Kia Syros: ಬಿಡುಗಡೆ ಆಯಿತು ಕಿಯಾದ ಹೊಸ ಕಾರು ಸಿರೋಸ್: ನಲುಗಿದ ನೆಕ್ಸಾನ್, ಬ್ರೆಝಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 12:01 PM

ಕಿಯಾ ಸಿರೋಸ್‌ ಪ್ರೀಮಿಯಂ ಸಬ್-ಕಾಂಪ್ಯಾಕ್ಟ್ ಎಸ್​ಯುವಿ ಆಗಿದೆ. ಇದು ಡ್ಯುಯಲ್-ಸ್ಕ್ರೀನ್ ಸೆಟಪ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್​ಪ್ಲೇ ಮತ್ತು ಡಿಜಿಟಲ್ ಡ್ರೈವರ್ ಡಿಸ್​ಪ್ಲೇಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಹೊರತಾಗಿ, ಇದು ಇತರೆ ಕಾರುಗಳಿಗಿಂತ ಭಿನ್ನವಾಗಿರುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

Kia Syros: ಬಿಡುಗಡೆ ಆಯಿತು ಕಿಯಾದ ಹೊಸ ಕಾರು ಸಿರೋಸ್: ನಲುಗಿದ ನೆಕ್ಸಾನ್, ಬ್ರೆಝಾ
ಕಿಯಾ ಸಿರೋಸ್
Follow us on

ಕಿಯಾ ಇಂಡಿಯಾ ತನ್ನ ಹೊಸ ಎಸ್​ಯುವಿ ಕಿಯಾ ಸಿರೋಸ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಕಂಪನಿಯ ಐದನೇ SUV ಆಗಿದೆ. ಕಿಯಾ ಈ ಕಾರಿನ ವಿನ್ಯಾಸವನ್ನು ಸಾಕಷ್ಟು ವಿಭಿನ್ನ ಮತ್ತು ಪ್ರೀಮಿಯಂ ಆಗಿ ಮಾಡಿದೆ. ಈ ಕಾರು ಈಗಾಗಲೇ ಮಾರುಕಟ್ಟೆಯನ್ನು ಆಳುತ್ತಿರುವ ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಬ್ರೆಝಾದಂತಹ ಎಸ್‌ಯುವಿಗಳಿಗಿಂತ ಭಿನ್ನವಾಗಿದ್ದು, ಇದಕ್ಕೆ ಟಕ್ಕರ್ ಕೊಡಲಿದೆ. ಈ ಹೊಸ ಕಾರಿನ ವೈಶಿಷ್ಟ್ಯಗಳು, ವಿಶೇಷಣಗಳು ಮತ್ತು ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ.

ಕಿಯಾ ಸಿರೋಸ್‌ನ ವೈಶಿಷ್ಟ್ಯಗಳು ಮತ್ತು ವಿನ್ಯಾಸ:

ಕಿಯಾ ಸಿರೋಸ್‌ ಪ್ರೀಮಿಯಂ ಸಬ್-ಕಾಂಪ್ಯಾಕ್ಟ್ ಎಸ್​ಯುವಿ ಆಗಿದೆ. ಇದು ಡ್ಯುಯಲ್-ಸ್ಕ್ರೀನ್ ಸೆಟಪ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್​ಪ್ಲೇ ಮತ್ತು ಡಿಜಿಟಲ್ ಡ್ರೈವರ್ ಡಿಸ್​ಪ್ಲೇಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಹೊರತಾಗಿ, ಇದು ಇತರೆ ಕಾರುಗಳಿಗಿಂತ ಭಿನ್ನವಾಗಿರುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

https://x.com/KiaInd/status/1869599417776439654

ಕಿಯಾ ಸಿರೋಸ್‌ ಇಂಟೀರ್ಯರ್:

ಇದರಲ್ಲಿ ನೀವು ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆಯುತ್ತೀರಿ. ಈ ಕಾರು ಉತ್ತಮ ಬೂಟ್ ಸ್ಪೇಸ್‌ನೊಂದಿಗೆ ಬರುತ್ತಿದೆ. ಇದರಲ್ಲಿ ನೀವು ಗೇರ್ ಶಿಫ್ಟರ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನಂತಹ ಹೊಸ ಏರ್‌ಕ್ರಾಫ್ಟ್ ಥ್ರೊಟಲ್ ಅನ್ನು ಪಡೆಯುತ್ತೀರಿ. 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಲಭ್ಯವಿದ್ದು ಅದನ್ನು ಪ್ರಾರಂಭಿಸಲು ಪ್ರತ್ಯೇಕ ಬಟನ್ ನೀಡಲಾಗಿದೆ.

ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಲಭ್ಯವಿದೆ. ಇದರ ಹೊರತಾಗಿ, ಬಹು ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳನ್ನು ಸಹ ಒದಗಿಸಲಾಗಿದೆ. ಅಷ್ಟೇ ಅಲ್ಲ ಪನೋರಮಿಕ್ ಸನ್ ರೂಫ್ ಕೂಡ ನೀಡಲಾಗಿದೆ. ಸುರಕ್ಷತೆಯ ವಿಷಯದಲ್ಲಿ, ಈ ಕಾರು ಯಾರಿಗೂ ಕಡಿಮೆಯಿಲ್ಲ. ಸುರಕ್ಷತೆಗಾಗಿ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ADAS ನಂತಹ ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ.

ಕಿಯಾ ಸಿರೋಸ್‌ನಲ್ಲಿ ಎಂಜಿನ್:

ಕಿಯಾ ಸಿರೋಸ್‌ನಲ್ಲಿ ಮೊದಲ ಬಾರಿಗೆ, ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಒದಗಿಸಲಾಗಿದೆ. ಪೆಟ್ರೋಲ್ ವೆರಿಯಂಟ್ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ವೇರಿಯಂಟ್ 1.5 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಪವರ್ ಟ್ರಾನ್ಸ್ಮಿಷನ್​ಗಾಗಿ, ಇದು 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಆಟೋಮ್ಯಾಟಿಕ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಇದನ್ನೂ ಓದಿ: ICOTY 2025 ವರ್ಷದ ಭಾರತೀಯ ಕಾರು ಪ್ರಶಸ್ತಿಗೆ ಹೆಸರು ಘೋಷಣೆ: ಯಾವ ಕಾರೆಲ್ಲ ಇದೆ ನೋಡಿ

ಬೆಲೆ ಮತ್ತು ಲಭ್ಯತೆ:

ಮುಂದಿನ ವರ್ಷ ಜನವರಿ 3 ರಿಂದ ಕಿಯಾ ಸಿರೋಸ್‌ ಬುಕ್ಕಿಂಗ್ ಪ್ರಾರಂಭವಾಗಲಿದೆ. ಇದರ ವಿತರಣೆಯು ಫೆಬ್ರವರಿ 25 ರಿಂದ ಶುರುವಾಗುತ್ತದೆ. ಪ್ರಸ್ತುತ ಕಂಪನಿಯು ಈ ನೂತನ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಇದರ ಆರಂಭಿಕ ಬೆಲೆ 9 ಲಕ್ಷ ರೂಪಾಯಿಯಿಂದ ಇರುವ ಸಾಧ್ಯತೆ ಇದೆ. ಈ ಕಾರಿನ ಪ್ರತಿಸ್ಪರ್ಧಿಯಾದ ಟಾಟಾ ನೆಕ್ಸಾನ್​ನ ಎಕ್ಸ್ ಶೋ ರೂಂ ಬೆಲೆ 8.99 ಲಕ್ಷ ರೂ. ಮತ್ತು ಮಾರುತಿ ಬ್ರೆಝಾ ಆರಂಭಿಕ ಬೆಲೆ 8.34 ಲಕ್ಷ ರೂ. ಆಗಿದೆ.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ