ಮೆಟಲ್ ಬಾಡಿ ಜೊತೆ ಭರ್ಜರಿ ಮೈಲೇಜ್ ನೀಡುವ ಮಹೀಂದ್ರಾ ಟ್ರಿಯೊ ಪ್ಲಸ್ ಇ-ಆಟೋ ಬಿಡುಗಡೆ
ಮಹೀಂದ್ರಾ ಕಂಪನಿಯು ತನ್ನ ಹೊಸ ಟ್ರಿಯೊ ಪ್ಲಸ್ ಇ-ಆಟೋ ಬಿಡುಗಡೆ ಮಾಡಿದ್ದು, ಹೊಸ ಇ-ಆಟೋ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.
ಪ್ರಯಾಣಿಕರ ಬಳಕೆಯ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ (Mahindra last mile mobility) ಕಂಪನಿಯು ಟ್ರಿಯೊ ಪ್ಲಸ್ ಇ-ಆಟೋ (Treo plus e-auto) ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ವಾಹನವು ಎಕ್ಸ್ ಶೋರೂಂ ಪ್ರಕಾರ ರೂ.3.58 ಲಕ್ಷ ಬೆಲೆ ಹೊಂದಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉನ್ನತೀಕರಣ ಹೊಂದಿದ್ದು, ಇದು ಗುಣಮಟ್ಟ ಸುಧಾರಣೆಯೊಂದಿಗೆ ಹೆಚ್ಚಿನ ಸುರಕ್ಷಾ ಫೀಚರ್ಸ್ ಹೊಂದಿದೆ.
ಟ್ರಿಯೊ ಪ್ಲಸ್ ಇ-ಆಟೋ ಮೊದಲ ಬಾರಿಗೆ ಬಿಡುಗಡೆಯ ನಂತರ ಇದುವರೆಗೆ ಸುಮಾರು 50 ಸಾವಿರ ಯುನಿಟ್ ಮಾರಾಟ ದಾಖಲೆಯನ್ನು ಹೊಂದಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಮೆಟಲ್ ಬಾಡಿ ಸೌಲಭ್ಯದೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ ಹೊಸ ಇವಿ ವಾಹನವು 2073 ಎಂಎಂ ವೀಲ್ಹ್ ಬೆಸ್ ನೊಂದಿಗೆ ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣ ಒದಗಿಸಲು ನೆರವಾಗಲಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಹೊಸ ಇ-ಆಟೋ ದಲ್ಲಿ ಮಹೀಂದ್ರಾ ಕಂಪನಿಯು ಗುಣಮಟ್ಟ ಸುಧಾರಣೆಗಾಗಿ ಮೊದಲ ಬಾರಿ ಮೆಟಲ್ ಬಾಡಿ ಜೊತೆಗೆ ಆಟೋ ಹಿಲ್ ಹೋಲ್ಡ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಇ-ಆಟೋ ಖರೀದಿ ಮೇಲೆ 5 ವರ್ಷ ಅಥವಾ 1.20 ಕಿ.ಮೀ ಗಳ ವಾರಂಟಿ ಸಹ ಸಿಗಲಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಇದಲ್ಲದೆ ಹೊಸ ಇ-ಆಟೋ ಖರೀದಿಗಾಗಿ ಶೇ.90 ರಷ್ಟು ಹಣಕಾಸು ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಲಾಗುತ್ತಿದ್ದು, ಸುಮಾರು 60 ತಿಂಗಳಿಗೆ ಅನ್ವಯಿಸುವಂತೆ ಇಎಂಐ ಆಯ್ಕೆಗಳನ್ನು ನೀಡಲಾಗುತ್ತಿದೆ. ಇನ್ನು ಹೊಸ ಟ್ರಿಯೊ ಪ್ಲಸ್ ಇ-ಆಟೋದಲ್ಲಿ ಮಹೀಂದ್ರಾ ಕಂಪನಿಯು 10.24kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು 8kW ಪವರ್ ಮತ್ತು 42NM ಟಾರ್ಕ್ ಉತ್ಪಾದನೆಯ ಮೂಲಕ ಪ್ರತಿ ಚಾರ್ಜ್ ಗೆ 150 ಕಿ.ಮೀ ಮೈಲೇಜ್ ನೀಡುತ್ತದೆ.
Published On - 9:59 pm, Sat, 13 April 24