ರಾಯಲ್ ಎನ್‌ಫೀಲ್ಡ್‌ ಪ್ರತಿಸ್ಪರ್ಧಿ ಬಿಎಸ್ಎ ಗೋಲ್ಡ್ ಸ್ಟಾರ್ 650 ಕ್ಲಾಸಿಕ್ ಬೈಕ್ ಬಿಡುಗಡೆ

ಬಿಎಸ್ಎ ಬೈಕ್ ಉತ್ಪಾದನಾ ಕಂಪನಿಯು ತನ್ನ ಹೊಸ ಗೋಲ್ಡ್ ಸ್ಟಾರ್ 650 ಪ್ರೀಮಿಯಂ ಕ್ಲಾಸಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ರಾಯಲ್ ಎನ್‌ಫೀಲ್ಡ್‌ ಪ್ರತಿಸ್ಪರ್ಧಿ ಬಿಎಸ್ಎ ಗೋಲ್ಡ್ ಸ್ಟಾರ್ 650 ಕ್ಲಾಸಿಕ್ ಬೈಕ್ ಬಿಡುಗಡೆ
ಬಿಎಸ್ಎ ಗೋಲ್ಡ್ ಸ್ಟಾರ್ 650 ಕ್ಲಾಸಿಕ್ ಬೈಕ್ ಬಿಡುಗಡೆ
Follow us
Praveen Sannamani
|

Updated on:Aug 18, 2024 | 3:16 PM

ಜನಪ್ರಿಯ ಕ್ಲಾಸಿಕ್ ದ್ವಿಚಕ್ರ ತಯಾರಕ ಕಂಪನಿಯಾಗಿರುವ ಬಿಎಸ್ಎ ಮೋಟಾರ್‌ಸೈಕಲ್ಸ್ (BSA Motorcycles)  ತನ್ನ ಬಹುನೀರಿಕ್ಷಿತ ಗೋಲ್ಡ್ ಸ್ಟಾರ್ 650 (Gold Star 650) ಕ್ಲಾಸಿಕ್ ಬೈಕ್ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 2.99 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಮಾರ್ಡನ್ ರೆಟ್ರೋ ವಿನ್ಯಾಸ ಹೊಂದಿರುವ ಹೊಸ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಗೆ ಪ್ರಬಲ ಪೈಪೋಟಿಯಾಗಿದೆ.

ಗೋಲ್ಡ್ ಸ್ಟಾರ್ 650 ಬೈಕ್ ಮಾದರಿಯು ಇನ್ಸಿಗ್ನಿಯಾ ರೆಡ್ ಮತ್ತು ಹೈಲ್ಯಾಂಡ್ ಗ್ರೀನ್, ಮಿಡ್ನೈಟ್ ಬ್ಲ್ಯಾಕ್, ಡಾನ್ ಸಿಲ್ವರ್ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಇವು ರೂ. 2.99 ಲಕ್ಷದಿಂದ ರೂ. 3.15 ಲಕ್ಷ ಬೆಲೆ ಪಡೆದುಕೊಂಡಿವೆ. ಹೊಸ ಬೈಕ್ ಮಾದರಿಯನ್ನು ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಉತ್ಪಾದನೆಗೊಳಿಸಲಿದ್ದು, ಜಾವಾ, ಯೆಜ್ಡಿ ಬೈಕ್ ಮಾರಾಟ ಮಳಿಗೆಗಳಲ್ಲಿಯೇ ಬಿಎಸ್ಎ ಬೈಕ್ ಕೂಡಾ ಲಭ್ಯವಿರಲಿದೆ.

ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಪ್ರೇರಿತ 652 ಸಿಸಿ ಸಿಂಗಲ್-ಸಿಲಿಂಡರ್ ಮತ್ತು ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದು 5-ಸ್ಫೀಡ್ ಗೇರ್‌ಬಾಕ್ಸ್‌ನೊಂದಿಗೆ 45 ಹಾರ್ಸ್ ಪವರ್ ಮತ್ತು 55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಇದು ಪ್ರತಿ ಗಂಟೆಗೆ 160 ಕಿ.ಮೀ ಟಾಪ್ ಸ್ಪೀಡ್ ಸಾಧಿಸಲಿದ್ದು, ಇದು 213 ಕೆಜಿ ಒಟ್ಟಾರೆ ತೂಕದೊಂದಿಗೆ 780 ಎಂಎಂ ಆಸನದ ಎತ್ತರವನ್ನು ಹೊಂದಿದೆ.

ಕ್ರೇಡ್ ಫ್ರೇಮ್ ಅನ್ನು ಹೊಂದಿರುವ ಹೊಸ ಬೈಕ್ ಮಾದರಿಯಲ್ಲಿ ಬಿಎಸ್ಎ ಕಂಪನಿಯು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಬದಿಯ ಚಕ್ರದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ನೀಡಿದ್ದು, ಇದು ವೈರ್-ಸ್ಪೋಕ್ ವ್ಹೀಲ್ ಗಳೊಂದಿಗೆ ಮುಂಭಾಗದ ಚಕ್ರದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಬ್ರೇಕ್ ಸೇರಿದಂತೆ ಡ್ಯಯಲ್ ಚಾನೆಲ್ ಎಬಿಎಸ್ ಹೊಂದಿದೆ.

ಇದನ್ನೂ ಓದಿ: ಓಲಾ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್, ರೋಡ್‌ಸ್ಟರ್ ಪ್ರೋ ಇವಿ ಬೈಕ್ ಬಿಡುಗಡೆ

ಇದರೊಂದಿಗೆ ಮಾರ್ಡನ್ ರೆಟ್ರೋ ಶೈಲಿಯೊಂದಿಗೆ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವ ಹೊಸ ಬೈಕ್ ಮಾದರಿಯು ರೌಂಡ್ ಶೇಫ್ ಹೆಡ್ ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

Published On - 3:13 pm, Sun, 18 August 24