AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bajaj Pulsar NS400Z: ಅಚ್ಚರಿಯ ಬೆಲೆಗೆ ಬಜಾಜ್ ಪಲ್ಸರ್ ಎನ್ಎಸ್400ಜೆಡ್ ಬಿಡುಗಡೆ

ಬಜಾಜ್ ಆಟೋ ಕಂಪನಿಯು ತನ್ನ ಹೊಚ್ಚ ಹೊಸ ಪಲ್ಸರ್ ಎನ್ಎಸ್400ಜೆಡ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎನ್ಎಸ್ ಸರಣಿಯಲ್ಲಿಯೇ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Bajaj Pulsar NS400Z: ಅಚ್ಚರಿಯ ಬೆಲೆಗೆ ಬಜಾಜ್ ಪಲ್ಸರ್ ಎನ್ಎಸ್400ಜೆಡ್ ಬಿಡುಗಡೆ
ಬಜಾಜ್ ಪಲ್ಸರ್ ಎನ್ಎಸ್400ಜೆಡ್ ಬಿಡುಗಡೆ
Praveen Sannamani
|

Updated on:May 03, 2024 | 10:29 PM

Share

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ (Bajaj Auto) ಕಂಪನಿಯು ತನ್ನ ಬಹುನೀರಿಕ್ಷಿತ ಪಲ್ಸರ್ ಎನ್ಎಸ್400ಜೆಡ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.85 ಲಕ್ಷ ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯ ಸಂಪೂರ್ಣವಾಗಿ ಹೊಸ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದ್ದು, ಇದು ಡೋಮಿನಾರ್ 400 ಮಾದರಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಿದೆ.

ಹೊಸ ಪಲ್ಸರ್ ಎನ್ಎಸ್400ಜೆಡ್ ಬೈಕ್ ಮಾದರಿಯು ಡೋಮಿನಾರ್ 400 ಬೈಕ್ ಮಾದರಿಗಿಂತಲೂ ರೂ. 46 ಸಾವಿರದಷ್ಟು ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರಲಿದ್ದು, ಹೊಸ ಬೈಕಿನಲ್ಲಿ ಬಹುತೇಕ ತಾಂತ್ರಿಕ ಅಂಶಗಳನ್ನು ಡೋಮಿನಾರ್ 400 ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದೆ. ಬಜಾಜ್ ಕಂಪನಿಯು ಎನ್ಎಸ್ ಸರಣಿಯಲ್ಲಿ ಈಗಾಗಲೇ ಎನ್ಎಸ್125, ಎನ್ಎಸ್160 ಮತ್ತು ಎನ್ಎಸ್200 ಬೈಕ್ ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸ ಎನ್ಎಸ್400ಜೆಡ್ ಮೂಲಕ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್

ಪಲ್ಸರ್ ಎನ್ಎಸ್400ಜೆಡ್ ಬೈಕ್ ಮಾದರಿಯಲ್ಲಿ ಬಜಾಜ್ ಕಂಪನಿಯು ಡೋಮಿನಾರ್ 400 ಮಾದರಿಯಲ್ಲಿರುವಂತೆ 373.27 ಸಿಸಿ ಎಂಜಿನ್‌ ಜೋಡಣೆ ಮಾಡುತ್ತಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 40 ಹಾರ್ಸ್ ಪವರ್ ಮತ್ತು 35 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಜೊತೆಗೆ ಪರ್ಫಾಮೆನ್ಸ್ ಗೆ ಪೂರಕವಾಗಿ ಕ್ವಿಕ್ ಥ್ರೊಟಲ್ ಪ್ರತಿಕ್ರಿಯೆಗಾಗಿ ರೈಡ್-ಬೈ-ವೈರ್ ತಂತ್ರಜ್ಞಾನವನ್ನು ಅಳವಡಿಸಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಸವಾರರು ಬೈಕ್ ಸವಾರಿಗೆ ಅನುಕೂಲಕರವಾಗುವಂತೆ ರೋಡ್‌, ರೈನ್, ಸ್ಪೋರ್ಟ್ ಮತ್ತು ಆಫ್‌ರೋಡ್ ಎನ್ನುವ ರೈಡ್‌ಮೋಡ್‌ಗಳನ್ನು ನೀಡಲಾಗಿದೆ.

ಹೊಸ ಬೈಕಿನಲ್ಲಿ ಡೋಮಿನಾರ್ 400 ಮಾದರಿಯಲ್ಲಿರುವಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ 43ಎಂಎಂ ಗೋಲ್ಡ್ ಫೀನಿಶ್ಡ್ ಯುಎಸ್ ಡಿ ಫೋರ್ಕ್‌ಗಳು ಮತ್ತು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾಕ್ ಸಸ್ಷೆಂಷನ್ ನೀಡಲಾಗಿದೆ. ಹಾಗೆಯೇ ಸ್ಮಾರ್ಟ್ 4 – ವೇ ಸ್ವಿಚ್‌ ಹೊಂದಿರುವ ರೈಡ್-ಬೈ- ವೈರ್, ಎಲ್ಇಡಿ ಪ್ರೊಜೆಕ್ಟರ್ ಡಿಆರ್‌ಎಲ್‌ಗಳೊಂದಿಗೆ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್ಸ್ ನೀಡಲಾಗಿದ್ದು, ಪ್ರೀಮಿಯಂ ರೈಡಿಂಗ್ ಅನುಭವಕ್ಕಾಗಿ ಎಲ್ ಸಿಡಿ ಡಿಸ್ ಪ್ಲೇ ನೊಂದಿಗೆ ನ್ಯಾವಿಗೇಷನ್ ಮತ್ತು ಮ್ಯೂಸಿಕ್ ಕಂಟ್ರೋಲ್‌ ನೀಡಲಾಗಿದೆ.

ಇದನ್ನೂ ಓದಿ: ಸಖತ್ ಫೀಚರ್ಸ್ ಮತ್ತು ಭರ್ಜರಿ ಮೈಲೇಜ್ ನೀಡುವ ಆಂಪಿಯರ್ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ

ಇನ್ನು ಹೊಸ ಬೈಕ್ ಮಾದರಿಯು 805 ಎಂಎಂ ಆಸನದ ಎತ್ತರದೊಂದಿಗೆ ಒಟ್ಟಾರೆ 176 ಕೆ.ಜಿ ತೂಕ ಪಡೆದುಕೊಂಡಿದ್ದು, ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ ಫೋರ್ ಪಿಸ್ಟನ್ ಹೊಂದಿರುವ 320 ಎಂಎಂ ಡಿಸ್ಕ್ ಬ್ರೇಕ್, ಹಿಂಬದಿಯಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಮತ್ತು ಮೂರು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಜೊತೆ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನಲ್ ಎಬಿಎಸ್ ನೀಡಲಾಗಿದೆ.

Published On - 10:26 pm, Fri, 3 May 24