BMW: ವಿನೂತನ ಫೀಚರ್ಸ್ ಹೊಂದಿರುವ ಬಿಎಂಡಬ್ಲ್ಯು ಎಕ್ಸ್6 50 ಜಹ್ರೆ ಎಂ ಎಡಿಷನ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಕ್ಸ್ ಎಸ್ ಯುವಿ ಕೂಪೆ ಮಾದರಿಯಲ್ಲಿ ಹೊಸದಾಗಿ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಖರೀದಿಗೆ ಇಂದಿನಿಂದಲೇ ಆನ್ ಲೈನ್ ಬುಕಿಂಗ್ ಆರಂಭವಾಗಿದೆ.
ಭಾರತದಲ್ಲಿ ಬಿಎಂಡಬ್ಲ್ಯ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒಳಗೊಂಡ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಇದೀಗ ಕಂಪನಿಯು ಎಕ್ಸ್6 50 ಜಹ್ರೆ ಎಂ ಎಡಿಷನ್ ಪರಿಚಯಿಸಿದೆ. ಪರ್ಫಾಮೆನ್ಸ್ ಪ್ರಿಯರಿಗಾಗಿ ಎಂ ಸೀರಿಸ್ ಕಾರುಗಳನ್ನು ಪರಿಚಯಿಸಿದ 50ನೇ ವರ್ಷದ ಸಂಭ್ರಮಾಚರಣೆಗಾಗಿ ಕಂಪನಿಯು 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಗಾಗಿ ಇಂದಿನಿಂದಲೇ ಬುಕಿಂಗ್ ಆರಂಭಿಸಲಾಗಿದೆ.
ಕಾರಿನ ಬೆಲೆ ಮತ್ತು ಲಭ್ಯತೆ
ಹೊಸ ಎಕ್ಸ್6 50 ಜಹ್ರೆ ಎಂ ಎಡಿಷನ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.11 ಕೋಟಿ ಬೆಲೆ ಹೊಂದಿದ್ದು, ಕಾರು ಖರೀದಿಗಾಗಿ ಬಿಎಂಡಬ್ಲ್ಯು ಕಂಪನಿಯು ಆನ್ ಲೈನ್ ಬುಕಿಂಗ್ ಮಾತ್ರ ಸ್ವಿಕರಿಸಲಿದೆ. 50 ಜಹ್ರೆ ಎಂ ಎಡಿಷನ್ ವಿಶೇಷ ಆವೃತ್ತಿಯಾಗಿರುವುದರಿಂದ ಕಂಪನಿಯು ಭಾರತದಲ್ಲಿ ಕೇವಲ 50 ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಕಾರು ಸಂಪೂರ್ಣವಾಗಿ ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿದೆ.
ವಿಶೇಷ ಬ್ಯಾಡ್ಜ್ ಜೊತೆ ಹೊಸ ಫೀಚರ್ಸ್
50 ಜಹ್ರೆ ಎಂ ಎಡಿಷನ್ ಕಾರುಗಳಲ್ಲಿ ಬಿಎಂಡಬ್ಲ್ಯು ಕಂಪನಿಯು ವಿಶೇಷ ಲಾಂಚನದ ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಬಣ್ಣಗಳ ಆಯ್ಕೆ ಹೊಂದಿದ್ದು, ಬ್ಲ್ಯಾಕ್ ಸೆಫ್ಲೈರ್ ಮೆಟಾಲಿಕ್ ಮತ್ತು ಎಂ ಕಾರ್ಬನ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ ಮುಂಭಾಗದಲ್ಲಿ ಹೊಳಪು ನೀಡುವ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್ ಗಳನ್ನು ಮತ್ತು 20 ಇಂಚಿನ 740 ಎಂ ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿದೆ.
ಇದನ್ನೂ ಓದಿ: ನವೆಂಬರ್ 11ರಂದು ಬಿಡುಗಡೆಯಾಗಲಿದೆ ಹೊಸ ಜೀಪ್ ಗ್ರ್ಯಾಂಡ್ ಚರೋಕಿ
ಜೊತೆಗೆ ಹೊಸ ಕಾರಿನಲ್ಲಿರುವ ಎಂ ಸ್ಪೋರ್ಟ್ ವೈಶಿಷ್ಟ್ಯತೆಯ ರೆಡ್ ಬ್ರೇಕ್ ಕ್ಯಾಲಿಪರ್, 500 ಮೀಟರ್ ವರೆಗೆ ಬೆಳಕು ಹರಿಸಬಲ್ಲ ಅಡ್ವಾನ್ಸ್ ಎಲ್ಇಡಿ ಸೆಲೆಕ್ಟಿವ್ ಭೀಮ್ ಸೌಲಭ್ಯ ಹೊಂದಿದ್ದು, ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಸೀಟ್ ಕಾಕ್ ಪಿಟ್, 4 ಜೋನ್ ಕ್ಲೈಮೆಟ್ ಕಂಟ್ರೋಲ್, 12.3 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಐ ಡ್ರೈವರ್ ಕಂಟ್ರೋಲರ್, ನ್ಯಾವಿಗೇಷನ್, ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇ, ಹಾಟ್ ಅಂಡ್ ಕೂಲ್ ಕಪ್ ಹೋಲ್ಡರ್, ಪನೊರಮಿಕ್ ಸನ್ ರೂಫ್ ಮತ್ತು ವೈರ್ ಲೆಸ್ ಚಾರ್ಜರ್ ನೀಡಲಾಗಿದೆ.
ಹಾಗೆಯೇ ಹೊಸ ಕಾರಿಗೆ ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ಹೆಚ್ಚುವರಿ ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಎಂ ಲೆದರ್ ಸ್ಟೀರಿಂಗ್ ವ್ಹೀಲ್, ಎಂ ಸ್ಟೋರ್ಟ್ ಬ್ರೇಕ್, ಎಂ ಸ್ಪೋರ್ಟ್ ಎಕ್ಸಾಸ್ಟ್, ಅಡಾಪ್ಟಿವ್ ಎಂ ಸಸ್ಫೆಷನ್ ಮತ್ತು ಎಂ ಏರೋಡೈನಾಮಿಕ್ ಪ್ಯಾಕೇಜ್ ಆಕ್ಸೆಸರಿಸ್ ಹೊಂದಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಎಕ್ಸ್6 50 ಜಹ್ರೆ ಎಂ ಎಡಿಷನ್ ನಲ್ಲಿ ಬಿಎಂಡಬ್ಲ್ಯು ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ 3.0 ಲೀಟರ್ ಟರ್ಬೊ ಚಾರ್ಜ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 8-ಸ್ಪೀಡ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 335.3 ಬಿಹೆಚ್ ಪಿ ಮತ್ತು 450 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ. ಐಷಾರಾಮಿ ಕಾರುಗಳಲ್ಲಿಯೇ ಇದು ವಿಶೇಷ ಫೀಚರ್ಸ್ ಜೊತೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವುದಕ್ಕಾಗಿ 5.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.
Published On - 9:30 pm, Fri, 28 October 22