AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mercedes Vision EQXX: ಪ್ರತಿ ಚಾರ್ಜ್ ಗೆ 1 ಸಾವಿರ ಕಿ.ಮೀ ಗೂ ಹೆಚ್ಚು ಮೈಲೇಜ್ ನೀಡುತ್ತೆ ಈ ಇವಿ ಕಾರು!

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಇವಿ ಕಾರು ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Mercedes Vision EQXX: ಪ್ರತಿ ಚಾರ್ಜ್ ಗೆ 1 ಸಾವಿರ ಕಿ.ಮೀ ಗೂ ಹೆಚ್ಚು ಮೈಲೇಜ್ ನೀಡುತ್ತೆ ಈ ಇವಿ ಕಾರು!
ಮರ್ಸಿಡಿಸ್ ಬೆಂಝ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಅನಾವರಣ
Praveen Sannamani
|

Updated on:Dec 14, 2022 | 3:30 PM

Share

ಭಾರತದಲ್ಲಿ ಮೂರನೇ ಆವೃತ್ತಿಯ ರಸ್ತೆ ಸುರಕ್ಷತೆ ಅಭಿಯಾನಕ್ಕೆ ಚಾಲನೆ ನೀಡಿರುವ ಮರ್ಸಿಡಿಸ್ ಬೆಂಝ್(Mercedes Benz)  ಇಂಡಿಯಾ ಕಂಪನಿಯು ಇದೇ ವೇಳೆ ತನ್ನ ಕಾನ್ಸೆಪ್ಟ್ ಕಾರು ಮಾದರಿಯಾದ ವಿಷನ್ ಇಕ್ಯೂಎಕ್ಸ್ಎಕ್ಸ್ (Vision EQXX) ಅನಾವರಣಗೊಳಿಸಿತು. ಎಲೆಕ್ಟ್ರಿಕ್ ಕಾರುಗಳ(Electric Cars) ಬಿಡುಗಡೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2030ರ ವೇಳೆ ಶೇ. 50 ರಷ್ಟು ಕಾರು ಮಾದರಿಗಳನ್ನು ಇವಿ ಮಾದರಿಗಳಾಗಿ ಬಿಡುಗಡೆ ಮಾಡುವ ಗುರಿಹೊಂದಿದ್ದು, ಬೃಹತ್ ಯೋಜನೆಗೆ ಪೂರಕವಾಗಿ ಕಂಪನಿಯು ಹಂತ-ಹಂತವಾಗಿ ಇವಿ ಆವೃತ್ತಿಗಳ ಅಭಿವೃದ್ದಿಯನ್ನು ಹೆಚ್ಚಿಸುತ್ತಿದೆ.

ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಇದೀಗ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಫಾರ್ಮಲಾ 1 ಮಾದರಿಯ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನಗಳ ಪ್ರೇರಣೆ ಹೊಂದಿರಲಿದೆ. ಹೊಸ ಕಾರಿನಲ್ಲಿ ಕಂಪನಿಯು ಬೃಹತ್ ಗಾತ್ರದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಮೈಲೇಜ್ ವಿಚಾರವಾಗಿ ಸದ್ದು ಮಾಡಲಿದೆ.

ಇದನ್ನೂ ಓದಿ: ಭಾರತದಲ್ಲೂ ಬಿಡುಗಡೆಯಾಲಿದೆ ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ನೀಡುವ ಎಂಜಿ 4 ಇವಿ

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯಲ್ಲಿ ಬೃಹತ್ ಗಾತ್ರ 100kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಬರೋಬ್ಬರಿ 1 ಸಾವಿರ ಕಿ.ಮೀ ಗೂ ಅಧಿಕ ಮೈಲೇಜ್ ಹಿಂದಿರುಗಿಸುತ್ತದೆ. ಜೊತೆಗೆ ಹೊಸ ಕಾರು ಸೂಪರ್ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, 0.17cD ಯ ಡ್ರ್ಯಾಗ್ ಗುಣಾಂಕವನ್ನು ಹೊಂದಿದೆ.

Mercedes Benz Vision EQXX

ಹಾಗೆಯೇ ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಸುಧಾರಿತ ತಂತ್ರಜ್ಞಾನದ ಮೂಲಕ ಬ್ಯಾಟರಿಯಿಂದ ಹೊರಸೂಸುವ ಶೇ.95 ರಷ್ಟು ಶಕ್ತಿಯನ್ನು ಚಕ್ರಗಳಿಗೆ ವರ್ಗಾಯಿಸಲ್ಪಡುವಂತೆ ವಿನ್ಯಾಸಗೊಳಿಸಿದ್ದು, ಸ್ಲೋಪಿಂಗ್ ರೂಫ್ ಗಳಲ್ಲಿ ಸೋಲಾರ್‌ ಸೆಲ್‌ಗಳನ್ನು ಜೋಡಿಸಲಾಗಿದೆ. ಇದರಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕಾರಿನ ಇತರೆ ಎಲೆಕ್ಟ್ರಿಕ್ ಸೌಲಭ್ಯಗಳ ಬಳಕೆಗೆ ಸಹಕಾರಿಯಾಗಲಿದ್ದು, ಮುಖ್ಯ ಬ್ಯಾಟರಿ ಮೇಲೆ ಅಲಂಬನೆಯನ್ನು ತಗ್ಗಿಸುವ ಮೂಲಕ ಮೈಲೇಜ್ ರೇಂಜ್ ಹೆಚ್ಚಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಪ್ರವೇಗ್ ಡಿಫೈ ಎಲೆಕ್ಟ್ರಿಕ್ ಕಾರು ಬಿಡುಗಡೆ

ಡಿಸೈನ್ ಮತ್ತು ಫೀಚರ್ಸ್

ಹೊಸ ಕಾರಿನಲ್ಲಿ ಸಿಂಗಲ್ ಮೋಟಾರ್ ಬಳಕೆ ಮಾಡಿರುವ ಮರ್ಸಿಡಿಸ್ ಕಂಪನಿಯು ಉತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸಿದ್ದು, ಇದು 245 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ. ಹೊಸ ಇವಿ ಕಾರಿನಲ್ಲಿ ಇಕ್ಯೂಎಸ್ ಮಾದರಿಯಲ್ಲಿ ಪ್ಲಶ್ ಡೋರ್ ಹ್ಯಾಂಡಲ್, ಅಗಲವಾಗಿರುವ ಎಲ್ಇಡಿ ಟೈಲ್ ಲ್ಯಾಂಪ್, ಕಂಪ್ಯಾಕ್ಟ್ ವಿನ್ಯಾಸ ಹೊಂದಿರುವ ಡೋರ್ ಗಳು, ಎರೋಡೈನಾಮಿಕ್ ವಿನ್ಯಾಸದ ವೀಲ್ಹ್ ಗಳು ಗಮನಸೆಳೆಯುತ್ತವೆ.

ಈ ಮೂಲಕ ಮರ್ಸಿಡಿಸ್ ವಿಷನ್ ಇಕ್ಯೂಎಕ್ಸ್ಎಕ್ಸ್ ಮಾದರಿಯುು ಕಂಪನಿಯ ಭವಿಷ್ಯದ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗೆ ಪೂರಕವಾಗಲಿದ್ದು, ಹೊಸ ಕಾರು ಬಿಡುಗಡೆಯ ಕುರಿತಾದ ಯಾವುದೇ ಮಾಹಿತಿಯನ್ನು ಕಂಪನಿಯು ಹಂಚಿಕೊಂಡಿಲ್ಲ. ಸದ್ಯ ಹತ್ತಕ್ಕೂ ಹೆಚ್ಚು ಇವಿ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಇಕ್ಯೂಎಕ್ಸ್ಎಕ್ಸ್ ಕಾರನ್ನು ಇನ್ನು ಕೆಲವು ವರ್ಷಗಳ ಕಾಲ ಟೆಸ್ಟಿಂಗ್ ನಂತರವಷ್ಟೇ ಬಿಡುಗಡೆ ಮಾಡಬಹುದಾಗಿದೆ.

Published On - 3:03 pm, Wed, 14 December 22