AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಡ್ ಇನ್ ಇಂಡಿಯಾ ನಿರ್ಮಾಣದ ಕವಾಸಕಿ ನಿಂಜಾ 300 ಬೈಕ್ ಬಿಡುಗಡೆ

ಕವಾಸಕಿ ಕಂಪನಿ ತನ್ನ ಹೊಸ ನಿಂಜಾ 300 ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಮೇಡ್ ಇನ್ ಇಂಡಿಯಾ ನಿರ್ಮಾಣದ ಕವಾಸಕಿ ನಿಂಜಾ 300 ಬೈಕ್ ಬಿಡುಗಡೆ
ಕವಾಸಕಿ ನಿಂಜಾ 300 ಬೈಕ್
Praveen Sannamani
|

Updated on:Jun 17, 2024 | 5:19 PM

Share

ಜಪಾನ್ ಮೂಲದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕವಾಸಕಿ (Kawasaki) ಭಾರತದಲ್ಲೂ ವಿವಿಧ ಬೈಕ್ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಕಂಪನಿಯು ನವೀಕೃತ ನಿಂಜಾ 300 ಬೈಕ್ ಬಿಡುಗಡೆ ಮಾಡಿದೆ. ಹೊಸ ಬೈಕ್ ವಿಶೇಷತೆಯೆಂದರೆ ನಿಂಜಾ 300 ಬೈಕ್ ಇನ್ಮುಂದೆ ಭಾರತದಲ್ಲಿಯೇ ಸಂಪೂರ್ಣವಾಗಿ ಉತ್ಪಾದನೆಗೊಳ್ಳುತ್ತಿದ್ದು, ಹೊಸ ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 3.43 ಲಕ್ಷ ಬೆಲೆ ಹೊಂದಿದೆ.

2013ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣವಾಗಿ ಸಿಬಿಯು ಆವೃತ್ತಿಯಾಗಿ ಮಾರಾಟವಾಗುತ್ತಿದ್ದ ನಿಂಜಾ 300 ಬೈಕ್ ಮಾದರಿಯು ಸಾಕಷ್ಟು ದುಬಾರಿ ಬೆಲೆಯೊಂದಿಗೆ ಮಾರಾಟವಾಗುತ್ತಿತ್ತು. ಸುಮಾರು 10 ವರ್ಷಗಳ ಹಿಂದೆಯೇ ಎಕ್ಸ್ ಶೋರೂಂ ಪ್ರಕಾರ ರೂ. 3.50 ಲಕ್ಷ ಬೆಲೆ ಹೊಂದಿದ್ದ ನಿಂಜಾ 300 ಬೈಕ್ ಮಾದರಿಯು ಇದೀಗ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಫೀಚರ್ಸ್ ಗಳೊಂದಿಗೆ ಬೆಲೆಯಲ್ಲೂ ಗಮನಸೆಳೆಯುತ್ತಿದೆ.

Kawasaki Ninja 300 (1)

ನಿಂಜಾ 300 ಬೈಕ್ ಮಾದರಿಯನ್ನು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳಿಸುತ್ತಿರುವ ಕವಾಸಕಿ ಕಂಪನಿಯು ನಿಂಜಾ 400 ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ನಿಂಜಾ 300 ಬೈಕ್ ಮಾದರಿಯೇ ವಿದೇಶಿ ಮಾರುಕಟ್ಟೆಗಳಲ್ಲಿ ನಿಂಜಾ 400 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಆವೃತ್ತಿಯಲ್ಲಿ ಇದೀಗ ಮಹತ್ವದ ಬದಲಾವಣೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಜುಲೈ 17ಕ್ಕೆ ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್

2024ರ ನಿಂಜಾ 300 ಬೈಕ್ ಮಾದರಿಯು ಕ್ಯಾಂಡಿ ಲೈಮ್ ಗ್ರೀನ್ ಮತ್ತು ಮೂನ್ ಡಸ್ಟ್ ಗ್ರೇ ಬಣ್ಣಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ಇದು ಈ 300 ಸಿಸಿ ವಿಭಾಗದಲ್ಲಿರುವ ಮೊದಲ ಟ್ವಿನ್ ಸಿಲಿಂಡರ್ ಸೌಲಭ್ಯದ ಬೈಕ್ ಆವೃತ್ತಿಯಾಗಿದೆ. ಹೊಸ ಬೈಕ್ ಮಾದರಿಯಲ್ಲಿ 296 ಸಿಸಿ ಪ್ಯಾರಾಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 38.88 ಹಾರ್ಸ್ ಪವರ್ ಮತ್ತು 26.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಬೈಕ್ ಮಾದರಿಯ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪೋರ್ಕ್ಸ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ಸಸ್ಷೆಂಷನ್ ನೀಡಲಾಗಿದ್ದು, ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನಲ್ ಎಬಿಎಸ್, 17 ಇಂಚಿನ ಅಲಾಯ್ ವ್ಹೀಲ್ಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

Published On - 5:19 pm, Mon, 17 June 24