AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yezdi Adventure: ವಿನೂತನ ವಿನ್ಯಾಸದೊಂದಿಗೆ ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ

ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ ಕಂಪನಿಯು ತನ್ನ ನವೀಕೃತ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ.

Yezdi Adventure: ವಿನೂತನ ವಿನ್ಯಾಸದೊಂದಿಗೆ ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ
ಹೊಸ ಯೆಜ್ಡಿ ಅಡ್ವೆಂಚರ್ ಬೈಕ್
Praveen Sannamani
|

Updated on: Jul 31, 2024 | 5:35 PM

Share

ಮಧ್ಯಮ ಕ್ರಮಾಂಕದ ಮಾರ್ಡನ್ ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿರುವ ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ (Jawa Yezdi Motorcycles) ಕಂಪನಿಯು ತನ್ನ ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ. ಹೊಸ ಬೈಕ್ ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.

ಅತ್ಯುನ್ನತ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ ಮತ್ತು ಹೊಸ ಪ್ರೀಮಿಯಂ ಫೀಚರ್ ಗಳನ್ನು ಹೊಂದಿರುವ ಯೆಜ್ಡಿ ಅಡ್ವೆಂಚರ್ ಬೈಕ್ ತನ್ನ ವಿಭಾಗದಲ್ಲಿಯೇ ವಿಶೇಷ ಮಾದರಿಯಾಗಿ ಗುರುತಿಸಿಕೊಂಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 2,09,900 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2,19,900 ಬೆಲೆ ಹೊಂದಿದೆ.

New Yezdi Adventure

ಮರು ಎಂಜಿನಿಯರಿಂಗ್ ಮತ್ತು ವಿನ್ಯಾಸಗೊಳಿಸಲಾಗಿರುವ ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಉನ್ನತೀಕರಿಸಲಾದ ಆಲ್ಫಾ ಟು, 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 29.6 ಪಿಎಸ್ ಮತ್ತು 29.9 ಎನ್ಎಂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ರೈಡಿಂಗ್ ಅನುಭವದ ಖುಷಿ ಹೆಚ್ಚಿಸುವ ಹೊಸ ಬೈಕ್ ಮಾದರಿಯಲ್ಲಿ ಹೊಸದಾಗಿ ಸೆಂಟ್ರಲ್ ಎಕ್ಸಾಸ್ಟ್ ರೂಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಹೊಸ ಬೈಕಿನ ಕಾರ್ಯಕ್ಷಮತೆ ಮತ್ತು ಥರ್ಮಲ್ ಮ್ಯಾನೇಜ್ ಮೆಂಟ್ ಸುಧಾರಣೆಗಾಗಿ ಹೊಸ ಸೆಂಟ್ರಲ್ ಎಕ್ಸಾಸ್ಟ್ ರೂಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇದರೊಂದಿಗೆ ಹೊಸ ವಿನ್ಯಾಸ ಭಾಷೆಯ ಡೀಕಾಲ್ ಪ್ಯಾನೆಲ್ಗಳ ಜೊತೆ ಮೇನ್ ಕೇಜ್ ಅನ್ನು ಸಂಯೋಜಿಸಲಾಗಿದೆ. ಆ ಮೂಲಕ ಯೆಜ್ಡಿ ಅಡ್ವೆಂಚರ್ ಹೆಚ್ಚು ಚುರುಕಾಗಿ, ಹೆಚ್ಚು ಸ್ಪಂದನಾಶೀಲವಾಗಿ ಕೆಲಸ ಮಾಡುವಂತೆ ರೂಪಿಸಲಾಗಿದ್ದು, ಇದು ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್ಗಳಿಗೆ ಹೊಸ ಡೆಕಾಲ್ ವಿನ್ಯಾಸ ಪಡೆದುಕೊಂಡಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಉತ್ತಮವಾದ ಆಫ್- ರೋಡ್ ರೈಡಿಂಗ್ ಅನುಭವಿಸಲು ಮತ್ತು ಟೂರ್ ಮಾಡುವಾಗ ಆರಾಮದಾಯಕತೆ ಒದಗಿಸಲು ವಿಭಾಗದಲ್ಲಿಯೇ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದ್ದು, ಇದು ಎಲ್ಲಾ ರೀತಿಯ ಭೂಪ್ರದೇಶಗಳಲ್ಲೂ ವಿಶ್ವಾಸದಿಂದ ರೈಡಿಂಗ್ ಮಾಡಬಹುದಾಗಿದೆ. ಇದಲ್ಲದೇ ಎಂಜಿನ್ ಗೆ ಹೆಚ್ಚು ರಕ್ಷಣೆ ನೀಡುವ ಉದ್ದೇಶದಿಂದ ಮತ್ತು ಉತ್ತಮ ಬಾಳಿಕೆ ಒದಗಿಸಲು ಗುಣಮಟ್ಟದ ಸಂಪ್ ಗಾರ್ಡ್ ಅನ್ನು ಅಳವಡಿಸಲಾಗಿದೆ.

ಈ ಮೂಲಕ ವಿಭಿನ್ನ ಭೂಪ್ರದೇಶಗಳಿಂದ ಸ್ಫೂರ್ತಿ ಪಡೆದಿರುವ ಹೊಸ ಬೈಕಿನಲ್ಲಿ ಗ್ಲೇಸಿಯರ್ ವೈಟ್ ಡಿಟಿ, ಮ್ಯಾಗ್ನೈಟ್ ಮೆರೂನ್ ಡಿಟಿ, ವೂಲ್ಫ್ ಗ್ರೇ ಡಿಟಿ ಮತ್ತು ಟೊರ್ನಾಡೋ ಬ್ಲ್ಯಾಕ್ ಎನ್ನುವ ನಾಲ್ಕು ವೆರೆಂಯೆಟ್ ಗಳಲ್ಲಿದ್ದು, ದೂರದ ಚಾಲನೆಗೆ ಅನೂಕಲಕರವಾಗುವ ವಿವಿಧ ರೈಡ್ ಮೋಡ್ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಫೋನ್ ಚಾರ್ಜರ್ ನಂತಹ ಹಲವಾರು ವಿಶಿಷ್ಟ ಫೀಚರ್ ಗಳನ್ನು ನೀಡಲಾಗಿದೆ.