Kia Carens X-Line: ಸ್ಪೋರ್ಟಿ ಫೀಚರ್ಸ್ ಹೊಂದಿರುವ ಕಿಯಾ ಕಾರೆನ್ಸ್ ಎಕ್ಸ್-ಲೈನ್ ಬಿಡುಗಡೆ
ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರೆನ್ಸ್ ಎಂಪಿವಿ ಮಾದರಿಯಲ್ಲಿ ಹೊಸದಾಗಿ ಎಕ್ಸ್-ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಹೊಸ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಇಂಡಿಯಾ(KIA India) ಕಂಪನಿಯು ಕಾರೆನ್ಸ್ ಎಕ್ಸ್-ಲೈನ್(Carens X-Line) ಎಂಪಿವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18.94 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.44 ಲಕ್ಷ ಬೆಲೆ ಹೊಂದಿದೆ.
ಕಾರೆನ್ಸ್ ಎಂಪಿವಿ ಮೂಲಕ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಕಿಯಾ ಕಂಪನಿ ಇದೀಗ ಸ್ಪೋರ್ಟಿ ಲುಕ್ ಹೊಂದಿರುವ ಎಕ್ಸ್-ಲೈನ್ ಆವೃತ್ತಿಯನ್ನು ಪರಿಚಯಿಸಿದ್ದು, ಇದು ಸ್ಟ್ಯಾಂಡರ್ಡ್ ವೆರಿಯೆಂಟ್ ಗಳಿಂತಲೂ ತುಸು ದುಬಾರಿ ಹೊಂದಿದೆ. ಹೊಸ ಎಕ್ಸ್-ಲೈನ್ ಆವೃತ್ತಿಯು ಕಾರೆನ್ಸ್ ಟಾಪ್ ಎಂಡ್ ಮಾದರಿಯನ್ನು ಆಧರಿಸಿದ್ದು, ಇದು ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಹೊಸ ಕಾರುಗಳಿವು!
ಏನೆಲ್ಲಾ ವಿಶೇಷತೆಗಳಿವೆ?
ಹೊಸ ಕಾರೆನ್ಸ್ ಎಕ್ಸ್-ಲೈನ್ ಆವೃತ್ತಿಯು ವಿಶೇಷವಾಗಿ ಕ್ರೋಮ್ ನೊಂದಿಗೆ ಮ್ಯಾಟೆ ಗ್ರಾಫೈಟ್ ಬಣ್ಣದೊಂದಿಗೆ ಮಿಂಚುತ್ತಿದ್ದು, ರೆಡಿಯರ್ ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಬಂಪರ್ ಎಡ್ಜ್ ಮತ್ತು ರೂಫ್ ರೈಲ್ಸ್ ಗಳಲ್ಲಿ ಗ್ಲಾಸಿ ಬ್ಲ್ಯಾಕ್ ಫಿನಿಶ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ 16 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್ ಮತ್ತು ಸಿಲ್ವರ್ ಫಿನಿಷ್ ಹೊಂದಿರುವ ಫ್ರಂಟ್ ಬ್ರೇಕ್ ಕ್ಯಾಲಿಪರ್ ನೀಡಲಾಗಿದ್ದು, ಇದು ವಿಶೇಷ ಫೀಚರ್ಸ್ ಗಳೊಂದಿಗೆ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಆಕರ್ಷಣೆ ಹೊಂದಿದೆ.
ಕಿಯಾ ಕಂಪನಿಯು ಹೊಸ ಕಾರೆನ್ಸ್ ಎಕ್ಸ್-ಲೈನ್ ಕಾರಿನ ಹೊರಭಾಗದಲ್ಲಿ ನೀಡಲಾಗಿರುವ ಫೀಚರ್ಸ್ ಗಳಂತೆ ಒಳಭಾಗದಲ್ಲೂ ಹಲವಾರು ವಿಶೇಷತೆಗಳನ್ನು ನೀಡಲಾಗಿದ್ದು, ಗ್ರೀನ್ ಮತ್ತು ಬ್ಲ್ಯಾಕ್ ಕಲರ್ ಥೀಮ್ ನೊಂದಿಗೆ ಆರೇಂಜ್ ಸ್ಟ್ರೀಚ್ ಹೊಂದಿರುತ್ತದೆ. ಜೊತೆಗೆ ಹೊಸ ಕಾರು 6 ಸೀಟರ್ ಸೌಲಭ್ಯ ಹೊಂದಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೀಡುವುದರೊಂದಿಗೆ 10.1 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 8-ಸ್ಪೀಕರ್ಸ್ ಹೊಂದಿರುವ ಬಾಷ್ ಸೌಂಡ್ ಸಿಸ್ಟಂ, ಸನ್ ರೂಫ್, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು ಮತ್ತು 10.25 ಇಂಚಿನ ಫ್ರಂಟ್ ಇನ್ಪೋಟೈನ್ ಮೆಂಟ್ ಸಿಸ್ಟಂ ಹೊಂದಿರಲಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 440 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಕಾರೆನ್ಸ್ ಎಕ್ಸ್-ಲೈನ್ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಟರ್ಬೊ ಪೆಟ್ರೋಲ್ ಮಾದರಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ ಡೀಸೆಲ್ ಮಾದರಿಯು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಈ ಮೂಲಕ ಹೊಸ ಕಾರು ಮೈಲೇಜ್ ವಿಚಾರದಲ್ಲೂ ಗಮನಸೆಳೆಯುತ್ತಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿ ಇನ್ನು ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ.
Published On - 4:17 pm, Tue, 3 October 23