Maruti Suzuki: ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ ರಿವ್ಯೂ

ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಮಾರುತಿ ಸುಜುಕಿ ಹೊಸ ಕಾರುಗಳಲ್ಲಿ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದು ಇದೇ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹಾಗಾದ್ರೆ ಹೊಸ ಕಾರಿನ ವಿಶೇಷತೆಗಳೇನು? ಹೊಸ ಕಾರಿನ ಚಾಲನಾ ಕಾರ್ಯಕ್ಷಮತೆ ಹೇಗಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

Follow us
Praveen Sannamani
|

Updated on:Apr 10, 2023 | 9:18 PM

ಭಾರತದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಕಾರುಗಳ ಕ್ರೆಜ್ ಹೆಚ್ಚುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಮಾದರಿಯ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಮಾರುತಿ ಸುಜುಕಿ(Maruti Suzuki) ಸಹ ಗ್ರಾಹಕರ ಬೇಡಿಕೆಯಂತೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಿದ್ದು, ಫ್ರಾಂಕ್ಸ್(Fronx) ಕ್ರಾಸ್ ಓವರ್ ಎಸ್ ಯುವಿಯು ಇದರಲ್ಲಿ ಪ್ರಮುಖವಾಗಿದೆ. ಇದು ಬಿಡುಗಡೆಯ ನಂತರ ಹಲವು ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಬೆಲೆಯಲ್ಲೂ ಗಮನಸೆಳೆಯಲಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಫ್ರಾಂಕ್ಸ್ ಕಾರನ್ನ ಪ್ರಮುಖ ಎರಡು ಮಾದರಿಗಳ ವಿನ್ಯಾಸ ಪ್ರೇರಣೆಯೊಂದಿಗೆ ಸಿದ್ದಗೊಳಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ವಿಟಾರಾ ಎಸ್ ಯುವಿ ಮತ್ತು ಬಲೆನೊ ಹ್ಯಾಚ್ ಬ್ಯಾಕ್ ಕಾರುಗಳ ವಿನ್ಯಾಸ ಪ್ರೇರಣೆಯೊಂದಿಗೆ ಫ್ರಾಂಕ್ಸ್ ಕಾರನ್ನ ಅಭಿವೃದ್ದಿಪಡಿಸಿದ್ದು, ಹೊಸ ಕಾರನ್ನ ಕ್ರಾಸ್ ಓವರ್ ಎಸ್ ಯುವಿ(Cross Over SUV)ಯಾಗಿ ಗುರುತಿಸಲಾಗುತ್ತದೆ. ಇದು ಸ್ಪೋರ್ಟಿ ವಿನ್ಯಾಸದೊಂದಿಗೆ ಮೊದಲ ನೋಟದಲ್ಲಿಯೇ ಗಮನಸೆಳೆಯಲಿದ್ದು, ಈ ಮೂಲಕ ಹೊಸ ಕಾರು ಮಾರುತಿ ಸುಜುಕಿ ಇದುವರೆಗಿನ ಕಾರುಗಳಲ್ಲೇ ಇದು ಸ್ಟೈಲಿಶ್ ಮಾದರಿ ಎನ್ನಬಹುದಾಗಿದೆ.

ಹೊಸ ಫ್ರಾಂಕ್ಸ್ ಕಾರಿನ ಮತ್ತೊಂದು ವಿಶೇಷ ಅಂದ್ರೆ ಮಾರುತಿ ಸುಜುಕಿ ಕಂಪನಿಯು ಈ ಹಿಂದಿನ ಬೂಸ್ಟರ್ ಜೆಟ್ ಎಂಜಿನ್ ಆಯ್ಕೆಯನ್ನ ಮರಳಿ ಪರಿಚಯಿಸುತ್ತಿದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ನವೀಕೃತ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು ಮೈಲ್ಡ್ ಹೈಬ್ರಿಡ್ ಜೋಡಣೆ ಹೊಂದಿದೆ. ಈ ಹಿಂದೆ ಬಲೆನೊ ಆರ್ ಎಸ್ ಕಾರಿನಲ್ಲಿ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಕಂಪನಿ ಬಿಎಸ್4 ಜಾರಿ ನಂತರ ಸ್ಥಗಿತಗೊಳಿಸಿತ್ತು. ಇದೀಗ ಅದೇ ಎಂಜಿನ್ ಅನ್ನ ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆ ಮಾಡುತ್ತಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಕಾರ್ಯಕ್ಷಮತೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರಲಿದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ ಸಿಟ್ರನ್ ಹೊಸ ಸಿ3 ಏರ್ ಕ್ರಾಸ್

ಹೊಸ ಫ್ರಾಂಕ್ಸ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದೆ. ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ. ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ 88.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಜೊತೆಗೆ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮಾದರಿಯು 98.06 ಹಾರ್ಸ್ ಪವರ್ ಮತ್ತು 147.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫ್ರಾಂಕ್ಸ್ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತದೆ. ಹೊಸ ಕಾರಿನ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ ಗರಿಷ್ಠ 22.89 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಇದರಲ್ಲಿ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ ಗರಿಷ್ಠ 21.79 ಕಿ.ಮೀ ಮೈಲೇಜ್ ನೀಡುತ್ತಿದೆ. ಇನ್ನುಳಿದಂತೆ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಕಾರಿನ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 20.01 ಕಿ.ಮೀ ಮೈಲೇಜ್ ನೀಡಿದ್ರೆ ಆಟೋಮ್ಯಾಟಿಕ್ ಆವೃತ್ತಿಯು 21.05 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಆಟೋಮ್ಯಾಟಿಕ್ ರೂಪಾಂತರಗಳಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಪ್ಯಾಡಲ್ ಶಿಫ್ಟರ್‌ ಅನ್ನು ನೀಡಲಾಗಿದೆ.

ಇದನ್ನೂ ಓದಿ: ಜಾಝ್, ಡಬ್ಲ್ಯೂಆರ್-ವಿ ಮತ್ತು ಸಿಟಿ ಕಾರುಗಳ ಮಾರಾಟ ಸ್ಥಗಿತಗೊಳಿಸಿದ ಹೋಂಡಾ

ಹೊಸ ಕಾರು ಹೊರ ಭಾಗದಲ್ಲಿನ ಪ್ರೀಮಿಯಂ ವಿನ್ಯಾಸದಂತೆ ಒಳಭಾಗದಲ್ಲೂ ಗಮನಸೆಳೆಯಲಿದ್ದು, ಇದರಲ್ಲಿ ಹಲವಾರು ಆಕರ್ಷಕ ಫೀಚರ್ಸ್ ಗಳಿವೆ. ಬಲೆನೊ ಕಾರಿಗಿಂತಲೂ ಹೆಚ್ಚು 5 ಎಂಎಂ ಉದ್ದ, 20ಎಂಎಂ ಅಗಲ ಮತ್ತು 50 ಎಂಎಂ ಎತ್ತರ ಹೊಂದಿದ್ದು, ವಿಶಾಲವಾದ ಕ್ಯಾಬಿನ್ ಹೊಂದಿದೆ. ಜೊತಗೆ ಹೊಸ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಎರಡಕ್ಕೂ ಸಪೋರ್ಟ್ ಮಾಡುವ 9 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಜೋಡಿಸಲಾಗಿದೆ. ಇದರೊಂದಿಗೆ 40ಕ್ಕೂ ಹೆಚ್ಚು ಕನೆಕ್ಟೆಡ್ ಕಾರ್ ಫೀಚರ್ಸ್, ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ನೀಡಲಾಗಿದೆ.

ಇನ್ನು ಹೊಸ ಫ್ರಾಂಕ್ಸ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೊಸ ಕಾರಿನ ಹೈ ಎಂಡ್ ಮಾದರಿಯಲ್ಲಿ ಲಭ್ಯವಾಗುವಂತೆ 6 ಏರ್ ಬ್ಯಾಗ್ ಗಳು, ಇಎಸ್ ಪಿ, ಸ್ಪೀಡ್ ಅಲರ್ಟ್, ಎಬಿಎಸ್ ಜೊತೆಗೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಬ್ರೇಕ್ ಅಸಿಸ್ಟ್ ಮತ್ತು 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಸೌಲಭ್ಯಗಳನ್ನು ನೀಡಿದೆ. ಹೀಗಾಗಿ ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಇದರೊಂದಿಗೆ ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಗಳಿವೆ.

Published On - 9:05 pm, Mon, 10 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ