ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ (ಅ. 9) ಕೊನೆಯುಸಿರೆಳೆದರು. ಟಾಟಾ ಗ್ರೂಪ್‌ನ ನೇತೃತ್ವದ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು ಅನೇಕ ಕಂಪನಿಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಒಂದು ಟಾಟಾ ಮೋಟಾರ್ಸ್. ಇದು ಇಂದು ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮೊದಲ ಸ್ವದೇಶಿ ಕಾರನ್ನು ಬಿಡುಗಡೆ ಮಾಡಿದವರು ಕೂಡ ರತನ್ ಟಾಟಾ. ಇಂದು ಟಾಟಾ ಮೋಟಾರ್ಸ್ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಲು ಕಾರಣ ಕೂಡ ಇವರೆ.
ರತನ್ ಟಾಟಾ ನೇತೃತ್ವದಲ್ಲಿ, ಟಾಟಾ ಮೋಟಾರ್ಸ್ ಮೊದಲ ಭಾರತೀಯ ಕಾರು ಟಾಟಾ ಇಂಡಿಕಾವನ್ನು ಬಿಡುಗಡೆ ಮಾಡಿತು. 1998 ರಲ್ಲಿ, ಇಂಡಿಕಾವನ್ನು ಮೊದಲ ಸ್ಥಳೀಯ ಕಾರು ಎಂದು ಪ್ರಸ್ತುತಪಡಿಸಲಾಯಿತು. ಇದೊಂದು ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಕಾರು. ಇದನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಇದು ಭಾರತದ ಮೊದಲ ಸ್ವದೇಶಿ ಕಾರು ಎಂದು ಪರಿಗಣಿಸಲಾಗಿದೆ.
2023 ಟಾಟಾ ಇಂಡಿಕಾದ 25 ನೇ ವಾರ್ಷಿಕೋತ್ಸವವಾಗಿತ್ತು. ಈ ಸಂದರ್ಭದಲ್ಲಿ ರತನ್ ಟಾಟಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆಗ ಭಾರತದ ಮೊದಲ ಸ್ವದೇಶಿ ಕಾರು ಟಾಟಾ ಇಂಡಿಕಾ ರೂಪದಲ್ಲಿ ಹುಟ್ಟಿದೆ ಎಂದು ಬರೆದಿದ್ದರು. ಈ ಕಾರು ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ರತನ್ ಹೇಳಿದ್ದರು.
ಟಾಟಾ ಇಂಡಿಕಾವನ್ನು ಭಾರತೀಯ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಆಗ ಕಾಂಪ್ಯಾಕ್ಟ್ ಮತ್ತು ಉತ್ತಮ ಮೈಲೇಜ್ ಕಾರಿನ ಅಗತ್ಯವಿತ್ತು. ಇಂಡಿಕಾ ತುಂಬಾ ಆರಾಮದಾಯಕವಾದ ಕಾರು, ಇದು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿತ್ತು. ಮೈಲೇಜ್ ಬಗ್ಗೆ ಹೇಳುವುದಾದರೆ, ಇಂಡಿಕಾ ಪ್ರತಿ ಲೀಟರ್‌ಗೆ ಸುಮಾರು 20 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು.
ರತನ್ ಟಾಟಾ 1991 ರಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು. ಅವರ ನಾಯಕತ್ವದಲ್ಲಿ, ಟಾಟಾ ಮೋಟಾರ್ಸ್‌ನ ದೊಡ್ಡ ಬದಲಾವಣೆ ಕಂಡು ಕ್ರಮೇಣ ಕಂಪನಿಯು ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಯಿತು. ಟಾಟಾ ದೇಶದ ಮೊದಲ ಸ್ವದೇಶಿ ಎಸ್‌ಯುವಿ ಸಿಯೆರಾವನ್ನು ಸಹ ತಯಾರಿಸಿದೆ. ಈ SUV 2.0 ಲೀಟರ್ ಡೀಸೆಲ್ ಎಂಜಿನ್‌ನ ಶಕ್ತಿಯೊಂದಿಗೆ ಬಂದಿದೆ. ಸಿಯೆರಾವನ್ನು ಸ್ಥಗಿತಗೊಳಿಸಿದ ನಂತರ 2000 ರಲ್ಲಿ ಟಾಟಾ ಸಫಾರಿಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ರತನ್ ಟಾಟಾ ಅವರ ಇಷ್ಟದ ಕಾರು ಯಾವುದು?, ಮನೆಯಲ್ಲಿ ಒಟ್ಟು ಎಷ್ಟು ಕಾರುಗಳಿದ್ದವು?
2008 ರಲ್ಲಿ, ರತನ್ ಟಾಟಾ ಅವರು ಐಷಾರಾಮಿ ಕಾರು ಬ್ರ್ಯಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಖರೀದಿಸಿದರು ಮತ್ತು ಅದನ್ನು ಟಾಟಾ ಮೋಟಾರ್ಸ್ಗೆ ಸೇರಿಸಿದರು. ಇದಲ್ಲದೆ, ಅವರು 2008 ರಲ್ಲಿ ದೇಶದ ಮೊದಲ ಬಜೆಟ್ ಫ್ರೆಂಡ್ಲಿ ಕಾರು ಟಾಟಾ ನ್ಯಾನೊವನ್ನು ಸಹ ಬಿಡುಗಡೆ ಮಾಡಿದರು. ಇಂದಿಗೂ ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಕಾರು ಕಂಪನಿಯಾಗಿದೆ. ಎಸ್‌ಯುವಿ ವಿಭಾಗದಲ್ಲಿ, ಟಾಟಾ ನೆಕ್ಸಾನ್, ಸಫಾರಿ, ಹ್ಯಾರಿಯರ್ ಪಂಚ್‌ನಂತಹ ಕಾರುಗಳನ್ನು ಮಾರಾಟ ಮಾಡುತ್ತದೆ. ಕೂಪೆ ಎಸ್‌ಯುವಿ ಟಾಟಾ ಕರ್ವ್ ಈ ಕಂಪನಿಯ ಇತ್ತೀಚಿನ ಕಾರಾಗಿದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ