AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಖತ್ ಫೀಚರ್ಸ್ ಗಳೊಂದಿಗೆ ಬಿಡುಗಡೆಗಾಗಿ ಥಾರ್ ರೊಕ್ಸ್ ಟೀಸರ್ ಪ್ರಕಟಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಥಾರ್ ರೊಕ್ಸ್ ಎಸ್ ಯುವಿ ಬಿಡುಗಡೆ ಸಿದ್ದವಾಗುತ್ತಿದ್ದು, ಇದೀಗ ಹೊಸ ಕಾರಿನ ಅಧಿಕೃತ ಟೀಸರ್ ಪ್ರಕಟಿಸಿದೆ.

ಸಖತ್ ಫೀಚರ್ಸ್ ಗಳೊಂದಿಗೆ ಬಿಡುಗಡೆಗಾಗಿ ಥಾರ್ ರೊಕ್ಸ್ ಟೀಸರ್ ಪ್ರಕಟಿಸಿದ ಮಹೀಂದ್ರಾ
ಮಹೀಂದ್ರಾ ಥಾರ್ ರೊಕ್ಸ್
Follow us
Praveen Sannamani
|

Updated on: Jul 30, 2024 | 7:01 PM

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ಇದೀಗ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಕುರಿತಾಗಿ ಇದೀಗ ಮೊದಲ ಟೀಸರ್ ವಿಡಿಯೋ ಪ್ರಕಟಿಸಿದೆ. ಥಾರ್ ಕಾರಿನಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಥಾರ್ ರೊಕ್ಸ್ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದು ವಿಶೇಷವಾಗಿ 5 ಡೋರ್ ಸೌಲಭ್ಯ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಮಹೀಂದ್ರಾ ಕಂಪನಿಯು ಹೊಸ ಥಾರ್ ರೊಕ್ಸ್ ಕಾರನ್ನು ಇದೇ ಅಗಸ್ಟ್ 15ರಂದು ಬಿಡುಗಡೆ ಮಾಡುತ್ತಿದ್ದು, ಇದು 5 ಡೋರ್ ಜೊತೆಗೆ ಪನೊರಮಿಕ್ ಸನ್ ರೂಫ್, ವೃತ್ತಾಕಾರವಾದ ಹೆಡ್ ಲ್ಯಾಂಪ್ಸ್ ಸೇರಿದಂತೆ ಗರಿಷ್ಠ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಥಾರ್ ಕಾರು ಮಾದರಿಯು 3 ಡೋರ್ ಸೌಲಭ್ಯದೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಇದು ಆಫ್ ರೋಡ್ ಜೊತೆಗೆ ಲೈಫ್ ಸ್ಟೈಲ್ ಮಾದರಿಯಾಗಿ ಗುರುತಿಸಿಕೊಂಡಿದೆ. ಆದರೂ ಕೂಡಾ ಥಾರ್ ಕಾರು 3 ಡೋರ್ ಸೌಲಭ್ಯದಿಂದಾಗಿ ಹಿಂಬದಿಯ ಪ್ರಯಾಣಿಕರಿಗೆ ಕೆಲವು ಸಂದರ್ಭಗಳಲ್ಲಿ ಅನಾನುಕೂಲಗಳು ಉಂಟಾಗುತ್ತವೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಥಾರ್ ರೊಕ್ಸ್ ಕಾರನ್ನು ಹಿಂಬದಿಯ ಸವಾರರಿಗೆ ಅನುಕೂಲಕರವಾಗುವಂತೆ 5 ಡೋರ್ ಸೌಲಭ್ಯವನ್ನು ನೀಡಲಾಗುತ್ತಿದೆ.

5 ಡೋರ್ ಸೌಲಭ್ಯ ಹೊಂದಿರುವ ಮಾದರಿಯನ್ನು ಮಹೀಂದ್ರಾ ಕಂಪನಿಯು ಥಾರ್ ರೊಕ್ಸ್ ಹೆಸರಿನಲ್ಲಿ ಮಾರಾಟ ಮಾಡಲಿದ್ದು, ಇದು 3 ಡೋರ್ ಮಾದರಿಯಲ್ಲಿರುವ ಹಲವು ತಾಂತ್ರಿಕ ಸೌಲಭ್ಯಗಳೊಂದಿಗೆ ಕೆಲವು ಹೊಸ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ. ಈ ಮೂಲಕ ಕುಟುಂಬ ಸಮೇತರಾಗಿ ಪ್ರಯಾಣಿಸುವ ಎಸ್ ಯುವಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಮನಸೆಳೆಯಲಿದ್ದು, ಇದು 3 ಡೋರ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಇನ್ನು ಹೊಸ ಥಾರ್ ರೊಕ್ಸ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಯನ್ನೇ ಪಡೆದುಕೊಂಡಿರಲಿದ್ದು, ಹೊಸ ಆವೃತ್ತಿಯು 4X2 ಮತ್ತು 4X4 ಡ್ರೈವ್ ಸಿಸ್ಟಂನೊಂದಿಗೆ ಮಾರಾಟಗೊಳ್ಳಲಿದೆ. ಥಾರ್ ಕಾರಿನಲ್ಲಿ ಸದ್ಯ 1.5 ಲೀಟರ್ ಡೀಸೆಲ್, 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಿದ್ದು, ರೋಕ್ಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಮಾರಾಟಗೊಳ್ಳಲಿದೆ. ಈ ಮೂಲಕ ಹೊಸ ಆವೃತ್ತಿಯು ಸಾಮಾನ್ಯ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ. 2 ಲಕ್ಷದಷ್ಟು ದುಬಾರಿಯಾಗಿರಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.