Auto Tips: ಕಾರು ನಿಲ್ಲಿಸಲು ಮೊದಲು ಕ್ಲಚ್ ಅಥವಾ ಬ್ರೇಕ್ ಯಾವುದನ್ನು ಒತ್ತಬೇಕು?: ನಿಮಗೆ ತಿಳಿದಿರಲಿ ಈ ವಿಚಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 12:05 PM

ಕಾರನ್ನು ನಿಲ್ಲಿಸುವಾಗ ಮೊದಲು ಕ್ಲಚ್ ಅಥವಾ ಬ್ರೇಕ್ ಯಾವುದನ್ನು ಒತ್ತಬೇಕು? ಈ ರೀತಿ ಪ್ರಶ್ನೆಗಳು ಅನೇಕರಲ್ಲಿರುತ್ತದೆ. ನಿಮ್ಮ ಈ ಗೊಂದಲಕ್ಕೆ ಉತ್ತರ ಕೊಡುವ ಪ್ರಯತ್ನ ನಾವು ಮಾಡುತ್ತೇವೆ. ಇದನ್ನು ತಿಳಿದರೆ ನಿಮ್ಮ ವಾಹನದ ಜೀವಿತಾವಧಿಯನ್ನು ಕೂಡ ಹೆಚ್ಚಿಸಬಹುದು.

Auto Tips: ಕಾರು ನಿಲ್ಲಿಸಲು ಮೊದಲು ಕ್ಲಚ್ ಅಥವಾ ಬ್ರೇಕ್ ಯಾವುದನ್ನು ಒತ್ತಬೇಕು?: ನಿಮಗೆ ತಿಳಿದಿರಲಿ ಈ ವಿಚಾರ
ಸಾಂದರ್ಭಿಕ ಚಿತ್ರ
Follow us on

ಇಂದು ಹೆಚ್ಚಿನವರ ಮನೆಯಲ್ಲಿ ಒಂದು ಕಾರು ಇರುವುದು ಕಾಮನ್. ಆದರೆ ಅನೇಕ ಜನರು ಕಾರನ್ನು ಓಡಿಸುವಾಗ ಕ್ಲಚ್ ಮತ್ತು ಬ್ರೇಕ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವುದಿಲ್ಲ. ಅನೇಕ ಗೊಂದಲಗಳು ಅವರಲ್ಲಿರುತ್ತದೆ. ಮುಖ್ಯವಾಗಿ ವಾಹನವನ್ನು ನಿಲ್ಲಿಸಲು ಸರಿಯಾದ ಮಾರ್ಗ ಯಾವುದು? ಮತ್ತು ಅದರ ಸಂಯೋಜನೆ ಹೇಗಿರಬೇಕು?. ಅಂದರೆ ಕಾರನ್ನು ನಿಲ್ಲಿಸುವಾಗ ಮೊದಲು ಕ್ಲಚ್ ಅಥವಾ ಬ್ರೇಕ್ ಯಾವುದನ್ನು ಒತ್ತಬೇಕು? ಈ ರೀತಿ ಪ್ರಶ್ನೆಗಳು ಅನೇಕರಲ್ಲಿರುತ್ತದೆ. ಇದನ್ನು ತಿಳಿದರೆ ನಿಮ್ಮ ವಾಹನದ ಜೀವಿತಾವಧಿಯನ್ನು ಕೂಡ ಹೆಚ್ಚಿಸಬಹುದು.

ನಿಧಾನವಾಗಿದ್ದರೆ ಮೊದಲು ಕ್ಲಚ್ ಒತ್ತಿ:

ನಿಮ್ಮ ವಾಹನದ ವೇಗ ಕಡಿಮೆಯಿದ್ದರೆ, ಮೊದಲು ನೀವು ಕ್ಲಚ್ ಅನ್ನು ಒತ್ತಿ ಮತ್ತು ನಂತರ ಬ್ರೇಕ್ ಅನ್ನು ಬಳಸಬೇಕು. ಇದರಿಂದ ಎಂಜಿನ್ ನಿಲ್ಲುವುದಿಲ್ಲ ಮತ್ತು ವಾಹನಕ್ಕೆ ಯಾವುದೆ ಅಡಚಣೆಯಾಗದೆ ನಿಧಾನವಾಗಿ ನಿಲ್ಲುತ್ತದೆ.

ಹೆಚ್ಚಿನ ವೇಗದಲ್ಲಿ ಬ್ರೇಕ್:

ನಿಮ್ಮ ಕಾರು ವೇಗವಾಗಿ ಚಲಿಸುತ್ತಿದ್ದರೆ ಮೊದಲು ಕಾರಿನ ವೇಗವನ್ನು ಕಡಿಮೆ ಮಾಡಲು ಬ್ರೇಕ್ ಅನ್ನು ಒತ್ತಿ ಮತ್ತು ನಂತರ ಕ್ಲಚ್ ಬಳಸಿ.ಆಗ ಎಂಜಿನ್ ವೇಗ ಮತ್ತು ವಾಹನದ ವೇಗವು ಸಮಾನವಾಗಿರುತ್ತದೆ, ಇದು ನಿಮ್ಮ ಪೆಟ್ರೋಲ್ ಅನ್ನು ಉಳಿಸುತ್ತದೆ ಮತ್ತು ವಾಹನದ ಜೀವನವನ್ನು ಹೆಚ್ಚಿಸುತ್ತದೆ.

ಎಂಜಿನ್ ಬ್ರೇಕಿಂಗ್​ನ ಉಪಯೋಗ:

ರಸ್ತೆ ಖಾಲಿಯಾಗಿರುವಾಗ ನೀವು ನಿಧಾನಗೊಳಿಸಲು ಬಯಸಿದರೆ, ಗೇರ್ ಉಪಯೋಗಿಸಿ. ಅಂದರೆ 4 ರಿಂದ 3 ನೇ ಗೇರ್‌ಗೆ ಬದಲಾಯಿಸಿ ವೇಗ ಕಡಿಮೆ ಮಾಡಿ. ಇದನ್ನು ಎಂಜಿನ್ ಬ್ರೇಕಿಂಗ್ ಎಂದು ಕರೆಯಲಾಗುತ್ತದೆ ಮತ್ತು ಇದು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

ಈ ವಿಧಾನಗಳಿಂದ ಕಾರಿನ ಮೈಲೇಜ್ ಹೆಚ್ಚಿಸಬಹುದು:

ನಿಮ್ಮ ಕಾರಿನ ಮೈಲೇಜ್ ಬಗ್ಗೆ ನೀವು ಗಮನ ಹರಿಸುತ್ತಿದ್ದರೆ ಮತ್ತು ನಿಮ್ಮ ಕಾರಿನ ಮೈಲೇಜ್ ಅನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂದು ತಿಳಿದಿಲ್ಲದಿದ್ದರೆ ಈ ಕುರಿತ ಮಾಹಿತಿ ನಾವು ನೀಡುತ್ತೇವೆ.
ಸರಾಗವಾಗಿ ಚಾಲನೆ ಮಾಡಿ: ವೇಗವನ್ನು ನಿಧಾನವಾಗಿ ಹೆಚ್ಚಿಸಿ ಮತ್ತು ನಿಧಾನವಾಗಿ ಬ್ರೇಕ್ ಮಾಡಿ. ವೇಗದ ಚಾಲನೆ ಮತ್ತು ಹಠಾತ್ ಬ್ರೇಕಿಂಗ್‌ನಿಂದ ಇಂಧನ ಬಳಕೆ ಹೆಚ್ಚಾಗುತ್ತದೆ.

ವೇಗದ ಮಿತಿಗಳನ್ನು ಗಮನಿಸಿ: ಯಾವಾಗಲೂ ಮಧ್ಯಮ ವೇಗದಲ್ಲಿ (40-60 km/h) ಕಾರನ್ನು ಚಾಲನೆ ಮಾಡಿ. ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಚಾಲನೆ ಮಾಡುವುದು ಹೆಚ್ಚು ಇಂಧನವನ್ನು ಬಳಸುತ್ತದೆ.

ಇಂಜಿನ್ ಆನ್ ಇಟ್ಟುಕೊಳ್ಳಬೇಡಿ: ಟ್ರಾಫಿಕ್ ಸಿಗ್ನಲ್ ಅಥವಾ ಜಾಮ್‌ ಇರುವಾಗ ವಾಹನವನ್ನು ದೀರ್ಘಕಾಲದವರೆಗೆ ನಿಲ್ಲಿಸಿದರೆ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡಿ. ಇದರಿಂದ ಇಂಧನ ವ್ಯರ್ಥವಾಗುವುದಿಲ್ಲ.

ಸರಿಯಾದ ಗೇರ್‌ನಲ್ಲಿ ಚಾಲನೆ ಮಾಡಿ: ಕಡಿಮೆ ಗೇರ್‌ನಲ್ಲಿ ಚಾಲನೆ ಮಾಡುವುದರಿಂದ ಎಂಜಿನ್‌ಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಇದು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಗೇರ್‌ನಲ್ಲಿ ಚಾಲನೆ ಮಾಡುವುದರಿಂದ ಮೈಲೇಜ್ ಸುಧಾರಿಸುತ್ತದೆ.

ಸರಿಯಾದ ಟೈರ್: ಕಾರಿನ ಟೈರ್‌ಗಳಲ್ಲಿ ಸರಿಯಾದ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳಿ. ಕಡಿಮೆ ಗಾಳಿ ಇದ್ದಾಗ, ಕಾರಿನ ಮೇಲೆ ಒತ್ತಡ ಹೆಚ್ಚುತ್ತದೆ, ಇದು ಇಂಧನ ಬಳಕೆಯನ್ನೂ ಹೆಚ್ಚಿಸುತ್ತದೆ.

ಎಸಿ ಬಳಕೆ: ಎಸಿಯ ಅತಿಯಾದ ಬಳಕೆ ಕಕೂಡ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಅಗತ್ಯವಿಲ್ಲದಿದ್ದಾಗ ಎಸಿ ಆಫ್ ಮಾಡಿ. ಹಾಗೆಯೆ ಹೆಚ್ಚುವರಿ ಲಗೇಜ್ ಅನ್ನು ವಾಹನದಲ್ಲಿ ಇಡುವುದರಿಂದ ಅದರ ತೂಕ ಹೆಚ್ಚಾಗುತ್ತದೆ, ಆಗ ಎಂಜಿನ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ