸಿದ 16 ನೌಕರರಿಗೆ 30 ನಿಮಿಷಗಳ ಕಾಲ ನಿಂತುಕೊಂಡೇ ಕೆಲಸ ಮಾಡಿ ಎಂಬ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದ್ದಾರೆ. ಕಛೇರಿಗೆ ಭೇಟಿ ನೀಡುವ ಹಿರಿಯ ನಾಗರಿಕರನ್ನು ಕಾಯಿಸದೆ ಅವರ ಕೆಲಸವನ್ನು ಬೇಗ ಮಾಡಿ ಕೊಡಿ ಎಂದು ಡಾ. ಲೋಕೇಶ್‌ ಆದೇಶಿಸಿದರೂ, ಇದಕ್ಕೆ ಕ್ಯಾರೇ ಅನ್ನದೆ ಹಿರಿಯ ವ್ಯಕ್ತಿಯನ್ನು ಕಾಯಿಸಿದ ಎಲ್ಲಾ ನೌಕಕರಿಗೆ ಛೀಮಾರಿ ಹಾಕಿ ಶಿಕ್ಷೆಯ ರೂಪದಲ್ಲಿ 30 ನಿಮಿಷಗಳ ಕಾಲ ನಿಂತುಕೊಂಡು ಕೆಲಸ ಮಾಡುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ರೈಲಿನ ಮಹಿಳಾ ಬೋಗಿಗೆ ನಗ್ನವಾಗಿ ನುಗ್ಗಿದ ವ್ಯಕ್ತಿ; ಗಾಬರಿಗೊಂಡು ಕಿರುಚಾಡಿದ ಮಹಿಳಾ ಪ್ರಯಾಣಿಕರು

ಸಚಿನ್‌ ಗುಪ್ತಾ (SachinGuptaUP) ಎಂಬವರು ಎಕ್ಸ್‌ನಲ್ಲಿ ಶೇರ್‌ ಮಾಡಿರುವ ಈ ವಿಡಿಯೋದಲ್ಲಿ ನೋಯ್ಡಾ ಪ್ರಾಧಿಕಾರದ ನೌಕರರು ಶಿಕ್ಷೆಯ ರೂಪದಲ್ಲಿ ನಿಂತುಕೊಂಡೇ ಕೆಲಸ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಸಿಇಒ ಅವರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Wed, 18 December 24