ಹೆಚ್ಚುತ್ತಿರುವ ಮಾಲಿನ್ಯಕ್ಕೆ ಪರಿಣಾಮಕಾರಿಯಾಗಿ ಬ್ರೇಕ್ ಹಾಕಲು ಮುಂದಾಗಿರುವ ಚಂಡೀಗಢ ಸ್ಥಳೀಯ ಆಡಳಿತವು 2027ರ ವೇಳೆಗೆ ಶೇ. 100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು (Electric Vehicles) ಅಳವಡಿಸಿಕೊಳ್ಳುವ ಮಹತ್ವದ ಗುರಿ ಯೋಜನೆ ಹೊಂದಿದ್ದು, ಸಾಂಪ್ರದಾಯಿಕ ವಾಹನಗಳ ನೋಂದಣಿಯನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಎಲೆಕ್ಟ್ರಿಕ್ ವಾಹನಗಳ ಅಳವಡಿಸಿಕೊಳ್ಳಲು ಚಂಡೀಗಢ ಸ್ಥಳೀಯ ಆಡಳಿತವು ಜಾರಿಗೆ ತಂದಿರುವ ಕಠಿಣ ಕ್ರಮಗಳಿಂದ ಸಾಂಪ್ರದಾಯಿಕ ವಾಹನಗಳ ವಿತರಕರು ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಪರಿಷ್ಕರಣೆ ಮೂಲಕ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನೋಂದಣಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ.
ಹೊಸ ಇವಿ ನೀತಿಯ ಪರಿಷ್ಕರಣೆಯ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ವರೆಗೆ ಚಂಡೀಗಢ ನಗರದಲ್ಲಿ ಆಂತರಿಕ ದಹನಕಾರಿ ಎಂಜಿನ್ ಪ್ರೇರಿತ 12,076 ದ್ವಿಚಕ್ರ ವಾಹನಗಳನ್ನು ಮಾತ್ರ ನೋಂದಾಯಿಸಬಹುದಾಗಿದ್ದು, ತದನಂತರ ಅವುಗಳ ನೋಂದಣಿಯನ್ನು ನಿಲ್ಲಿಸಲಾಗುತ್ತದೆ. ಹೀಗಾಗಿ ಈ ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೆ 11,254 ಎಲೆಕ್ಟ್ರಿಕ್ ಅಲ್ಲದ ದ್ವಿಚಕ್ರ ವಾಹನಗಳು ಈಗಾಗಲೇ ನೋಂದಣಿಯಾಗಿದ್ದು, ಕೇವಲ 822 ದ್ವಿಚಕ್ರ ವಾಹನಗಳಿಗೆ ಮಾತ್ರ ನೋಂದಣಿ ಬಾಕಿಯಿದೆ. ಹಾಗೆಯೇ ಚಂಡೀಗಢ ನಗರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ 12,937 ನಾಲ್ಕು ಚಕ್ರದ ವಾಹನಗಳು ನೋಂದಣಿಯಾಗಿದ್ದು, ಇನ್ನು ಕೇವಲ 2,528 ವಾಹನಗಳಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!
2024 ರ ವೇಳೆಗೆ ಚಂಡೀಗಢದಲ್ಲಿ ನೋಂದಾಯಿಸಲಾಗುವ ಪ್ರತಿ ಹತ್ತು ದ್ವಿಚಕ್ರ ವಾಹನಗಳಲ್ಲಿ ಏಳು ಇವಿ ವಾಹನಗಳಾಗಿರಬೇಕು ಮತ್ತು ಪ್ರತಿ ಐದು ಕಾರುಗಳಲ್ಲಿ ಒಂದು ಇವಿ ಆಗಿರಬೇಕು ಎಂದು ನಿರ್ದೇಶಿಸಲಾಗಿದ್ದು, ಈ ಮೂಲಕ 2027 ರ ವೇಳೆಗೆ ಶೇ.100 ರಷ್ಟು ಇವಿ ವಾಹನಗಳಿಗೆ ಬದಲಾಯಿಸುವ ದೀರ್ಘಾವಧಿಯ ಗುರಿ ಇಟ್ಟುಕೊಳ್ಳಲಾಗಿದೆ.
ಇವಿ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಂಡೀಗಢದಲ್ಲಿ ಈಗಾಗಲೇ ಹಲವಾರು ಇವಿ ಸಬ್ಸಡಿ ಯೋಜನೆಗಳನ್ನು ಜಾರಿಗೆ ಮಾಡಲಾಗಿದ್ದು, ರೂ. 20 ಲಕ್ಷದೊಳಗಿನ ಇವಿ ಕಾರುಗಳಿಗೆ ರೂ. 1.50 ಲಕ್ಷದ ತನಕ ಮತ್ತು ಇವಿ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಗರಿಷ್ಠ ರೂ. 30 ಸಾವಿರ ತನಕ ಸಬ್ಸಡಿ ನೀಡುತ್ತಿದೆ. ಜೊತೆಗೆ ಸರ್ಕಾರಿ ಸ್ವಾಮ್ಯದ ಪಾರ್ಕಿಂಗ್ ಸ್ಥಳಗಳಲ್ಲಿ ಉಚಿತ ಪಾರ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ಇದರೊಂದಿಗೆ ಹಲವಾರು ವಿನಾಯ್ತಿಗಳನ್ನು ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್..
ಇನ್ನು 2023 ರ ಆರ್ಥಿಕ ಸಮೀಕ್ಷೆಯ ಪ್ರಕಾರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ನೋಂದಣಿಯು 2030 ರ ವೇಳೆಗೆ 10 ಮಿಲಿಯನ್‌ಗೆ ತಲುಪಬಹುದೆಂದು ಮುನ್ಸೂಚನೆ ನೀಡಲಾಗಿದ್ದು, ಫೇಮ್ 2 ಯೋಜನೆ ಪರಿಣಾಮ ಕಳೆದ ವರ್ಷ 2022 ರಲ್ಲಿ ದೇಶಾದ್ಯಂತ ಒಟ್ಟು ಇವಿ ವಾಹನ ಮಾರಾಟವು 1 ಮಿಲಿಯನ್ ಗೆ ತಲುಪಿದೆ.
Published On - 3:41 pm, Fri, 20 October 23