ಮಹಿ ಫ್ಯಾನ್ಸ್ ಗೆ ವಿಶೇಷ ಫೀಚರ್ಸ್ ಹೊಂದಿರುವ ಸಿಟ್ರನ್ ಧೋನಿ ಎಡಿಷನ್ ಕಾರು ಬಿಡುಗಡೆ
ಸಿಟ್ರನ್ ಇಂಡಿಯಾ ಕಂಪನಿಯು ಮಹಿ ಫ್ಯಾನ್ಸ್ ಗೆ ವಿಶೇಷ ಫೀಚರ್ಸ್ ಹೊಂದಿರುವ ಸಿ3 ಏರ್ ಕ್ರಾಸ್ ಧೋನಿ ಎಡಿಷನ್ ಕಾರು ಬಿಡುಗಡೆ ಮಾಡಿದೆ.
ಸಿಟ್ರನ್ ಇಂಡಿಯಾ (Citroen India) ಕಂಪನಿಯು ತನ್ನ ಹೊಸ ಸಿ3 ಏರ್ ಕ್ರಾಸ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಧೋನಿ ಎಡಿಷನ್ (Dhoni Edition) ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11.82 ಲಕ್ಷ ಬೆಲೆ ಹೊಂದಿದೆ. ಸಿಟ್ರನ್ ಇಂಡಿಯಾ ಕಂಪನಿಗೆ ಇತ್ತೀಚೆಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದ್ದು, ಧೋನಿ ಎಡಿಷನ್ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿದೆ.
ಸಿ3 ಏರ್ ಕ್ರಾಸ್ ಧೋನಿ ಎಡಿಷನ್ ಸಾಮಾನ್ಯ ಆವೃತ್ತಿಗಿಂತಲೂ ಕೆಲವು ವಿಶೇಷ ಫೀಚರ್ಸ್ ಹೊಂದಿದ್ದು, ಹೊಸ ಆವೃತ್ತಿಯಲ್ಲಿ ಧೋನಿ ಡಿಕಾಲ್ ಜೊತೆಗೆ ಬಾಡಿ ಕಲರ್ ಹೊಂದಿರುವ ಸೀಟ್ ಕವರ್‌ಗಳು ಮತ್ತು ಕುಶನ್ ನೀಡಲಾಗಿದೆ. ಹಾಗೆಯೇ ಸೀಟ್ ಬೆಲ್ಟ್ ಕುಶನ್, ಇಲ್ಯುಮಿನೇಟೆಡ್ ಸಿಲ್ ಪ್ಲೇಟ್‌ಗಳು ಮತ್ತು ಫ್ರಂಟ್ ಡ್ಯಾಶ್‌ಕ್ಯಾಮ್‌ಗಳನ್ನು ಹೊಂದಿದ್ದು, ಕೇವಲ 100 ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ.
ಇನ್ನುಳಿದಂತೆ ವಿಶೇಷ ಆವೃತ್ತಿಯಲ್ಲಿ ಸಾಮಾನ್ಯ ಸಿ3 ಏರ್ ಕ್ರಾಸ್ ಕಾರಿನಲ್ಲಿರುವ ತಾಂತ್ರಿಕ ಸೌಲಭ್ಯಗಳು, ವೈಶಿಷ್ಟ್ಯತೆಗಳು ಮತ್ತು ಎಂಜಿನ್ ಆಯ್ಕೆ ಮುಂದುವರೆಸಲಾಗಿದ್ದು, ಸಾಮಾನ್ಯ ಆವೃತ್ತಿಯು ಯು, ಪ್ಲಸ್ ಮತ್ತು ಮ್ಯಾಕ್ಸ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 14.11 ಲಕ್ಷ ಬೆಲೆ ಹೊಂದಿದೆ.
ಹೊಸ ಕಾರಿನಲ್ಲಿ ಮತ್ತೊಂದು ಗಮನಸೆಳೆಯುವ ತಾಂತ್ರಿಕ ಅಂಶವೆನೆಂದರೆ ಸಿ3 ಏರ್‌ಕ್ರಾಸ್ ಕಾರನ್ನು ಸಿಟ್ರನ್ ಕಂಪನಿಯು 5 ಸೀಟರ್ ಮತ್ತು 7 ಸೀಟರ್ ಆಯ್ಕೆಯಲ್ಲಿ ಪರಿಚಯಿಸಿದೆ. ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಆಕರ್ಷಕ ಬೆಲೆಯೊಂದಿಗೆ ವಿವಿಧ ಆಸನಗಳ ಮಾದರಿಗಳ ಆಯ್ಕೆ ಹೊಂದಿರುವ ಏಕೈಕ ಕಾರು ಮಾದರಿ ಇದಾಗಿದ್ದು, ಅತ್ಯುತ್ತಮ ಒಳಾಂಗಣ ಸೌಲಭ್ಯ ಹೊಂದಿದೆ.
ಇದನ್ನೂ ಓದಿ: ಒಂದೇ ದಿನದಲ್ಲಿ 200 ಐಷಾರಾಮಿ ಇವಿ ಕಾರುಗಳನ್ನು ವಿತರಿಸಿದ ಬಿವೈಡಿ
ಹೊಸ ಸಿ3 ಏರ್‌ಕ್ರಾಸ್ ಕಾರು ಮಾದರಿಯು ಸಹ ಪ್ರತಿಸ್ಪರ್ಧಿ ಮಾದರಿಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಅತ್ಯಾಧುನಿಕ ವಿನ್ಯಾಸ ಭಾಷೆ ಹೊಂದಿರುವ ಸಿ3 ಏರ್‌ಕ್ರಾಸ್ ಕಾರಿನಲ್ಲಿ ಸಿಗ್ನೇಚರ್ ಗ್ರಿಲ್ ಜೊತೆ ವಿಭಜಿತ ಹೆಡ್‌ಲೈಟ್ ಗಳು, ಎಲ್ಇಡಿ ಡಿಆರ್ ಎಲ್, ಕಾರಿನ ಒಳಭಾಗದಲ್ಲಿ 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿವರ್ಸ್ ಕ್ಯಾಮೆರಾ, ರಿಯರ್ ಡಿಫಾಗರ್ ಮತ್ತು ಯುಎಸ್ ಬಿ ಚಾರ್ಜಿಂಗ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಕಾರ್ ಟೆಕ್ ಕನೆಕ್ಟೆ ಸೌಲಭ್ಯಗಳಿವೆ.
Published On - 7:16 pm, Tue, 18 June 24