Car Under 5 Lakhs: ನಿಮ್ಮ ಬಜೆಟ್ 5 ಲಕ್ಷ ರೂಪಾಯಿಗಳಾಗಿದ್ದರೆ, ಬಂಪರ್ ಮೈಲೇಜ್ ನೀಡುವ ಮೂರು ಅತ್ಯುತ್ತಮ ಕಾರುಗಳು ಇಲ್ಲಿದೆ ನೋಡಿ
ನೀವು ಮುಂಬರುವ ನವರಾತ್ರಿ ಅಥವಾ ದೀಪಾವಳಿಗೆ ಮೊದಲು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕೇವಲ 5 ಲಕ್ಷ ರೂ. ಗಳಿದ್ದರೆ, ಇಂದು ನಾವು 5 ಲಕ್ಷ ರೂ. ಗಳವರೆಗಿನ ಬಜೆಟ್‌ನಲ್ಲಿ ಅಗ್ಗದ ಕಾರುಗಳ ಬಗ್ಗೆ ಹೇಳಲಿದ್ದೇವೆ. ಇದರ ಜೊತೆಗೆ, ಅವುಗಳ ಮೈಲೇಜ್ ಬಗ್ಗೆಯೂ ಮಾಹಿತಿ ನೀಡುತ್ತೇವೆ.

ಬೆಂಗಳೂರು (ಆ. 26): ಭಾರತ ಮಧ್ಯಮ ವರ್ಗದ ಜನರ ದೇಶವಾಗಿದ್ದು, ಹೆಚ್ಚಿನ ಜನರಿಗೆ ಕಾರು (Car) ಖರೀದಿಸುವುದು ಕನಸಿನಂತೆ. ಆದಾಗ್ಯೂ, ಇಂದಿನ ಕಾಲದಲ್ಲಿ ಜನರ ಆದಾಯ ಹೆಚ್ಚುತ್ತಿದೆ, ಬಡವರು ನಿಧಾನವಾಗಿ ದುಬಾರಿ ವಸ್ತುಗಳನ್ನು ಕೂಡ ಖರೀದಿ ಮಾಡುವತ್ತ ಸಾಗುತ್ತಿದ್ದಾರೆ. ಆದರೆ, ಕಾರುಗಳ ವಿಚಾರಕ್ಕೆ ಬಂದರೆ ಬಡವರು ದೊಡ್ಡ ಬೆಲೆಯ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅವರು ಕಡಿಮೆ ಬಜೆಟ್ ಹೊಂದಿದ್ದು ಕಾರು ಖರೀದಿಸಲು ಬಯಸಿದಾಗ, ಮಾರುಕಟ್ಟೆಯಲ್ಲಿ ಯಾವ ಆಯ್ಕೆಗಳು ಲಭ್ಯವಿದೆ ಎಂಬುದರ ಕುರಿತು ಯೋಚಿಸುತ್ತಾರೆ. ಅಂತವರಿಗೆ ಸರಿಯಾದ ಕಾರುಗಳ ಬಗ್ಗೆ ನಾವು ಮಾಹಿತಿ ನೀಡುತ್ತೇವೆ. 5 ಲಕ್ಷ ರೂ. ಗಳವರೆಗೆ ಬಜೆಟ್ ಹೊಂದಿರುವ ಮತ್ತು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮ ಆಯ್ಕೆಗಳ ಕುರಿತ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಆಲ್ಟೊ ಕೆ10
ಆಲ್ಟೊವನ್ನು ವರ್ಷಗಳಿಂದ ಸಾಮಾನ್ಯ ಜನರ ಕಾರು ಎಂದು ಕರೆಯಲಾಗುತ್ತಿದೆ ಮತ್ತು ಕಾಲಾನಂತರದಲ್ಲಿ ಇದು ಅನೇಕ ನವೀಕರಣಗಳನ್ನು ಪಡೆದುಕೊಂಡಿದೆ. ಪ್ರಸ್ತುತ ಇದನ್ನು ಮಾರುಕಟ್ಟೆಯಲ್ಲಿ ಆಲ್ಟೊ ಕೆ 10 (ಮಾರುತಿ ಆಲ್ಟೊ ಕೆ 10) ಎಂದು ಮಾರಾಟ ಮಾಡಲಾಗುತ್ತಿದೆ. ಆಲ್ಟೊ ಕೆ 10 ಮಾರುತಿ ಸುಜುಕಿಯ ದೇಶದ ಅತ್ಯಂತ ಅಗ್ಗದ ಕಾರು. ಇದರ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 4.23 ಲಕ್ಷ ರೂ. ಮಾರುತಿ ಆಲ್ಟೊ ಕೆ 10 998 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರ ಇಂಧನ ದಕ್ಷತೆಯು 24.9 ಕಿ.ಮೀ. ವರೆಗೆ ಇರುತ್ತದೆ.
ಸದ್ಯ ಮಾರುತಿ ಸುಜುಕಿ ತನ್ನ ಹೊಸ ಆಲ್ಟೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದರಲ್ಲಿ ಹಲವು ಬದಲಾವಣೆಗಳು ಇರಲಿದ್ದು, ಇದು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಆಗಬಹುದು ಎಂದು ಹೇಳಲಾಗಿದೆ. ಈ ಕಾರು 1 ಲೀಟರ್ ಪೆಟ್ರೋಲ್ ನಲ್ಲಿ ಬರೋಬ್ಬರಿ 30 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ನಂಬಲಾಗಿದೆ.
Upcoming Cars: ಕಾರು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ: ಮುಂದಿನ ತಿಂಗಳು ಬರಲಿವೆ ಈ 5 ಕಾರುಗಳು
ಮಾರುತಿ ಸುಜುಕಿ ಎಸ್-ಪ್ರೆಸ್ಸೊ
ಮಾರುತಿ ಸುಜುಕಿಯ ಎರಡನೇ ಅಗ್ಗದ ಕಾರು ಎಸ್-ಪ್ರೆಸೊ ಕೂಡ 5 ಲಕ್ಷ ರೂ. ಗಿಂತ ಕಡಿಮೆ ಬೆಲೆಯ ಕಾರು ಖರೀದಿಸಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಎಸ್-ಪ್ರೆಸೊದ ಪ್ರಸ್ತುತ ಎಕ್ಸ್-ಶೋರೂಂ ಬೆಲೆ ರೂ. 4.26 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು 998 ಸಿಸಿ ಎಂಜಿನ್ ಹೊಂದಿದ್ದು, ಇದರ ಮೈಲೇಜ್ 25.3 ಕಿ.ಮೀ.
ರೆನಾಲ್ಟ್ ಕ್ವಿಡ್
ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಇಂಡಿಯಾದ ಅತ್ಯಂತ ಕಡಿಮೆ ಬೆಲೆಯ ಕಾರು ಕ್ವಿಡ್ (ರೆನಾಲ್ಟ್ ಕ್ವಿಡ್). ಕೈಗೆಟುಕುವ ಕಾರು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕ್ವಿಡ್‌ನ ಪ್ರಸ್ತುತ ಎಕ್ಸ್-ಶೋರೂಂ ಬೆಲೆ ರೂ. 4.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ 999 ಸಿಸಿ ಎಂಜಿನ್ ಹೊಂದಿದ್ದು, ಇದು 22.3 ಕಿಮೀ ವರೆಗೆ ಮೈಲೇಜ್ ನೀಡುತ್ತದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








