Kia Sonet: ಸನ್ ರೂಫ್ ಹೊಂದಿರುವ ಕಿಯಾ ಸೊನೆಟ್ ಹೊಸ ಪೆಟ್ರೋಲ್ ವೆರಿಯೆಂಟ್ ಬಿಡುಗಡೆ

ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಸೊನೆಟ್ ಕಾರಿನಲ್ಲಿ ಸನ್ ರೂಫ್ ಸೌಲಭ್ಯ ಹೊಂದಿರುವ ಹೆಚ್ ಟಿಕೆ ಪ್ಲಸ್ ಪೆಟ್ರೋಲ್ ವೆರಿಯೆಂಟ್ ಬಿಡುಗಡೆ ಮಾಡಲಾಗಿದೆ.

Kia Sonet: ಸನ್ ರೂಫ್ ಹೊಂದಿರುವ ಕಿಯಾ ಸೊನೆಟ್ ಹೊಸ ಪೆಟ್ರೋಲ್ ವೆರಿಯೆಂಟ್ ಬಿಡುಗಡೆ
ಕಿಯಾ ಸೊನೆಟ್
Follow us
Praveen Sannamani
|

Updated on: Aug 31, 2023 | 3:22 PM

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ(KIA) ಕಂಪನಿಯು ಸೊನೆಟ್(Sonet) ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಸನ್ ರೂಫ್‌ ಹೊಂದಿರುವ ಹೆಚ್ ಟಿಕೆ ಪ್ಲಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 9.76 ಲಕ್ಷ ಬೆಲೆ ಹೊಂದಿದೆ.

ಸೊನೆಟ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಸದ್ಯ ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಕ್ಸ್, ಹೆಚ್ ಟಿಎಕ್ಸ್ ಪ್ಲಸ್ ಮತ್ತು ಜಿಟಿಎಕ್ಸ್ ವೆರಿಯೆಂಟ್ ಗಳಿದ್ದು, ವಿವಿಧ ವೆರಿಯೆಂಟ್ ಗಳೊಂದಿಗೆ ಆ್ಯನಿವರ್ಸರಿ ಎಡಿಷನ್ ಸಹ ಖರೀದಿಗೆ ಲಭ್ಯವಿದೆ. ಇದರಲ್ಲಿ ಈ ಮೊದಲ ಹೆಚ್ ಟಿಎಕ್ಸ್ ನಂತರ ವೆರಿಯೆಂಟ್ ಗಳಲ್ಲಿ ಮಾತ್ರ ಸನ್ ರೂಫ್ ಸೌಲಭ್ಯ ನೀಡುತ್ತಿದ್ದ ಕಿಯಾ ಕಂಪನಿ ಇದೀಗ ಹೆಚ್ ಟಿಕೆ ಪ್ಲಸ್ ಪೆಟ್ರೋಲ್ ವೆರಿಯೆಂಟ್ ನಲ್ಲೂ ಹೊಸ ಪ್ರೀಮಿಯಂ ಫೀಚರ್ಸ್ ನೀಡಿದ್ದು, ಬಜೆಟ್ ಬೆಲೆಯ ವೆರಿಯೆಂಟ್ ನಲ್ಲೂ ಸನ್ ರೂಫ್ ಇಷ್ಟಪಡುವ ಗ್ರಾಹಕರ ಆಯ್ಕೆಗೆ ಇದು ಉತ್ತಮವಾಗಿದೆ.

Kia Sonet (2)

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ರೂಮಿಯಾನ್ ಬಿಡುಗಡೆ

ಹೊಸದಾಗಿ ಸನ್ ರೂಫ್ ಹೊಂದಿರುವ ಹೆಚ್ ಟಿಕೆ ಪ್ಲಸ್ ಪೆಟ್ರೋಲ್ ಆವೃತ್ತಿಯು ಸನ್ ರೂಫ್ ಹೊಂದಿರುವ ಈ ಹಿಂದಿನ ವೆರಿಯೆಂಟ್ ಗಿಂತ ರೂ. 73 ಸಾವಿರ ದಷ್ಟು ಕಡಿಮೆ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್ ನಲ್ಲಿ ಸನ್ ರೂಫ್ ಹೊರತುಪಡಿಸಿ ಯಾವುದೇ ಹೆಚ್ಚುವರಿ ಫೀಚರ್ಸ್ ನೀಡಲಾಗಿದೆ. ಈ ಹಿಂದೆ ಇರುವಂತೆಯೇ 8.0 ಇಂಚಿನ ಟಚ್ ಸ್ಕ್ರೀನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ನಾಲ್ಕು ಸ್ಪೀಕರ್ಸ್, ಎರಡು ಟ್ವಿಟರ್ಸ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ಸ್, ಕೀ ಲೆಸ್ ಎಂಟ್ರಿ ಮತ್ತು ಸುರಕ್ಷತೆಗಾಗಿ ರಿಯರ್ ಕ್ಯಾಮೆರಾ ಮತ್ತು 4 ಏರ್ ಬ್ಯಾಗ್ ಸೌಲಭ್ಯವು ಮುಂದುವರೆಯಲಿದೆ.

ಸೊನೆಟ್ ಕಾರಿನ ಫೀಚರ್ಸ್ ಗಳು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಬದಲಾವಣೆಯಾಗಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಎಕ್ಸ್ ಶೋರೂಂ ಪ್ರಕಾರ ರೂ.7.79 ಲಕ್ಷ ಬೆಲೆಯೊಂದಿಗೆ ಟಾಪ್ ಎಂಡ್ ಮಾದರಿಯು ರೂ. 14.89 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್ ನೀಡಲಾಗಿದೆ.

Kia Sonet (1)

ಇದನ್ನೂ ಓದಿ:  ಅತ್ಯುತ್ತಮ ಮೈಲೇಜ್ ನೀಡುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು! 

ಎಂಜಿನ್ ಕಾರ್ಯಕ್ಷಮತೆ ಹೊಸ ಸೊನೆಟ್ ಕಾರಿನಲ್ಲಿ ಕಿಯಾ ಕಂಪನಿ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 1.2 ಲೀಟರ್ ಎನ್ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಲಭ್ಯವಿದೆ. ಇದರಲ್ಲಿ 1.2 ಲೀಟರ್ ಎನ್ಎ ಪೆಟ್ರೋಲ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ 1.0 ಲೀಟರ್ ಟರ್ಬೊ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಹಾಗೆಯೇ 1.5 ಲೀಟರ್ ಡೀಸೆಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.

ಈ ಮೂಲಕ ಸೊನೆಟ್ ಕಾರು ಪ್ರತಿಸ್ಪರ್ಧಿ ಮಾದರಿಗಳಾದ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್ ಯುವಿ300 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನವೀಕರಣ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ