ದುಬಾರಿ ಬೆಲೆ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಐಯಾನಿಕ್ 5 ಇವಿ ಕಾರು
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಬೇಡಿಕೆ ದಾಖಲಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳಿಗೆ ಮಾತ್ರವಲ್ಲ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.
ದೇಶದಲ್ಲಿ ಹೆಚ್ಚುತ್ತಿರುವ ಇಂಧನಗಳ ದರ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಹ್ಯುಂಡೈ ಇಂಡಿಯಾ (Hyundai India) ಕಂಪನಿಯು ಸಹ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಮಾರಾಟದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಗಮನಸೆಳೆಯುತ್ತಿರುವ ಹ್ಯುಂಡೈ ಕಂಪನಿಯು ಐಯಾನಿಕ್ 5 (Ioniq 5) ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಐಯಾನಿಕ್ 5 ಪರಿಚಯಿಸಿದ ನಂತರ ಇದುವರೆಗೆ ಹ್ಯುಂಡೈ ಇಂಡಿಯಾ ಕಂಪನಿಯು ಸುಮಾರು 1 ಸಾವಿರ ಯುನಿಟ್ ಮಾರಾಟ ಮಾಡುತ್ತಿದ್ದು, ಐಷಾರಾಮಿ ಇವಿ ಕಾರು ಮಾರಾಟದಲ್ಲಿ ಇದು ಮಹತ್ವ ಬೆಳವಣಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 45.95 ಲಕ್ಷ ಬೆಲೆ ಹೊಂದಿರುವ ಐಯಾನಿಕ್ 5 ಕಾರು ಮಾದರಿಯು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಭರ್ಜರಿ ಮೈಲೇಜ್ ನೀಡುವ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.
ಐಯಾನಿಕ್ 5 ಕಾರು ಮಾದರಿಯು ಸದ್ಯ ಭಾರತದಲ್ಲಿ ಸಿಕೆಡಿ ಆಮದು ನೀತಿಯಡಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಬಿಡಿಭಾಗಗಳ ಮರುಜೋಡಣೆಯ ಮೂಲಕ ದುಬಾರಿ ಆಮದು ತೆರಿಗೆ ಹೊರೆಯಿಂದ ವಿನಾಯ್ತಿ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಕಿಯಾ ಇವಿ6 ಕಾರಿಗಿಂತಲೂ ಸಾಕಷ್ಟು ಬೆಲೆ ಹೊಂದಿರುವ ಐಯಾನಿಕ್ 5 ಕಾರು 72.6 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಹೊಸ ಕಾರು ಪ್ರತಿ ಚಾರ್ಜ್ ಗೆ ಬರೋಬ್ಬರಿ 631 ಕಿ.ಮೀ ಮೈಲೇಜ್ ನೊಂದಿಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತಿರುವ ಐಯಾನಿಕ್ 5 ಕಾರು ಮಾದರಿಯು ರಿಯಲ್ ವ್ಹೀಲ್ ಡ್ರೈವ್ ಟೆಕ್ನಾಲಜಿಯೊಂದಿಗೆ 217 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಕಾರಿನಲ್ಲಿ ಸೂಪರ್ ಫಾಸ್ಟ್ 800 ವೊಲ್ಟ್ ಚಾರ್ಜಿಂಗ್ ಸರ್ಪೊಟ್ ನೀಡಲಾಗಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 18 ನಿಮಿಷಗಳಲ್ಲಿ ಸೊನ್ನೆಯಿಂದ ಶೇ. 80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.
ಅತ್ಯುತ್ತಮ ವಿನ್ಯಾಸ ಮತ್ತು ಫೀಚರ್ಸ್ ಗಳ ಮೂಲಕ 2022ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಐಯಾನಿಕ್ 5 ಕಾರು ರೆಟ್ರೋ ಫ್ಯೂಚರಿಸ್ಟಿಕ್ ವಿನ್ಯಾಸ ಭಾಷೆ ಹೊಂದಿದ್ದು, ಫಿಕ್ಸಲೆಟೆಡ್ ಲುಕ್ ಹೊಂದಿರುವ ಫ್ರಂಟ್ ಅಂಡ್ ರಿಯರ್ ಲೈಟ್ಸ್, 20 ಇಂಚಿನ ಏರೋ ಆಪ್ಟಿಮೈಜ್ಡ್ ಅಲಾಯ್ ವ್ಹೀಲ್ ಸೌಲಭ್ಯಗಳಿದ್ದು, ಒಳಭಾಗದಲ್ಲಿ 12.3 ಇಂಚಿನ ಟಚ್ ಸ್ಕ್ರೀನ್, ಹೆಡ್ ಅಪ್ ಡಿಸ್ ಪ್ಲೇ ಸೇರಿದಂತೆ ಹಲವಾರು ಅತ್ಯಾರ್ಷಕ ತಾಂತ್ರಿಕ ಸೌಲಭ್ಯಗಳಿವೆ. ಮತ್ತೊಂದು ವಿಶೇಷ ಅಂದ್ರೆ ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ರಿಸೈಕಲ್ ಪ್ಯಾಸ್ಟಿಕ್ ಮತ್ತು ಇಕೋ ಫ್ರೆಂಡ್ಲಿ ಲೆದರ್ ನಿಂದ ನಿರ್ಮಾಣ ಮಾಡಲಾದ ಫ್ಯಾಬ್ರಿಕ್ ಆಸನಗಳು, ಕ್ರ್ಯಾಶ್ ಪಾಡ್ಸ್, ಸ್ವಿಚ್ ಗಳು, ಡೋರ್ ಪಾಡ್ಸ್ ಮತ್ತು ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ
ಇನ್ನು ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರು ಮಾದರಿಯಲ್ಲಿ ಸುಧಾರಿತ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಇದರಲ್ಲಿ ವಿವಿಧ ಸೇಫ್ಟಿ ಫೀಚರ್ಸ್ ಪ್ಯಾಕೇಜ್ ಹೊಂದಿರುವ ಲೆವೆಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಲಾಗಿದೆ.
Published On - 10:21 pm, Mon, 27 November 23