Audi Q7: ಸಖತ್ ಫೀಚರ್ಸ್ ಹೊಂದಿರುವ ಆಡಿ ಕ್ಯೂ7 ಬೋಲ್ಡ್ ಎಡಿಷನ್ ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಸ್ ಯುವಿ ಆವೃತ್ತಿಯಾಗಿರುವ ಕ್ಯೂ7 ಮಾದರಿಯಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

Audi Q7: ಸಖತ್ ಫೀಚರ್ಸ್ ಹೊಂದಿರುವ ಆಡಿ ಕ್ಯೂ7 ಬೋಲ್ಡ್ ಎಡಿಷನ್ ಬಿಡುಗಡೆ
ಆಡಿ ಕ್ಯೂ7 ಬೋಲ್ಡ್ ಎಡಿಷನ್
Follow us
Praveen Sannamani
|

Updated on:May 21, 2024 | 7:39 PM

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಆಡಿ(Audi) ತನ್ನ ಹೊಸ ಕ್ಯೂ7 (Q7) ಬೋಲ್ಡ್ ಎಡಿಷನ್ ಬಿಡುಗಡೆ ಮಾಡಿದ್ದು, ವಿಶೇಷ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 97.84 ಲಕ್ಷ ಬೆಲೆ ಹೊಂದಿದೆ. ಕ್ಯೂ7 ಬೋಲ್ಡ್ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಫೀಚರ್ಸ್ ಮತ್ತು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಿದ್ದು, ಇದು ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ನಿರ್ಮಾಣದ ಪ್ರಮುಖ ಎಸ್ ಯುವಿ ಕಾರುಗಳಿಗೆ ಉತ್ತಮ ಪೈಪೋಟಿಯಾಗಿದೆ.

ಅತಿಹೆಚ್ಚು ಬೇಡಿಕೆಯಲ್ಲಿರುವ ಐಷಾರಾಮಿ ಎಸ್ ಯುವಿ ಕಾರುಗಳಲ್ಲಿ ಆಡಿ ಕ್ಯೂ7 ಕೂಡಾ ಒಂದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಇದರಲ್ಲಿ ಹಲವಾರು ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಹೊಸದಾಗಿ ಬೋಲ್ಡ್ ಎಡಿಷನ್ ಪರಿಚಯಿಸಲಾಗಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 3.30 ಲಕ್ಷದಷ್ಟು ಹೆಚ್ಚು ದುಬಾರಿಯಾಗಿರಲಿದೆ.

ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಹೊಂದಿರುವ ಐಷಾರಾಮಿ ಕಾರುಗಳನ್ನು ಬಯಸುವ ಗ್ರಾಹಕರಿಗೆ ಇತ್ತೀಚೆಗೆ ಕ್ಯೂ3, ಕ್ಯೂ3 ಸ್ಪೋರ್ಟ್ ಬ್ಯಾಕ್ ಮಾದರಿಗಳಲ್ಲೂ ಬೋಲ್ಡ್ ಎಡಿಷನ್ ಬಿಡುಗಡೆ ಮಾಡಿರುವ ಆಡಿ ಕಂಪನಿ ಇದೀಗ ಕ್ಯೂ7 ನಲ್ಲೂ ವಿಶೇಷ ಆವೃತ್ತಿ ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯಲ್ಲಿ ಕಂಪನಿಯು ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ವಿಂಗ್ ಮಿರರ್, ವಿಂಡೋ ಸರೌಂಡ್, ರೂಫ್ ರೈಲ್ಸ್ ಮತ್ತು ಆಡಿ ಲೊಗೊ ನೀಡಲಾಗಿದ್ದು, ಹೊಸ ವಿನ್ಯಾಸಗಳನ್ನು ಗ್ಲಾಸ್ ಬ್ಲ್ಯಾಕ್ ಫಿನಿಶ್ ಹೊಂದಿರುವ ಪ್ರಮುಖ ಆಕರ್ಷಕವಾಗಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಗ್ಲಾಸ್ ಬ್ಲ್ಯಾಕ್ ಫಿನಿಶ್ ನೊಂದಿಗೆ ಹೊಸ ಕಾರಿನಲ್ಲಿ ಗ್ಲೆಸಿರ್ ವೈಟ್, ಮೈತಾಸ್ ಬ್ಲ್ಯಾಕ್, ನವಾರಾ ಬ್ಲ್ಯೂ ಮತ್ತು ಸಮುರಾಯೈ ಗ್ರೇ ಬಣ್ಣಗಳ ಆಯ್ಕೆಯನ್ನು ನೀಡಲಾಗಿದ್ದು, ಇದರೊಂದಿಗೆ ಹೊಸ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್ಸ್, 19 ಸ್ಪೀಕರ್ಸ್ ಹೊಂದಿರುವ ಬ್ಯಾಂಗ್ ಅಂಡ್ ಒಲುಫ್ಸೆನ್ ಸೌಂಡ್ ಸಿಸ್ಟಂ, ಪನೊರಮಿಕ್ ಸನ್ ರೂಫ್, 4 ಝೋನ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್ ಸೇರಿದಂತೆ ಲೈನ್ ಡಿಪಾರ್ಚರ್ ವಾರ್ನಿಂಗ್ ಫೀಚರ್ಸ್ ನೀಡಲಾಗಿದೆ.

ಇದನ್ನೂ ಓದಿ: ಟಾಟಾ ಕರ್ವ್ ಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾದ ಸಿಟ್ರನ್ ಬಸಾಲ್ಟ್

ಇನ್ನುಳಿದಂತೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಮುಂದುವರಿಸಲಾಗಿದ್ದು, ಇದರಲ್ಲಿ 3.0 ಲೀಟರ್ ವಿ6 ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದ್ದು, 340 ಹಾರ್ಸ್ ಪವರ್ ಉತ್ಪಾದನಾ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಹೊಸ ಕಾರಿನಲ್ಲಿ ಆಟೋ, ಕಂಫರ್ಟ್, ಡೈನಾಮಿಕ್, ಎಫಿಸೈನ್ಸಿ, ಆಫ್ ರೋಡ್, ಆಲ್ ರೋಡ್ ಮತ್ತು ಇಂಡಿವಿಜುಯಲ್ ಎನ್ನುವ ಏಳು ಡ್ರೈವ್ ಮೋಡ್ ಗಳನ್ನು ಪಡೆದುಕೊಂಡಿದೆ.

Published On - 7:36 pm, Tue, 21 May 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ