Auto Tips: ನಿಮ್ಮ ಹಳೆಯ ಕಾರನ್ನು ಮಾರಾಟ ಮಾಡುವ ಬದಲು, ಸ್ಕ್ರ್ಯಾಪ್‌ಗೆ ನೀಡಿ ಲಾಭ ಪಡೆಯಿರಿ: ಹೇಗೆ?

Car scrappage policy: ಆಟೋಮೊಬೈಲ್ ಕಂಪನಿಗಳು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಗ್ರಾಹಕರಿಗೆ ಹೊಸ ಕಾರುಗಳ ಮೇಲೆ ಶೇ. 1.5 ರಿಂದ ಶೇ. 3.5 ರಷ್ಟು ರಿಯಾಯಿತಿ ನೀಡಲು ಒಪ್ಪಿಕೊಂಡಿವೆ. ಅಲ್ಲದೆ, ಕೆಲವು ಉನ್ನತ ಐಷಾರಾಮಿ ಕಾರು ತಯಾರಕರು ಸುಮಾರು ರೂ. 25,000 ರಷ್ಟು ರಿಯಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ.

Auto Tips: ನಿಮ್ಮ ಹಳೆಯ ಕಾರನ್ನು ಮಾರಾಟ ಮಾಡುವ ಬದಲು, ಸ್ಕ್ರ್ಯಾಪ್‌ಗೆ ನೀಡಿ ಲಾಭ ಪಡೆಯಿರಿ: ಹೇಗೆ?
Car Scrap

Updated on: Jun 10, 2025 | 1:12 PM

ಬೆಂಗಳೂರು (ಜೂ. 10): ದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ (Car Scrap) ನೀತಿ ಜಾರಿಗೆ ಬಂದ ನಂತರ, ಇದುವರೆಗೆ 1.2 ಲಕ್ಷ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. ಇವುಗಳಲ್ಲಿ ಸುಮಾರು 61,000 ಕಾರುಗಳು 15 ವರ್ಷಗಳಿಗಿಂತ ಹಳೆಯದಾದ ಸರ್ಕಾರಿ ವಾಹನಗಳಾಗಿದ್ದವು. ಅದೇ ಸಮಯದಲ್ಲಿ, ಮಾರ್ಚ್ 2025 ರ ವೇಳೆಗೆ ಸುಮಾರು 90,000 ಹಳೆಯ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆಯಂತೆ. ಈ ಅಂಕಿಅಂಶಗಳನ್ನು ನೋಂದಾಯಿತ ಸ್ಕ್ರ್ಯಾಪಿಂಗ್ ಕೇಂದ್ರಗಳಿಂದ ಸಂಗ್ರಹಿಸಲಾಗಿದೆ. ಈಗ ಹಳೆಯ ವಾಹನಗಳನ್ನು ರಸ್ತೆಯಲ್ಲಿ ಓಡದಂತೆ ಮಾಡುವ ಪ್ರಯತ್ನದಲ್ಲಿ ಆಟೋಮೊಬೈಲ್ ಕಂಪನಿಗಳು ಕೂಡ ಸೇರಿಕೊಂಡಿವೆ.

ಹೌದು, ಆಟೋಮೊಬೈಲ್ ಕಂಪನಿಗಳು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಗ್ರಾಹಕರಿಗೆ ಹೊಸ ಕಾರುಗಳ ಮೇಲೆ ಶೇ. 1.5 ರಿಂದ ಶೇ. 3.5 ರಷ್ಟು ರಿಯಾಯಿತಿ ನೀಡಲು ಒಪ್ಪಿಕೊಂಡಿವೆ. ಅಲ್ಲದೆ, ಕೆಲವು ಉನ್ನತ ಐಷಾರಾಮಿ ಕಾರು ತಯಾರಕರು ಸುಮಾರು ರೂ. 25,000 ರಷ್ಟು ರಿಯಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ.

ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸೊಸೈಟಿ ಆಫ್ ಆಟೋಮೊಬೈಲ್ ತಯಾರಕರ (SIAM) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಉತ್ತೇಜಿಸಲು ಆಟೋಮೊಬೈಲ್ ಕಂಪನಿಗಳು ಇದನ್ನು ಒಂದು ದೊಡ್ಡ ಹೆಜ್ಜೆ ಎಂದು ಕರೆಯುತ್ತಿವೆ. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಮಾರುಕಟ್ಟೆಯಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಮಾಲಿನ್ಯವೂ ನಿಯಂತ್ರಿಸಲ್ಪಡುತ್ತದೆ. ಆದಾಗ್ಯೂ, ನೀವು ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಿದರೆ, ಹೊಸ ಕಾರು ಖರೀದಿಸುವುದರಿಂದ ಏನು ಪ್ರಯೋಜನ? ಇಲ್ಲಿ ತಿಳಿಯಿರಿ.

ಇದನ್ನೂ ಓದಿ
ಹೊಸ ಟಾಟಾ ಆಲ್ಟ್ರೋಜ್ ಅಥವಾ ಹುಂಡೈ ಐ20: ಯಾವ ಕಾರು ಖರೀದಿಗೆ ಸೂಕ್ತ?
ಮಹೀಂದ್ರಾ ಥಾರ್​ಗೆ ಭರ್ಜರಿ ಬೇಡಿಕೆ: ಕಳೆದ ತಿಂಗಳು ಸೇಲ್ ಆಗಿದ್ದು ಎಷ್ಟು?
15 ನಿಮಿಷ ಚಾರ್ಜ್-250 ಕಿ.ಮೀ. ದೂರ: ಟಾಟಾದ ಎಲೆಕ್ಟ್ರಿಕ್ ಕಾರು ಬಿಡುಗಡೆ
ನಿಮ್ಮ ವಾಹನದ RC ಕಳೆದುಹೋಗಿದೆಯೇ?: ಟೆನ್ಶನ್ ಬೇಡ ಹೀಗೆ ಡೌನ್​ಲೋಡ್ ಮಾಡಿ

ಸ್ಕ್ರ್ಯಾಪ್ ಮಾಡಿದ ನಂತರ ಪ್ರಮಾಣಪತ್ರ ನೀಡಲಾಗುತ್ತದೆ: ವಾಹನ ಸ್ಕ್ರ್ಯಾಪ್ ನೀತಿ 2021 ರ ಪ್ರಕಾರ, ಯಾವುದೇ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕದಲ್ಲಿ ಸ್ಕ್ರ್ಯಾಪ್ ಮಾಡಿದ ನಂತರ ಅದಕ್ಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ನೀವು ಹೊಸ ಕಾರನ್ನು ಖರೀದಿಸಿದರೆ, ಈ ಪ್ರಮಾಣಪತ್ರದ ಸಹಾಯದಿಂದ, ನೀವು ಕಾರಿನ ವಾಹನ ತೆರಿಗೆಯಲ್ಲಿ ಶೇ. 25 ವರೆಗೆ ರಿಯಾಯಿತಿಯನ್ನು ಪಡೆಯಬಹುದು.

Tata Altroz vs Hyundai i20: ಹೊಸ ಟಾಟಾ ಆಲ್ಟ್ರೋಜ್ ಅಥವಾ ಹುಂಡೈ ಐ20: ಯಾವ ಕಾರು ಖರೀದಿಗೆ ಸೂಕ್ತ?

ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಿ – ಬೆಂಗಳೂರಿನಲ್ಲಿ, 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳಿಗೆ ಶೇ. 10 ರಷ್ಟು RTO ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿದುಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ನೀವು 1,00,000 ರೂ. ವಾಹನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ತೋರಿಸುವ ಮೂಲಕ 25,000 ರೂ. ಗಳನ್ನು ಉಳಿಸಬಹುದು. ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಮೂಲಕ, ನೀವು ಹೊಸ ಕಾರಿನ ಮೌಲ್ಯದ ಶೇ. 4-6 ರಷ್ಟನ್ನು ಪಡೆಯುತ್ತೀರಿ. ಇದರರ್ಥ ನೀವು 10 ಲಕ್ಷ ರೂ. ಗೆ ಕಾರನ್ನು ಖರೀದಿಸಿದರೆ, ನೀವು 60,000 ರೂ. ಗಳ ಸ್ಕ್ರ್ಯಾಪಿಂಗ್ ಮೌಲ್ಯವನ್ನು ಪಡೆಯಬಹುದು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ