ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ (Hero Motocorp) ತನ್ನ ಹೊಸ ಜೂಮ್ 125ಆರ್ (Xoom 125R) ಮತ್ತು ಜೂಮ್ 160 (Xoom 160) ಮ್ಯಾಕ್ಸಿ ಸ್ಕೂಟರ್ ಕಾನ್ಸೆಪ್ಟ್ ಮಾದರಿಗಳನ್ನು 2023ರ EICMA ಆಟೋ ಶೋದಲ್ಲಿ ಅನಾವರಣಗೊಳಿಸಿದ್ದು, ಹೊಸ ಆವೃತ್ತಿಗಳು 125 ಸಿಸಿ ಮತ್ತು 150 ಸಿಸಿ ವಿಭಾಗದಲ್ಲಿನ ಪ್ರಮುಖ ಪ್ರೀಮಿಯಂ ಮತ್ತು ಮ್ಯಾಕ್ಸಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.
ಜೂಮ್ 125ಆರ್ ಪ್ರೀಮಿಯಂ ಸ್ಕೂಟರ್ ಮಾದರಿಯು ಎಪ್ರಿಲಿಯಾ ಎಸ್ಆರ್ 125 ಮತ್ತು ಟಿವಿಎಸ್ ಎನ್ ಟಾರ್ಕ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದ್ದರೆ ಜೂಮ್ 160 ಮಾದರಿಯು ಎಪ್ರಿಲಿಯಾ ಎಸ್ಎಕ್ಸ್ಆರ್ 160 ಮತ್ತು ಯಮಹಾ ಏರೊಕ್ಸ್ 155 ಮ್ಯಾಕ್ಸಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಹಾಗಾದ್ರೆ ಹೊಸ ಸ್ಕೂಟರ್ ಗಳಲ್ಲಿ ಯಾವೆಲ್ಲಾ ತಾಂತ್ರಿಕ ಅಂಶಗಳಿವೆ? ಎಂಜಿನ್ ಮತ್ತು ಪರ್ಫಾಮೆನ್ಸ್ ಹೇಗಿದೆ? ಎನ್ನುವ ಮಾಹಿತಿಯನ್ನು ಇಲ್ಲಿ ನೋಡೋಣ.
ಸ್ಟ್ಯಾಂಡರ್ಡ್ ಜೂಮ್ 110 ವಿನ್ಯಾಸ ಆಧರಿಸಿರುವ ಹೊಸ ಜೂಮ್ 125ಆರ್ ಕಾನ್ಸೆಪ್ಟ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್ ನಲ್ಲಿ ಹೀರೋ ಕಂಪನಿಯು ಸುಧಾರಿತ 124.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಇದರೊಂದಿಗೆ ಹೊಸ ಸ್ಕೂಟರ್ ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 9.4 ಹಾರ್ಸ್ ಪವರ್ ಮತ್ತು 10.16 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ವಿವಿಧ ತಾಂತ್ರಿಕ ಸೌಲಭ್ಯಗಳೊಂದಿಗೆ 120 ಕೆಜಿ ಒಟ್ಟಾರೆ ತೂಕ ಪಡೆದುಕೊಂಡಿದೆ.
ಇದರೊಂದಿಗೆ ಹೊಸ ಸ್ಕೂಟರ್ ನಲ್ಲಿ 14 ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಎಂಆರ್ ಎಫ್ ಜೆಪ್ಪರ್ ಟೈರ್ ಜೋಡಿಸಲಾಗಿದ್ದು, ಸಿಕ್ವೆಷನಲ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಇಂಡಿಕೇಟರ್ಸ್, ಫುಲ್ ಡಿಜಿಟಲ್ ಸ್ಪೀಡೋ ಮೀಟರ್, ಬ್ಲೂಟೂಥ್ ಕನೆಕ್ಟಿವಿಟಿನೊಂದಿಗೆ ಟರ್ನ್ ಬೈ ಟರ್ನ್ ಇಂಡಿಕೇಟರ್ ಸೇರಿದಂತೆ ಹಲವಾರು ವಿಶೇಷ ಫೀಚರ್ಸ್ ಹೊಂದಿರಲಿದೆ. ಇದರೊಂದಿಗೆ ಹೊಸ ಸ್ಕೂಟರ್ ಮಾದರಿಯು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 95 ಸಾವಿರದಿಂದ ರೂ. 1.10 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಇದು 2024ರ ಮಧ್ಯಂತರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ
ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಹೀರೋ ಕಂಪನಿಯು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ್ದು, ಹೊಸ ಸ್ಕೂಟರ್ ಮಾದರಿಯು ಮುಂಬರುವ 2024ರ ಮಾರ್ಚ್ ನಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿವೆ. ಜೂಮ್ 160 ಸ್ಕೂಟರ್ ಮಾದರಿಯು ಸಂಪೂರ್ಣ ಹೊಸ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, ಇದು ಅಡ್ವೆಂಚರ್ ವಿನ್ಯಾಸದೊಂದಿಗೆ 156 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ. ಇದರಲ್ಲಿ ಐ3ಎಸ್ ಐಡಲ್ ಸ್ಟಾರ್ಟ್ ಮತ್ತು ಸ್ಟಾಪ್ ಫೀಚರ್ಸ್ ಹೊಂದಿರುವ ಸುಧಾರಿತ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ.
156 ಸಿಸಿ ಎಂಜಿನ್ ಹೊಂದಿರುವ ಜೂಮ್ 160 ಸ್ಕೂಟರ್ ಮಾದರಿಯು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 14 ಹಾರ್ಸ್ ಪವರ್ ಮತ್ತು 13.7 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಒಟ್ಟಾರೆ 141 ಕೆಜಿ ತೂಕ ಹೊಂದಿರಲಿದೆ. ಜೊತೆಗೆ ಹೊಸ ಸ್ಕೂಟರ್ ನಲ್ಲಿ ಡ್ಯುಯಲ್ ಚೆಂಬರ್ ಎಲ್ಇಡಿ ಹೆಡ್ ಲೈಟ್, ವಿಭಜಿತವಾಗಿರುವ ಟೈಲ್ ಲೈಟ್ ಮತ್ತು14 ಇಂಚಿನ ಅಲಾಯ್ ವ್ಹೀಲ್ ಜೊತೆಗೆ ಎಂಆರ್ ಎಫ್ ಜೆಪ್ಪರ್ ಟೈರ್ ಜೋಡಣೆ ಮಾಡಲಾಗಿದೆ.
ಇದನ್ನೂ ಓದಿ: ಮರುಬಿಡುಗಡೆಗೆ ಸಿದ್ದವಾಗಿರುವ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಹಾಗೆಯೇ ಹೊಸ ಮಾಕ್ಸಿ ಸ್ಕೂಟರ್ ನಲ್ಲಿ ಸ್ಮಾರ್ಟ್ ಕೀ ಹೊಂದಿರುವ ಕೀಲೆಸ್ ಇಗ್ನಿಷನ್, ರಿಮೋಟ್ ಕಂಟ್ರೋಲ್ ಸೀಟ್ ಓಪನಿಂಗ್ ಮತ್ತು ಫೈಂಡ್ ಮೈ ಸ್ಕೂಟರ್ ಲೋಕೆಷನ್ ಟ್ರ್ಯಾಕರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಇದು ಕೂಡಾ ವಿವಿಧ ವೆರಿಯೆಂಟ್ ಗಳೊಂದಿದೆ ಎಕ್ಸ್ ಶೋರೂಂ ಪ್ರಕಾರ ರೂ. 1.45 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ.
Published On - 4:52 pm, Wed, 8 November 23