ವರ್ಷಾಂತ್ಯದಲ್ಲಿ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್!

ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಪ್ರಮುಖ ಕಾರು ಕಂಪನಿಗಳು ಸಂಭಾವ್ಯ ಗ್ರಾಹಕರಿಗೆ ವರ್ಷಾಂತ್ಯದಲ್ಲಿ ಭಾರೀ ಪ್ರಮಾಣದ ಆಫರ್ ಗಳನ್ನು ಘೋಷಣೆ ಮಾಡಿವೆ.

ವರ್ಷಾಂತ್ಯದಲ್ಲಿ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್!
ಪ್ರಮುಖ ಕಾರುಗಳ ಮೇಲೆ ಅತ್ಯುತ್ತಮ ಇಯರ್ ಎಂಡ್ ಆಫರ್
Follow us
Praveen Sannamani
|

Updated on:Dec 21, 2022 | 8:10 PM

ವರ್ಷಾಂತ್ಯದಲ್ಲಿ ಪ್ರಮುಖ ಕಾರು ಕಂಪನಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಇಯರ್ ಎಂಡ್ ಆಫರ್(Year End Offers) ಘೋಷಿಸಿವೆ. ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು. ಹೊಸ ಆಫರ್ ಗಳಲ್ಲಿ ಕಾರ್ಪೊರೇಟ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ವರ್ಷಾಂತ್ಯದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ಕೋವಿಡ್ ಪರಿಣಾಮ ತಗ್ಗಿದ್ದ ಹೊಸ ವಾಹನಗಳ ಮಾರಾಟವು ಇದೀಗ ಸಾಕಷ್ಟು ಸುಧಾರಿಸಿದೆ. ಅದರಲ್ಲೂ ಎಂಟ್ರಿ ಲೆವೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ಮತ್ತಷ್ಟು ಬೇಡಿಕೆ ಹರಿದು ಬರುವ ನೀರಿಕ್ಷೆಯಿದ್ದು, ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಆಕರ್ಷಕ ಆಫರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ ಸೇರಿ ವಿವಿಧ ಕಾರು ಕಂಪನಿಗಳು ಭರ್ಜರಿ ಇಯರ್ ಎಂಡ್ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ವಿವಿಧ ವೆರಿಯೆಂಟ್ ಆಧರಿಸಿ ನಿರ್ಧಾರವಾಗುತ್ತವೆ.

ಮಾರುತಿ ಸುಜುಕಿ ಮಾರುತಿ ಸುಜುಕಿ ಕಂಪನಿಯ ಅರೆನಾ ಕಾರುಗಳ ಮೇಲೆ ಸುಮಾರು ರೂ. 32 ಸಾವಿರದಿಂದ ರೂ. 55 ಆಫರ್ ನೀಡುತ್ತಿದೆ. ಆಲ್ಟೋ ಕೆ10, ಸೆಲೆರಿಯೊ, ವ್ಯಾಗನ್ ಆರ್, ಡಿಜೈರ್ ಮತ್ತು ಸ್ವಿಫ್ಟ್ ಕಾರುಗಳ ಮೇಲೆ ಉತ್ತಮ ಆಫರ್ ಲಭ್ಯವಿದೆ. ಹಾಗೆಯೇ ಮಾರುತಿ ಸುಜುಕಿ ಕಂಪನಿಯು ತನ್ನ ನೆಕ್ಸಾ ಕಾರುಗಳ ಮೇಲೂ ಆಫರ್ ನೀಡುತ್ತಿದ್ದು, ಸಿಯಾಜ್, ಇಗ್ನಿಸ್ ಮತ್ತು ಬಲೆನೊ ಕಾರುಗಳ ಮೇಲೆ ಆಫರ್ ಲಭ್ಯವಿದೆ. ನೆಕ್ಸಾ ಕಾರುಗಳ ಮೇಲೆ ಗರಿಷ್ಠ ರೂ. 55 ಸಾವಿರ ತನಕ ಆಫರ್ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಅಪಘಾತಗಳನ್ನು ತಪ್ಪಿಸಲು ನೆರವಾಗುವ ಎಡಿಎಎಸ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತಾ?

ಹ್ಯುಂಡೈ ಮಾರುತಿ ಸುಜುಕಿ ನಂತರ ಹ್ಯುಂಡೈ ಕಂಪನಿಯು ವಿವಿಧ ಕಾರುಗಳ ಮೇಲೆ ರೂ. 30 ಸಾವಿರದಿಂದ ರೂ. 1.50 ಲಕ್ಷದ ತನಕ ಡಿಸ್ಕೌಂಟ್ ನೀಡುತ್ತಿದೆ. ಕೊನಾ ಎಲೆಕ್ಟ್ರಿಕ್, ಗ್ರ್ಯಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರುಗಳ ಖರೀದಿ ಮೇಲೆ ಆಫರ್ ಲಭ್ಯವಿದ್ದು, ಕೊನಾ ಎಲೆಕ್ಟ್ರಿಕ್ ಕಾರಿನ ಮೇಲೆ ಹೆಚ್ಚಿನ ಆಫರ್ ನೀಡುತ್ತಿದೆ.

ಟಾಟಾ ಮೋಟಾರ್ಸ್ ಟಾಟಾ ಮೋಟಾರ್ಸ್ ಕಂಪನಿ ಸಹ ಡಿಸೆಂಬರ್ ಅವಧಿಯಲ್ಲಿ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಸಫಾರಿ, ಹ್ಯಾರಿಯರ್, ಟಿಯಾಗೋ, ಟಿಗೋರ್ ಮತ್ತು ಆಲ್ಟ್ರೊಜ್ ಕಾರುಗಳ ಮೇಲೆ ಹೊಸ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಟಾಟಾ ಕಂಪನಿಯು ರೂ. 35 ಸಾವಿರದಿಂದ ರೂ. 65 ಸಾವಿರ ತನಕ ಡಿಸ್ಕೌಂಟ್ ಘೋಷಿಸಿದೆ.

ಮಹೀಂದ್ರಾ ಪ್ರಮುಖ ಕಾರು ಕಂಪನಿಯಾಗಿರುವ ಮಹೀಂದ್ರಾ ಕೂಡಾ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಎಸ್ ಯುವಿ ಕಾರುಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಮಹೀಂದ್ರಾ ಕಂಪನಿಯು ರೂ. 1 ಲಕ್ಷದ ತನಕ ಆಫರ್ ನೀಡುತ್ತಿದ್ದು, ಎಕ್ಸ್ ಯುವಿ300 ಕಾರಿನ ಮೇಲೆ ಹೆಚ್ಚಿನ ಆಫರ್ ನೀಡುತ್ತಿದೆ. ಜೊತೆಗೆ ಬೊಲೆರೊ, ಬೊಲೆರೊ ನಿಯೋ, ಮರಾಜೋ ಮತ್ತು ಥಾರ್ ಕಾರುಗಳ ಮೇಲೆ ಆಫರ್ ನೀಡುತ್ತಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿವೆ.

ಇದನ್ನೂ ಓದಿ:  ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!

ಹೋಂಡಾ ಕಾರ್ಸ್ ಈ ವರ್ಷಾಂತ್ಯದ ಆಫರ್ ಗಳಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಕೂಡಾ ಹಿಂದೆ ಬಿದ್ದಿಲ್ಲ. ಹೋಂಡಾ ಕಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಸಿಟಿ ಸೆಡಾನ್, ಜಾಝ್, ಅಮೇಜ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಖರೀದಿ ಮೇಲೆ ಆಫರ್ ನೀಡುತ್ತಿದೆ. ವಿವಿಧ ಮಾದರಿಗಳನ್ನು ಆಧರಿಸಿ ರೂ. 5 ಸಾವಿರದಿಂದ ರೂ. 72 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಡಬ್ಲ್ಯುಆರ್-ವಿ ಕಾರಿನ ಮೇಲೆ ಹೆಚ್ಚಿನ ಆಫರ್ ನೀಡುತ್ತಿದೆ.

ರೆನಾಲ್ಟ್ ರೆನಾಲ್ಟ್ ಕಾರು ಕಂಪನಿಯು ಕೂಡಾ ಅತ್ಯುತ್ತಮ ಇಯರ್ ಎಂಡ್ ಆಫರ್ ನೀಡುತ್ತಿದೆ. ಪ್ರಮುಖ ಕಾರು ಮಾದರಿಗಳಾದ ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದ್ದು , ಹೊಸ ಆಫರ್ ಗಳಲ್ಲಿ ಗ್ರಾಹಕರು ರೂ. 45 ಸಾವಿರದಿಂದ ರೂ. 65 ಸಾವಿರ ಆಫರ್ ಪಡೆಯಬಹುದಾಗಿದೆ.

Published On - 4:43 pm, Thu, 15 December 22

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು