ಮರಳುಗಾಡಿನಲ್ಲಿ ತಲೆ ಎತ್ತಲಿದೆ ಪ್ರಪಂಚದ ಅತಿದೊಡ್ಡ ಕಾರಂಜಿ!

|

Updated on: Oct 06, 2020 | 11:41 AM

ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ. ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್​ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್​ ದಾಖಲೆ ರಚಿಸಲು ಮುಂದಾಗಿದೆ. ಸರಿಸುಮಾರು 14 ಸಾವಿರ ಚದರಡಿ ವಿಸ್ತೀರ್ಣ […]

ಮರಳುಗಾಡಿನಲ್ಲಿ ತಲೆ ಎತ್ತಲಿದೆ ಪ್ರಪಂಚದ ಅತಿದೊಡ್ಡ ಕಾರಂಜಿ!
Follow us on

ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ.

ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್​ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್​ ದಾಖಲೆ ರಚಿಸಲು ಮುಂದಾಗಿದೆ.

ಸರಿಸುಮಾರು 14 ಸಾವಿರ ಚದರಡಿ ವಿಸ್ತೀರ್ಣ ಹೊಂದಿರುವ ಈ ಕಾರಂಜಿಗೆ ಪಾಮ್​​ ಫೌಂಟೆನ್​ ಎಂದು ಹೆಸರಿಡಲಾಗಿದೆ. ಸಾಗರದ ಉಪ್ಪು ನೀರನ್ನು ಈ ಕಾರಂಜಿಯಲ್ಲಿ ಬಳಸಲಾಗುತ್ತಿದ್ದು ಜೊತೆಗೆ ಕಾರಂಜಿಯ ನೀರನ್ನು 105 ಮೀಟರ್ ಎತ್ತರದ ವರೆಗೆ ಚಿಮ್ಮಿಸುವ ಸಾಮರ್ಥ್ಯವಿರುವ ಸೂಪರ್​ ಶೂಟರ್​ ಚಿಲುಮೆ ಸಹ ಹೊಂದಿದೆ. ಅಷ್ಟೇ ಅಲ್ಲ, ಪಾಮ್​ ಫೌಂಟೆನ್​ ದೀಪಾಲಂಕಾರಕ್ಕೆ 3 ಸಾವಿರ LEDಗಳನ್ನು ಸಹ ಬಳಸಲಾಗಿದೆ.