Maruti WagonR: ಮಾರುತಿ ವ್ಯಾಗನ್‌ಆರ್ ಕಾರನ್ನು ಕೇವಲ 1 ಲಕ್ಷ ರೂ. ಗೆ ಖರೀದಿಸಿ

|

Updated on: Apr 04, 2025 | 6:17 PM

ಸದ್ಯ ನೀವು ಹೊಸ ವ್ಯಾಗನ್ಆರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಮತ್ತು ಒಂದೇ ಬಾರಿಗೆ ಹಣವನ್ನು ಪಾವತಿಸಲು ಇರದಿದ್ದರೆ, ಕಾರು ಲೋನ್ ಉತ್ತಮ ಆಯ್ಕೆಯಾಗಿದೆ. ನೀವು ಕೇವಲ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ವ್ಯಾಗನ್‌ಆರ್‌ನ ಹೆಚ್ಚು ಮಾರಾಟವಾಗುವ VXI ಮ್ಯಾನುವಲ್ ಪೆಟ್ರೋಲ್ ಮತ್ತು ZXI ಮಾದರಿಯನ್ನು ಖರೀದಿಸಬಹುದು.

Maruti WagonR: ಮಾರುತಿ ವ್ಯಾಗನ್‌ಆರ್ ಕಾರನ್ನು ಕೇವಲ 1 ಲಕ್ಷ ರೂ. ಗೆ ಖರೀದಿಸಿ
Wagonr (1)
Follow us on

ಬೆಂಗಳೂರು (ಏ. 04): ಮಾರುತಿ ಸುಜುಕಿಯ ವ್ಯಾಗನ್‌ಆರ್ (Maruti Suzuki WagonR) ಭಾರತದಲ್ಲಿ ಬಹಳಷ್ಟು ಬೇಡಿಕೆ ಇರುವಂತಹ ಕಾರು. ಫೆಬ್ರವರಿ 2025 ರಲ್ಲಿ, ಇದು ಹುಂಡೈ ಕ್ರೆಟಾ, ಟಾಟಾ ನೆಕ್ಸಾನ್ ಮತ್ತು ಪಂಚ್ ಹಾಗೂ ಮಾರುತಿ ಸುಜುಕಿಯ ಬಲೆನೊ, ಬ್ರೆಝಾ, ಸ್ವಿಫ್ಟ್, ಡಿಜೈರ್, ಮಹೀಂದ್ರಾ ಸ್ಕಾರ್ಪಿಯೊದಂತಹ ಜನಪ್ರಿಯ ವಾಹನಗಳನ್ನು ಹಿಂದಿಕ್ಕಿತು. ಸದ್ಯ ನೀವು ಹೊಸ ವ್ಯಾಗನ್ಆರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಮತ್ತು ಒಂದೇ ಬಾರಿಗೆ ಹಣವನ್ನು ಪಾವತಿಸಲು ಇರದಿದ್ದರೆ, ಕಾರು ಲೋನ್ ಉತ್ತಮ ಆಯ್ಕೆಯಾಗಿದೆ. ನೀವು ಕೇವಲ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ವ್ಯಾಗನ್‌ಆರ್‌ನ ಹೆಚ್ಚು ಮಾರಾಟವಾಗುವ VXI ಮ್ಯಾನುವಲ್ ಪೆಟ್ರೋಲ್ ಮತ್ತು ZXI ಮಾದರಿಯನ್ನು ಖರೀದಿಸಬಹುದು. ಉಳಿದ ಮೊತ್ತವನ್ನು ನೀವು ಮಾಸಿಕ ಕಂತುಗಳಲ್ಲಿ ಪಾವತಿಸಬಹುದು.

ಬೆಲೆ ಮತ್ತು ವೈಶಿಷ್ಟ್ಯಗಳು

ಮಾರುತಿ ಸುಜುಕಿ ವ್ಯಾಗನ್‌ಆರ್ ಮೈಲೇಜ್ ವಿಷಯದಲ್ಲಿ ತುಂಬಾ ಉತ್ತಮವಾಗಿದೆ. ಇದು ಕಂಪನಿಯ ಅತ್ಯುತ್ತಮ ಮಾರಾಟವಾದ ವಾಹನಗಳಲ್ಲಿ ಒಂದಾಗಿದ್ದು, ಕಳೆದ ತಿಂಗಳು ಸಹ ಸುಮಾರು 20 ಸಾವಿರ ಯುನಿಟ್‌ಗಳು ಮಾರಾಟವಾಗಿವೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿರುವ ವ್ಯಾಗನ್‌ಆರ್‌ನ ಪ್ರಸ್ತುತ ಎಕ್ಸ್‌ಶೋರೂಂ ಬೆಲೆ 5.64 ಲಕ್ಷ ರೂ. ಗಳಿಂದ ಪ್ರಾರಂಭವಾಗಿ 7.47 ಲಕ್ಷ ರೂ. ಗಳವರೆಗೆ ಇರುತ್ತದೆ. ವ್ಯಾಗನ್ಆರ್ 1197 ಸಿಸಿ ವರೆಗಿನ ಎಂಜಿನ್ ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಯು 25.19 ಕಿಮೀ/ಲೀ ಮೈಲೇಜ್ ನೀಡುತ್ತದೆ ಮತ್ತು ಸಿಎನ್‌ಜಿ ಚಾಲಿತ ಮಾದರಿಯು 34.05 ಕಿಮೀ/ಕೀಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ವ್ಯಾಗನ್‌ಆರ್ VXI ಮ್ಯಾನುಯಲ್ ಪೆಟ್ರೋಲ್ ಹಣಕಾಸು ವಿವರಗಳು:

ಈಗ ಮಾರುತಿ ಸುಜುಕಿ ವ್ಯಾಗನ್‌ಆರ್ ವಿಎಕ್ಸ್‌ಐ ಮಾದರಿಯ ಲೋನ್ ಮತ್ತು ಇಎಂಐ ಬಗ್ಗೆ ನೋಡುವುದಾದರೆ, ಇದರ ಎಕ್ಸ್ ಶೋ ರೂಂ ಬೆಲೆ ರೂ. 6.09 ಲಕ್ಷ ಮತ್ತು ಆನ್-ರೋಡ್ ಬೆಲೆ ರೂ. 6.81 ಲಕ್ಷ. ಈ ರೂಪಾಂತರಕ್ಕೆ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್‌ ಮಾಡಿ 5.81 ಲಕ್ಷ ರೂಪಾಯಿಗಳ ಕಾರು ಲೋನ್ ತೆಗೆದುಕೊಳ್ಳಬೇಕಾಗುತ್ತದೆ. ನೀವು 5 ವರ್ಷಗಳವರೆಗೆ ಶೇ. 10 ಬಡ್ಡಿದರದಲ್ಲಿ ಕಾರು ಸಾಲವನ್ನು ಪಡೆದರೆ, ಮುಂದಿನ 5 ವರ್ಷಗಳವರೆಗೆ ನೀವು ಪ್ರತಿ ತಿಂಗಳು 12,345 ರೂ.ಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ
ಏಪ್ರಿಲ್‌ನಲ್ಲಿ ಅಟೋ ಮಾರುಕಟ್ಟೆಗೆ ಬರಲಿದೆ ಸಾಲು ಸಾಲು ವಾಹನಗಳು
ಫ್ರಾಂಕ್ಸ್ ಅಥವಾ ಪಂಚ್?: CNG ನಲ್ಲಿ ಯಾವ ಕಾರು ಹೆಚ್ಚು ಮೈಲೇಜ್ ನೀಡುತ್ತದೆ?
ಗಮನಿಸಿ: ಏಪ್ರಿಲ್ 1 ರಿಂದ ಈ ವಾಹನಗಳಿಗೆ ಪೆಟ್ರೋಲ್- ಡೀಸೆಲ್ ಸಿಗುವುದಿಲ್ಲ
ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?

Upcoming Cars April 2025: ಏಪ್ರಿಲ್‌ನಲ್ಲಿ ಅಟೋ ಮಾರುಕಟ್ಟೆಗೆ ಬರಲಿದೆ ಸಾಲು ಸಾಲು ವಾಹನಗಳು: ಇಲ್ಲಿದೆ ಪಟ್ಟಿ

ಮಾರುತಿ ಸುಜುಕಿ ವ್ಯಾಗನ್‌ಆರ್ ZXI ಮ್ಯಾನುಯಲ್ ಪೆಟ್ರೋಲ್ ಹಣಕಾಸು ವಿವರಗಳು:

ಮಾರುತಿ ಸುಜುಕಿ ವ್ಯಾಗನ್‌ಆರ್ ಝಡ್‌ಎಕ್ಸ್‌ಐ ಪೆಟ್ರೋಲ್ ಮ್ಯಾನುವಲ್‌ನ ಎಕ್ಸ್ ಶೋ ರೂಂ ಬೆಲೆ 6.38 ಲಕ್ಷ ರೂ. ಮತ್ತು ಆನ್-ರೋಡ್ ಬೆಲೆ ಸುಮಾರು 7.18 ಲಕ್ಷ ರೂ. ಕೇವಲ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮೂಲಕ ಕಾರು ಖರೀದಿಸಬಹುದು. ಅಂತೆಯೆ ನೀವು 6.18 ಲಕ್ಷ ರೂ. ಕಾರು ಸಾಲ ಪಡೆಯಬೇಕಾಗುತ್ತದೆ. ಶೇಕಡಾ 10 ರಷ್ಟು ಬಡ್ಡಿದರದಲ್ಲಿ 5 ವರ್ಷಗಳ ಅವಧಿಗೆ ಕಾರು ಸಾಲವನ್ನು ಪಡೆದರೆ, ಮುಂದಿನ 5 ವರ್ಷಗಳವರೆಗೆ ನೀವು ಮಾಸಿಕ ಕಂತಾಗಿ 13,131 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಮಾರುತಿ ವ್ಯಾಗನ್‌ಆರ್‌ಗೆ ಹಣಕಾಸು ಲೆಕ್ಕಚಾರದ ಮೊದಲು, ನೀವು ಹತ್ತಿರದ ಮಾರುತಿ ಸುಜುಕಿ ಅರೆನಾ ಶೋರೂಮ್‌ಗೆ ಹೋಗಿ ಎಲ್ಲಾ ಮಾಹಿತಿಯನ್ನು ಪಡೆಯಬೇಕು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ