Car Accessories: ನಿಮ್ಮ ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುವ ಆಕ್ಸೆಸರಿಸ್ ಗಳಿವು!

ಹೊಸ ಕಾರುಗಳಲ್ಲಿ ಇತ್ತೀಚೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಕೆಲವು ಫೀಚರ್ಸ್ ಗಳನ್ನು ಆಸಕ್ತ ಗ್ರಾಹಕರು ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಖರೀದಿಸಬಹುದಾಗಿದೆ.

Car Accessories: ನಿಮ್ಮ ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುವ ಆಕ್ಸೆಸರಿಸ್ ಗಳಿವು!
ಕಾರ್ ಆಕ್ಸೆಸರಿಸ್
Follow us
|

Updated on: Nov 08, 2023 | 10:02 PM

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಪ್ರತಿ ಕಾರು ಮಾದರಿಗಳಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಇವು ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುತ್ತಿವೆ. ಹೊಸ ಕಾರುಗಳಲ್ಲಿನ ಫೀಚರ್ಸ್ ಗಳು ಹೈ ಎಂಡ್ ಮಾದರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಬೆಸ್ ವೆರಿಯೆಂಟ್ ಗಳಲ್ಲಿ ಕಡಿಮೆ ಫೀಚರ್ಸ್ ಗಳಿರಲಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಅಗತ್ಯ ಫೀಚರ್ಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಆಧುನಿಕ ಜೀವನ ಶೈಲಿಗೆ ಪೂರಕವಾಗಿರುವ ಮತ್ತು ಪ್ರಯಾಣಕ್ಕೆ ಅಗತ್ಯವಾಗಿರುವ ಆಕ್ಸೆಸರಿಸ್ ಗಳು ಯಾವುವು? ಮತ್ತು ಅವುಗಳ ಉಪಯೋಗ ಏನು? ಎನ್ನುವುದನ್ನು ಇಲ್ಲಿ ತಿಳಿಯೋಣ.

Honda cars

ವೆಂಟಿಲೆಷನ್ ಸೀಟುಗಳು ಮತ್ತು ಮಸಾಜ್ ಸೀಟುಗಳು

ದಿನನಿತ್ಯದ ಪ್ರಯಾಣದ ಹೊರತಾಗಿ ದೂರದ ಪ್ರಯಾಣದ ಸಂದರ್ಭದಲ್ಲಿ ವೆಂಟಿಲೆಷನ್ ಮತ್ತು ಮಸಾಜ್ ಆಸನಗಳು ನಿಮ್ಮ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುತ್ತವೆ. ಆಸನಗಳಲ್ಲಿ ಜೋಡಣೆ ಮಾಡವಾಗುವ ವೆಂಟಿಲೆಷನ್ ಸಿಸ್ಟಂ ಆಸನವನ್ನು ಅಗತ್ಯಗಳಿಗೆ ಅನುಗುಣವಾಗಿ ತಂಪು ಇಲ್ಲವೇ ಬೆಚ್ಚಗಿನ ವಾತಾವರಣವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಮಸಾಜ್ ಆಸನಗಳು ಕೂಡಾ ಪ್ರಯಾಣದ ದನಿವು ನಿವಾರಿಸಲು ಸಹಕಾರಿಯಾಗಲಿದ್ದು, ಮಸಾಜ್ ಫೀಚರ್ಸ್ ತುಸು ದುಬಾರಿಯಾಗಿರುವ ಮಾತ್ರ ಜೋಡಣೆ ಮಾಡಲಾಗುತ್ತಿದೆ. ಆದರೆ ವೆಂಟಿಲೆಷನ್ ಆಸನಗಳು ಮಧ್ಯಮ ಕ್ರಮಾಂಕದ ಕಾರುಗಳನ್ನು ಜೋಡಣೆ ಮಾಡಲಾಗುತ್ತಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಮೂಲಕವೂ ಈ ಫೀಚರ್ಸ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!

360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಮಧ್ಯಮ ಕ್ರಮಾಂಕದ ಕಾರುಗಳಲ್ಲೂ 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಸೌಲಭ್ಯವನ್ನು ಕಾರು ಉತ್ಪಾದನಾ ಕಂಪನಿಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದು, ಹೊಸ ಸರೌಂಡ್ ವ್ಯೂ ಕ್ಯಾಮೆರಾ ಹಲವಾರು ರೀತಿಯಲ್ಲಿ ಚಾಲಕನಿಗೆ ಸಹಕಾರಿಯಾಗಿದೆ. ಪಾರ್ಕಿಂಗ್ ಸಂದರ್ಭದಲ್ಲಿ ಮತ್ತು ವಾಹನ ದಟ್ಟಣೆ ರಸ್ತೆಗಳಲ್ಲಿ ಯಾವುದೇ ತೊಂದರೆಯಿಲ್ಲದ್ದಂತೆ ಚಾಲನೆ ಮಾಡಲು ನೇರವಾಗಲಿದ್ದು, ಒಟ್ಟು ನಾಲ್ಕು ಕ್ಯಾಮೆರಾ ಮೂಲಕ ಕಂಟ್ರೊಲ್ ಪ್ಯಾನೆಲ್‌ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್

ಹೊಸ ಕಾರುಗಳಲ್ಲಿ ಇತ್ತೀಚೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಇದು ಪ್ರಯಾಣದ ಸಂದರ್ಭದಲ್ಲಿ ಅವಶ್ಯಕವಾಗಿ ಬೇಕಾಗುತ್ತದೆ. ಜೊತೆಗೆ ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ವೈರ್ ಲೆಸ್ ಚಾರ್ಜರ್ ಸೌಲಭ್ಯವು ಸಹ ಹೆಚ್ಚು ಜನಪ್ರಿಯವಾಗುತ್ತಿದ್ದು, ಪ್ರಯಾಣದ ಖುಷಿಯನ್ನು ಸೆರೆಹಿಡಿಯಲು ಸೇರಿದಂತೆ ಇತರೆ ಸಂದರ್ಭಗಳಲ್ಲಿ ಚಾರ್ಜಿಂಗ್ ಸೌಲಭ್ಯವು ಅವಶ್ಯಕವಾಗಿರುತ್ತದೆ.

Most Fuel-Efficient Cars (2)

ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ 

ಕಾರುಗಳ ಚಕ್ರದಲ್ಲಿನ ಗಾಳಿಯ ಒತ್ತಡವನ್ನು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮೂಲಕ ನಿರ್ವಹಣೆ ಮಾಡಬಹುದಾಗಿದ್ದು, ಇದು ಇತ್ತೀಚೆಗೆ ಕಾರುಗಳಲ್ಲಿ ಮಾತ್ರ ದ್ವಿಚಕ್ರ ವಾಹನಗಳನ್ನು ಜೋಡಣೆಯಾಗುತ್ತಿದೆ. ಕಾರು ಮತ್ತು ಬೈಕ್ ಗಳ ಚಕ್ರದಲ್ಲಿನ ಗಾಳಿಯ ಒತ್ತಡವನ್ನು ಡ್ರೈವರ್ ಡಿಸ್ ಪ್ಲೇ ಮೂಲಕ ವೀಕ್ಷಣೆ ಮಾಡಬಹುದಾಗಿದ್ದು, ಗಾಳಿಯ ಒತ್ತಡ ಹೆಚ್ಚು ಕಡಿಮೆ ಆದಲ್ಲಿ ತಕ್ಷಣವೇ ಸರಿಪಡಿಸಿಕೊಳ್ಳುವ ಮೂಲಕ ಮುಂದೆ ಆಗಬಹುದಾದ ಅಪಘಾತಗಳನ್ನು ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಏರ್ ಪಂಪ್

ದೈನಂದಿನ ಪ್ರಯಾಣವನ್ನು ಹೊರತುಪಡಿಸಿ ದೂರದ ಪ್ರಯಾಣದಲ್ಲಿ ಮತ್ತು ಅಡ್ವೆಂಚರ್ ಚಾಲನೆ ವೇಳೆ ಕಾರುಗಳಲ್ಲಿ ಅಗತ್ಯವಾಗಿ ಏರ್ ಪಂಪ್ ಅವಶ್ಯಕವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಏರ್ ಪಂಪ್ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಏರ್ ಪಂಪ್ ಕಿಟ್ ಅನ್ನು ರೂ. 2 ಸಾವಿರ ಅಂತರದಲ್ಲಿ ಖರೀದಿಸಬಹುದಾಗಿದೆ.

ಇವುಗಳಲ್ಲದೆ ಕಾರು ಪ್ರಯಾಣವನ್ನು ಸುಲಭವಾಗಿಸಲು ಹಲವಾರು ಆಕ್ಸೆಸರಿಸ್ ಗಳಿದ್ದು, ಇವುಗಳಲ್ಲಿ ಕೆಲವು ಆಕ್ಸೆಸರಿಸ್ ಗಳು ಇತ್ತೀಚಿನ ಹೊಸ ಕಾರುಗಳಲ್ಲಿ ಸಾಮಾನ್ಯವಾಗಿ ನೋಡಬಹುದಾಗಿದೆ. ಇದೇ ಕಾರಣಕ್ಕೆ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಬೆಲೆಯಲ್ಲಿ ತುಸು ದುಬಾರಿಯಾಗಿದ್ದರೂ ಆಧುನಿಕ ಕಾಲಕ್ಕೆ ತಕ್ಕಂತೆ ಇವು ಕಾರು ಚಾಲನೆಯಲ್ಲಿ ಹೊಸ ಅನುಭವ ನೀಡಲು ಸಹಕಾರಿಯಾಗಿವೆ ಎನ್ನಬಹುದು.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ