ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೆ ಸಿದ್ದವಾದ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ನೆಕ್ಸಾನ್ ಫೇಸ್ ಲಿಫ್ಟ್ ಆವೃತ್ತಿಯನ್ನ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.
ಕಂಪ್ಯಾಕ್ಟ್ ಎಸ್ ಯುವಿ ಕಾರು ಮಾರಾಟದಲ್ಲಿ ಸದ್ಯ ಟಾಟಾ ನೆಕ್ಸಾನ್(Tata Nexon) ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಗ್ರಾಹಕರ ಬೇಡಿಕೆಯೆಂತೆ ಹಲವಾರು ವಿಶೇಷತೆಗಳನ್ನ ಹೊಂದಿರುವ ನೆಕ್ಸಾನ್ ಕಾರು ಶೀಘ್ರದಲ್ಲಿಯೇ ಫೇಸ್ ಲಿಫ್ಟ್ ಆವೃತ್ತಿಯೊಂದಿಗೆ ಬಿಡುಗಡೆಯಾಗುತ್ತಿದೆ. ಫೇಸ್ ಲಿಫ್ಟ್ ಆವೃತ್ತಿಯು ಈ ಬಾರಿ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
ಹೊಸ ಎಸ್ ಯುವಿ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ನವೀಕೃತ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ. ಟಾಟಾ ಹೊಸ ಕಾರುಗಳಲ್ಲಿ ನೆಕ್ಸಾನ್ ಫೇಸ್ ಲಿಫ್ಟ್ ಕೂಡಾ ಪ್ರಮುಖವಾಗಿದ್ದು, ಹೊಸ ಕಾರು ಮಾದರಿಯು ಈ ಬಾರಿ ವಿನೂತನ ವಿನ್ಯಾಸದೊಂದಿಗೆ ಟರ್ಬೊ ವರ್ಷನ್ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.
ಹೊಸ ನೆಕ್ಸಾನ್ ಫೇಸ್ ಲಿಫ್ಟ್ ಬಿಡುಗಡೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಹಲವು ಟೀಸರ್ ಪ್ರಕಟಿಸಿದ್ದು, ಟೀಸರ್ ಮೂಲಕ ನೆಕ್ಸಾನ್ ಸಂಭಾವ್ಯ ಗ್ರಾಹಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಭಾರತದಲ್ಲಿ ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್ ಕಾರು 2020ರಲ್ಲಿ ಮೊದಲ ನವೀಕರಣ ಪಡೆದುಕೊಂಡಿತ್ತು. ಇದೀಗ ಹೊಸ ಆವೃತ್ತಿಯಲ್ಲಿ ಮತ್ತಷ್ಟು ಬದಲಾವಣೆ ಪರಿಚಯಿಸಲಾಗಿದ್ದು, ಇದರಲ್ಲಿ ಟರ್ಬೊ ಆವೃತ್ತಿಯು ಗಮನಸೆಳೆಯಲಿದೆ.
ಇದನ್ನೂ ಓದಿ: ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಮಾದರಿಗಿಂತಲೂ ಆಕರ್ಷಕ ವೈಶಿಷ್ಟ್ಯತೆಗಳನ್ನ ಹೊಂದಿರುವ ನೆಕ್ಸಾನ್ ಕಾರು ಇದುವರೆಗೆ 5 ಲಕ್ಷ ಯುನಿಟ್ ಮಾರಾಟ ದಾಖಲೆ ನಿರ್ಮಿಸಿದೆ. 2020ರಲ್ಲಿ ಬಿಡುಗಡೆಯಾಗಿದ್ದ ನವೀಕೃತ ಮಾದರಿಯು ಇದರಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ಇದೀಗ ಬಿಡುಗಡೆಯಾಗಲಿರುವ ಫೇಸ್ ಲಿಫ್ಟ್ ಆವೃತ್ತಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಮತ್ತಷ್ಟು ಗಮನಸೆಳೆಯಲಿದೆ. ಇದಕ್ಕಾಗಿ ಹಲವಾರು ಸುತ್ತಿನ ರೋಡ್ ಟೆಸ್ಟಿಂಗ್ ನಡೆಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದೆ.
ನೆಕ್ಸಾನ್ ಫೇಸ್ ಲಿಫ್ಟ್ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕವಾದ ಹೊರ ವಿನ್ಯಾಸದೊಂದಿಗೆ ಒಳಭಾಗದಲ್ಲೂ ಗಮನಾರ್ಹವಾದ ಬದಲಾವಣೆ ತಂದಿದೆ. ನವೀಕೃತ ಬಂಪರ್ ಜೊತೆ ಬ್ಯಾನೆಟ್ ವಿನ್ಯಾಸದಲ್ಲೂ ಗುರುತರ ಬದಲಾವಣೆಯಾಗಿದ್ದು, ಸ್ಪೋರ್ಟಿ ವ್ಹೀಲ್ ಆರ್ಚ್ ಕಾರಿಗೆ ಮತ್ತಷ್ಟು ಬಲಿಷ್ಠ ನೋಟ ನೀಡಲಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಮಹತ್ವದ ಬದಲಾವಣೆ ತರಲಾಗಿದ್ದು, ಹೊಸದಾಗಿ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಗಮನಸೆಳೆಯುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್, ಫ್ರಂಟ್ ವೆಂಟಿಲೆಟೆಡ್ ಸೀಟುಗಳು, ಸನ್ ರೂಫ್, ಏರ್ ಪ್ಯೂರಿಫೈಯರ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನ ನೀಡಲಾಗಿದೆ.
ಇದನ್ನೂ ಓದಿ: ಹೊಸ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾದ ಸಿಟ್ರನ್ ಇಂಡಿಯಾ
ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಹೊಸ ನೆಕ್ಸಾನ್ ಫೇಸ್ ಲಿಫ್ಟ್ ಕಾರಿನಲ್ಲಿ ಈ ಹಿಂದಿನಂತೆಯೇ ಎಂಜಿನ್ ಆಯ್ಕೆ ಮುಂದುವರಿಸಲಿದ್ದು, ಹೆಚ್ಚುವರಿಯಾಗಿ ಟರ್ಬೊ ವರ್ಷನ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೊ ವರ್ಷನ್ ಅಭಿವೃದ್ದಿಪಡಿಸಲಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಜೊತೆಗೆ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಇದರೊಂದಿಗೆ ಹೊಸ ಫೇಸ್ ಲಿಫ್ಟ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಸೌಲಭ್ಯಗಳನ್ನ ಸಹ ಜೋಡಣೆ ಮಾಡಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ರೂ. 1 ಲಕ್ಷದಿಂದ ರೂ. 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.