Yamaha RX100: ಮರುಬಿಡುಗಡೆಗೆ ಸಿದ್ದವಾಗಿರುವ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಟು ಸ್ಟ್ರೋಕ್ ಎಂಜಿನ್ ನೊಂದಿಗೆ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ಅಲೆ ಸೃಷ್ಠಿಸಿದ್ದ ಯಮಹಾ ಆರ್‌ಎಕ್ಸ್100 ಭಾರತದಲ್ಲಿ ಮರುಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಟು ಸ್ಟ್ರೋಕ್ ಎಂಜಿನ್ ಬೈಕ್ ಪ್ರಿಯರ ಹಾಟ್ ಫೆವರಿಟ್ ಆಗಿರುವ ಯಮಹಾ ಆರ್‌ಎಕ್ಸ್100(Yamaha RX100) ಬೈಕ್‌ಗಳು ಸದ್ಯ ಮಾರಾಟಕ್ಕೆ ಲಭ್ಯವಿಲ್ಲವಾದರೂ ಈಗಲೂ ಕೂಡಾ ತನ್ನ ಬೇಡಿಕೆ ಕಳೆದುಕೊಂಡಿಲ್ಲ. ಯೂಸ್ಡ್ ಬೈಕ್ ವಿಭಾಗದಲ್ಲಿ ಸದ್ಯ ಅತಿ ಬೇಡಿಕೆಯಲ್ಲಿರುವ ಬೈಕ್ ಮಾದರಿಯಾಗಿದ್ದು, ಇದು ರೂ. 1.50 ಲಕ್ಷದಿಂದ ರೂ. 2 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದೆ. ಹೀಗಿದ್ದರೂ ಕೂಡಾ ಯಮಹಾ ಕಂಪನಿ ಮಾತ್ರ ಆರ್‌ಎಕ್ಸ್100 ಬೈಕ್ ಮಾದರಿಯನ್ನು ಹೊಸ ಮಾನದಂಡಗಳೊಂದಿಗೆ ಮರುಬಿಡುಗಡೆಗೆ ಇಷ್ಟು ದಿನಗಳ ಕಾಲ ಹಿಂದೇಟು ಹಾಕುತ್ತಲೇ ಬಂದಿತ್ತು. ಆದರೆ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಗೊಳಿಸಲು ಯೋಜಿಸುತ್ತಿದೆ.
ಭಾರತದಲ್ಲಿ ಮೊದಲ ಬಾರಿಗೆ 1985ರಲ್ಲಿ ಬಿಡುಗಡೆಯಾಗಿದ್ದ ಆರ್‌ಎಕ್ಸ್100 ಬೈಕ್ ಮಾದರಿಯು ಟು ಸ್ಟೋಕ್ ಎಂಜಿನ್‌ನೊಂದಿಗೆ ತನ್ನದೆ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಳಲ್ಲಿ ಭಾರೀ ಸದ್ದು ಮಾಡಿತ್ತು. ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಭಾರೀ ಬೇಡಿಕೆ ಹೊಂದಿದ್ದರೂ ಕೆಲವು ಕಾರಣಾಂತರಗಳಿಂದಾಗಿ 1996ರಲ್ಲಿ ಯಮಹಾ ಕಂಪನಿಯು ಆರ್‌ಎಕ್ಸ್100 ಬೈಕ್ ಮಾದರಿಯನ್ನು ಸ್ಥಗಿತಗೊಳಿಸಿತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಫೋರ್ ಸ್ಟೋಕ್ ಎಂಜಿನ್ ಜೋಡಣೆ ಕಡ್ಡಾಯವಾಗಿರುವುದರಿಂದ ಹೊಸ ಆರ್‌ಎಕ್ಸ್100 ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್
ಹೊಸ ಆರ್‌ಎಕ್ಸ್ 100 ಬೈಕ್‌ಗಳು ಹಳೆಯ ವಿನ್ಯಾಸಗಳನ್ನು ಹೊಂದಿದರೂ ಸಹ ಎಂಜಿನ್ ಮತ್ತು ಪರ್ಫಾಮೆನ್ಸ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಜೊತೆಗೆ ಹೊಸ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದ್ದು, ರೆಟ್ರೋ ಶೈಲಿಯ ವಿನ್ಯಾಸವು ಗಮನಸೆಳೆಯಲಿದೆ. ಹೊಸ ಬೈಕ್ ಮಾದರಿಯಲ್ಲಿ ಎರಡು ಬದಿ ಚಕ್ರದಲ್ಲೂ ಡಿಸ್ಕ್ ಬ್ರೇಕ್ ಸೇರಿದಂತೆ ಸುಧಾರಿತ ಸಸ್ಷೆಂಷನ್, ಅಲಾಯ್ ವ್ಹೀಲ್ ಗಳು, ಎಲ್ಇಡಿ ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಸೆಲ್ಫ್ ಸ್ಟಾರ್ಟ್ ಹೊಂದಿರಲಿದೆ.
ಹೊಸ ಬೈಕಿನಲ್ಲಿ ಯಮಹಾ ಕಂಪನಿಯು ಆರ್‌ಎಕ್ಸ್ 100 ಹೆಸರು ಮರುಬಳಕೆ ಮಾಡಿದರೂ ಸಹ ಸುಧಾರಿತ ತಂತ್ರಜ್ಞಾನ ಪ್ರೇರಿತ 200ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಗರಿಷ್ಠ 22 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ ಎನ್ನಬಹುದು. ಹಾಗೆಯೇ ಹೊಸ ಬೈಕ್ ತುಸು ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಬಹುದಾಗಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಗಳಿವೆ.
ಇದನ್ನೂ ಓದಿ: ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ಮಹಾಶಯ ತೆತ್ತ ದಂಡವೆಷ್ಟು ನೋಡಿ..
ಇನ್ನು ಈ ಹಿಂದೆ ಆರ್‌ಎಕ್ಸ್ 100 ಬೈಕ್ ಮಾದರಿಯಲ್ಲಿ ಯಮಹಾ ಕಂಪನಿ ಟು ಸ್ಟ್ರೋಕ್ ಪ್ರೇರಿತ 98 ಸಿಸಿ ಏರ್ ಕೂಲ್ಡ್ ಎಂಜಿನ್ ಜೋಡಣೆ ಮಾಡುತ್ತಿತ್ತು. ಇದು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 11 ಹಾರ್ಸ್ ಪವರ್ ಮತ್ತು 10.39 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಯುವಕರ ನೆಚ್ಚಿನ ಬೈಕ್ ಮಾದರಿಯಾಗಿ ಹೊರಹೊಮ್ಮಿತ್ತು.
Published On - 2:59 pm, Thu, 19 October 23