ಆನ್​ಲೈನ್​ ಮೂಲಕ ಕೊರೊನಾ ಮುಕ್ತ ಎದೆಹಾಲು ಮಾರಾಟಕ್ಕೆ ಮುಂದಾದ ಮಹಿಳೆಯರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 26, 2021 | 6:47 PM

ಈ ಹಾಲು ಉಚಿತವಲ್ಲ. 28 ಗ್ರಾಂ ಎದೆಹಾಲಿಗೆ 2 ಡಾಲರ್ ಚಾರ್ಜ್​ ಮಾಡಲಾಗುತ್ತದೆ. ಈ ವೆಬ್​ಸೈಟ್​ನಲ್ಲಿ ಹಲವು ಮಹಿಳೆಯರು ಎದೆಹಾಲು ನೀಡುವ ಬಗ್ಗೆ ಆ್ಯಡ್ ನೀಡಿರುತ್ತಾರೆ.

ಆನ್​ಲೈನ್​ ಮೂಲಕ ಕೊರೊನಾ ಮುಕ್ತ ಎದೆಹಾಲು ಮಾರಾಟಕ್ಕೆ ಮುಂದಾದ ಮಹಿಳೆಯರು
ಸಾಂದರ್ಭಿಕ ಚಿತ್ರ
Follow us on

ಕೊರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಲು ಅನೇಕರು ನಾನಾ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ತಾಯಂದಿರಿಗೆ ಕೊರೊನಾ ಬಂದರೆ ಅವರು ಮಕ್ಕಳನ್ನು ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಇಂಥ ಮಕ್ಕಳಿಗಾಗಿ ಕೆಲ ಮಹಿಳೆಯರು ಎದೆ ಹಾಲು ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತಾವು ಕೊವಿಡ್​ ಲಸಿಕೆ ಪಡೆದಿದ್ದು, ಈ ಎದೆಹಾಲು ತುಂಬಾನೇ ಸುರಕ್ಷಿತವಾದದ್ದು ಎಂದು ಹೇಳಿಕೊಂಡಿದ್ದಾರೆ.

ಅಮೆರಿಕದ ‘ಒನ್​ ಓನ್ಲಿ ದಿ ಬ್ರೆಸ್ಟ್’​ ವೆಬ್​ಸೈಟ್​ ಈ ಮೊದಲಿನಿಂದಲೂ ಎದೆಹಾಲು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದೆ. ಈಗ ಕೊರೊನಾ ಕಾರಣದಿಂದ ಕೆಲ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸಲು ಸಾಧ್ಯವಾಗುತ್ತಿಲ್ಲ. ಅಂಥವರು ಈ ವೆಬ್​ಸೈಟ್​ ಮೂಲಕ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೊವಿಡ್​ ಆ್ಯಂಟಿಬಾಡಿ ಹಾಲು ನಮ್ಮಲ್ಲಿ ಸಿಗುತ್ತಿದೆ ಎಂದು ವೆಬ್​ಸೈಟ್​ ಪ್ರಚಾರ ಮಾಡುತ್ತಿದೆ. ಅಂದರೆ, ಎದೆಹಾಲು ನೀಡುವ ಮಹಿಳೆ ಕೊರೊನಾ ಲಸಿಕೆ ಪಡೆದಿರುತ್ತಾಳೆ. ಹೀಗಾಗಿ, ಅವರು ನೀಡುವ ಎದೆಹಾಲು ಸಂಪೂರ್ಣ ಸುರಕ್ಷಿತ ಎಂಬ ಅಭಿಪ್ರಾಯವನ್ನು ಈ ವೈಬ್​ಸೈಟ್​ನಲ್ಲಿ ವ್ಯಕ್ತಪಡಿಸಲಾಗಿದೆ.

ಅಂದಹಾಗೆ, ಈ ಹಾಲು ಉಚಿತವಲ್ಲ. 28 ಗ್ರಾಂ ಎದೆಹಾಲಿಗೆ 2 ಡಾಲರ್ ಚಾರ್ಜ್​ ಮಾಡಲಾಗುತ್ತದೆ. ಈ ವೆಬ್​ಸೈಟ್​ನಲ್ಲಿ ಬೇರೆ ಬೇರೆ ಮಹಿಳೆಯರು ಎದೆಹಾಲು ನೀಡುವ ಬಗ್ಗೆ ಆ್ಯಡ್ ನೀಡಿರುತ್ತಾರೆ. ಯಾವ ಮಗುವಿಗೆ ಅವಶ್ಯಕತೆ ಇದೆಯೋ ಅವರ ಪಾಲಕರು ಆ್ಯಡ್​ ನೀಡಿದ ಮಹಿಳೆಯರಿಗೆ ಕರೆ ಮಾಡಬೇಕು.

ಕೊವಿಡ್​ ರಹಿತ ಎದೆಹಾಲು ಎಂದು ಅನೇಕರು ಜಾಹೀರಾತು ನೀಡಿದ್ದಾರೆ. ಈ ಬಗ್ಗೆ ಅವರ ಬಳಿ ವಿಚಾರಿಸಿದಾಗ ಅವರು ಹೇಳಿದ್ದಿಷ್ಟು. ಈಗ ಕೊರೊನಾ ಹೆಚ್ಚುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಮಗುವಿಗೆ ಎದೆಹಾಲು ಉಣಿಸುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಅನೇಕರು ಬಂದಿರುತ್ತಾರೆ. ಈ ಸಂದರ್ಭದಲ್ಲಿ ನಾವು ಕೊವಿಡ್​ ರಹಿತ ಎದೆಹಾಲು ಎಂದು ಜಾಹೀರಾತು ನೀಡಿದರೆ ಇದನ್ನು ಖರೀದಿ ಮಾಡೋಕೆ ಹೆಚ್ಚೆಚ್ಚು ಜನರು ಬರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಕೊರೊನಾ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರು ಲಸಿಕೆ ತೆಗೆದುಕೊಂಡಿದ್ದರೆ ಅದು ಎದೆಹಾಲಿನ ಮೂಲಕ ನಮ್ಮ ಮಕ್ಕಳಿಗೂ ವರ್ಗಾವಣೆ ಆಗುತ್ತದೆ. ಇದರಿಂದ ಮಕ್ಕಳಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿ ಅವರು ಹೆಚ್ಚು ಸುರಕ್ಷಿತರಾಗಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ. ಈ ಕಾರಣಕ್ಕೆ ಕೊವಿಡ್​ ಲಸಿಕೆ ಪಡೆದ ಮಹಿಳೆಯರಿಗೆ ಹಾಲುಣಿಸಲು ಹೆಚ್ಚು ಬೇಡಿಕೆ ಬರುತ್ತಿದೆ.

ಇದನ್ನೂ ಓದಿ: ಮಾತೃ ಹೃದಯ! 6 ತಿಂಗಳಲ್ಲಿ 42 ಲೀಟರ್​ ಎದೆಹಾಲು ದಾನ ಮಾಡಿದ ಸಿನಿ ನಿರ್ಮಾಪಕಿ

ಇದನ್ನೂ ಓದಿ: ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಟಾಪ್ ಒನ್

Published On - 6:47 pm, Mon, 26 April 21