New Car and Cancer: ಹೊಸ ಕಾರು ಯಮ ಡೇಂಜರ್ ಗುರು! ಪ್ರತಿದಿನ 20 ನಿಮಿಷ ಪ್ರಯಾಣಿಸಿದರೆ ಕ್ಯಾನ್ಸರ್​​ ಬರೋದು ಗ್ಯಾರಂಟಿ

ಹೊಸ ಕಾರುಗಳಲ್ಲಿ ಚಲಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಕಾರಿನಲ್ಲಿ ತಾಪಮಾನ ಹೆಚ್ಚಾದಂತೆಲ್ಲಾ, ರಾಸಾಯನಿಕ ಸಂಯುಕ್ತಗಳ ಸಾಂದ್ರತೆಯೂ ಅಧಿಕವಾಗುತ್ತಾ ಸಾಗುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

New Car and Cancer: ಹೊಸ ಕಾರು ಯಮ ಡೇಂಜರ್ ಗುರು! ಪ್ರತಿದಿನ 20 ನಿಮಿಷ ಪ್ರಯಾಣಿಸಿದರೆ ಕ್ಯಾನ್ಸರ್​​ ಬರೋದು ಗ್ಯಾರಂಟಿ
ಹೊಸ ಕಾರು ಯಮ ಡೇಂಜರ್ ಗುರು!
Follow us
ಸಾಧು ಶ್ರೀನಾಥ್​
|

Updated on:Apr 17, 2023 | 3:37 PM

ಕಾರು ಖರೀದಿಸಿದ ತಕ್ಷಣ ಯಾರಿಗೇ ಆಗಲಿ ಲಾಂಗ್ ಡ್ರೈವ್ (Long drive) ಹೋಗುವ ಆಸೆ ಆಕಾಂಕ್ಷೆ ಇರುತ್ತದೆ. ಅದೆಲ್ಲಾ ಸರಿ.. ಆದರೆ ಹೊಸ ಕಾರಿನಲ್ಲಿ (New Car) ಪ್ರಯಾಣಿಸುವ ಸಂಭ್ರಮದಲ್ಲಿರುವಾಗ ಇಲ್ಲೊಂದು ಆಘಾತಕಾರಿ ಸುದ್ದಿಯಿದ್ದು, ಅದನ್ನ ಕೇಳಿದರೆ ಯಾರಿಗೇ ಆಗಲೀ (ಅಂದರೆ ಕಾರು ಖರೀದಿಸದೆ ಇರುವವರೂ ಸಹ) ಶಾಕ್ ಆಗೋದು ಖಂಡಿತಾ.. ಇದು ಹಲವರಿಗೆ ಈಗಾಗಲೇ ಶಾಕ್ ನೀಡಿದೆ. ಖರೀದಿಸಿದ ಹೊಸ ವಸ್ತುಗಳಲ್ಲಿ ಹೊರಬರುವ ವಾಸನೆ (Smell) ಬಹಳಷ್ಟು ಮಂದಿಗೆ ಇಷ್ಟವಾಗುತ್ತದೆ. ಆದರೆ ಹೊಸ ಕಾರಿನಲ್ಲಿ ಬರುವ ವಾಸನೆ ತುಂಬಾ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಹೊಸ ಕಾರುಗಳಲ್ಲಿ ರಾಸಾಯನಿಕಗಳ ವಾಸನೆ ಹೊರಬರುತ್ತದೆ. ಹೊಸ ಕಾರುಗಳಲ್ಲಿ ಈ ವಾಸನೆಯೊಂದಿಗೆ ಲಾಂಗ್ ಡ್ರೈವ್‌ ಮಾಡಿದರೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನ ತೋರಿಸಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ (Harvard University) ಮತ್ತು ಚೀನಾದ ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ದೀರ್ಘಕಾಲದವರೆಗೆ ಹೊಸ ಕಾರಿನಲ್ಲಿ (ಹೊಸ ವಾಹನಗಳಲ್ಲಿ) ಚಾಲನೆ ಮಾಡುವುದು ಕ್ಯಾನ್ಸರ್ ಸಾಧ್ಯತೆಯನ್ನು (Cancer) ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಹಾನಿಕಾರಕ ರಾಸಾಯನಿಕಗಳೊಂದಿಗೆ ದಿನಾ ಕೇವಲ 20 ನಿಮಿಷ ಕಾಲ ಚಾಲನೆ ಮಾಡುವುದು ಸಹ ಅಪಾಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ವಿವಿಧ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಸಂವೇದಕಗಳನ್ನು (ಸೆನ್ಸಾರ್​​​​) ಬಳಸಿ, ಸಂಶೋಧಕರು ಹೊಸ ಆಟೋಮೊಬೈಲ್​​ ವಾಹನಗಳಲ್ಲಿ ಇರುವ ಗಾಳಿಯ ಗುಣಮಟ್ಟದ ಬಗ್ಗೆ ಸಂಶೋಧನೆ ಮಾಡಿದರು. ಹೊಸ ವಾಹನಗಳನ್ನು ಸತತ 12 ದಿನಗಳ ಕಾಲ ಬಾಗಿಲು ಮುಚ್ಚಿ ನಿಗಾವಹಿಸಲಾಯಿತು. ವಾಹನಗಳನ್ನು ವಿವಿಧ ಪರಿಸರ ಪರಿಸ್ಥಿತಿಗಳಲ್ಲಿ ಇರಿಸಲಾಯಿತು ಮತ್ತು ಡೇಟಾವನ್ನು ಸಂಗ್ರಹಿಸಲಾಯಿತು. ಯುಎಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು ಪ್ರತಿಪಾದಿಸಿದ ಮಾಲಿನ್ಯಕಾರಕವಾದ ಫಾರ್ಮಾಲ್ಡಿಹೈಡ್ ರಾಸಾಯನಿಕ ಚೀನಾದ ರಾಷ್ಟ್ರೀಯ ಭದ್ರತಾ ಮಾನದಂಡ ಅವಶ್ಯಕತೆಗಳಿಗಿಂತ 349 % ಹೆಚ್ಚಿನ ಮಟ್ಟದಲ್ಲಿ ಹೊಸ ಆಟೋಮೊಬೈಲ್‌ಗಳಲ್ಲಿ ಕಂಡುಬಂದಿದೆ. ಮನುಷ್ಯನಲ್ಲಿ ಕ್ಯಾನ್ಸರ್​​​ ಕಾರಕ (ಕಾರ್ಸಿನೋಜೆನಿಕ್​) ಅಸಿಟಾಲ್ಡಿಹೈಡ್ ರಾಸಾಯನಿಕವು ಚೀನಾದ ರಾಷ್ಟ್ರೀಯ ಸುರಕ್ಷತಾ ಅವಶ್ಯಕತೆಗಳಿಗಿಂತ 60.5% ರಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ. ಇನ್ನು, ಬಾಷ್ಪಶೀಲ ಸಾವಯವ ಸಂಯುಕ್ತಗಳ ಮಿಶ್ರಣವು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಅಪಾಯವನ್ನು ತಂದೊಡ್ಡುತ್ತದೆ.

“ಹೊಸ ಕಾರುಗಳಿಗೆ ವಿಶಿಷ್ಟವಾದ ವಾಸನೆಯನ್ನು ನೀಡುವ ರಾಸಾಯನಿಕಗಳು … ಚಾಲಕರಿಗೆ ಹೆಚ್ಚಿನ ಆರೋಗ್ಯ ಅಪಾಯವನ್ನುಂಟುಮಾಡುತ್ತವೆ” ಎಂದು ಅಧ್ಯಯನವು ಕಂಡುಹಿಡಿದಿದೆ. ಈ ಅಧ್ಯಯನದ ಸಮ್ಮುಖದಲ್ಲಿ ಹೊಸ ಕಾರುಗಳಲ್ಲಿ ಚಲಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಕಾರಿನಲ್ಲಿ ತಾಪಮಾನ ಹೆಚ್ಚಾದಂತೆಲ್ಲಾ, ರಾಸಾಯನಿಕ ಸಂಯುಕ್ತಗಳ ಸಾಂದ್ರತೆಯೂ ಅಧಿಕವಾಗುತ್ತಾ ಸಾಗುತ್ತದೆ. ಇದು ಅಪಾಯಕಾರಿ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಆಸಕ್ತಿಕರ ಸಂಗತಿಯೆಂದರೆ ವರದಿಯಲ್ಲಿ ಉಲ್ಲೇಖಿಸಲಾದ ಅಂಶದ ಪ್ರಕಾರ ಇಪಿಎ (EPA) ಪ್ರಕಾರ, ಕೊಠಡಿ ತಾಪಮಾನದಲ್ಲಿ ಬಣ್ಣರಹಿತ, ಸುಡುವ ಅನಿಲ, ಬಲವಾದ ವಾಸನೆಯೊಂದಿಗೆ ಫಾರ್ಮಾಲ್ಡಿಹೈಡ್ ಹೆಚ್ಚು ತೀವ್ರವಾಗಿರುತ್ತದೆ”. ಇದು ಶಾಶ್ವತವಾದ ಪ್ರೆಸ್, ಟೆಕ್ಸ್‌ಟೈಲ್ಸ್, ಟೈಲ್ಸ್, ಪೇಂಟ್‌ಗಳು, ಕೋಟಿಂಗ್‌ಗಳು, ಅಸಿಟಾಲ್ಡಿಹೈಡ್‌ನಂತಹ ದೈನಂದಿನ ಗೃಹಬಳಕೆಯ ಅನೇಕ ವಸ್ತುಗಳಲ್ಲಿ ತುಂಬಿತುಳುಕುತ್ತಿದೆ. ಅದೇ ಸಮಯದಲ್ಲಿ, ಇಪಿಎ ಪ್ರಕಾರ ಇದನ್ನು ಇತರ ರಾಸಾಯನಿಕಗಳ ಸಂಶ್ಲೇಷಣೆಯಲ್ಲಿ ಮಧ್ಯಂತರವಾಗಿ ಬಳಸಲಾಗುತ್ತದೆ ಎಂಬುದು ಆತಂಕಕಾರಿಯ ವಿಷಯ. ಇದನ್ನು ಮೂಲಭೂತ ಬಣ್ಣಗಳು, ಪಾಲಿಯೆಸ್ಟರ್ ರೆಸಿನ್ ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ ಎಂಬುದು ಗಮನಾರ್ಹ.

ಇಂತಹ ಅಧ್ಯಯನ ನಡೆಸಿರುವುದು ಇದೇ ಮೊದಲಲ್ಲ. 2021 ರಲ್ಲಿ, ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ದೀರ್ಘಕಾಲದವರೆಗೆ ಹೊಸ ಆಟೋಮೊಬೈಲ್ ಅನ್ನು ಚಾಲನೆ ಮಾಡುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದರು. ಕೇವಲ 20 ನಿಮಿಷಗಳ ಕಾಲವಷ್ಟೇ ವಾಹನ ಚಾಲನೆ ಮಾಡುವುದೂ ಸಹ ಅಪಾಯಕಾರಿಯೇ ಸರಿ. ಭಾರೀ ಪ್ರಮಾಣದ ರಾಸಾಯನಿಕಗಳಿಗೆ ನಿಮ್ಮನ್ನು ಒಡ್ಡುಕೊಂಡಂತೆ ಅದು. ಹಾಗಾಗಿ ಅದು ಕ್ಯಾನ್ಸರ್​​ಗೆ ದಾರಿ ಮಾಡಿಕೊಡುತ್ತದೆ.

ಅಧ್ಯಯನದ ಕೊನೆಯಲ್ಲಿ.. “ಈ ಅಧ್ಯಯನವು ತಮ್ಮ ವಾಹನಗಳಲ್ಲಿ ಗಮನಾರ್ಹ ಸಮಯವನ್ನು ಕಳೆಯುವ ಜನರಿಗೆ ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್ ಅನ್ನು ಉಸಿರಾಡುವ ಸಂಭಾವ್ಯ ಅಪಾಯವನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ, ವಿವಿಧ ಹವಾಮಾನಗಳನ್ನು ಹೊಂದಿರುವ ದೇಶಗಳಲ್ಲಿ ರಾಸಾಯನಿಕ ಸಾಂದ್ರತೆಗಳಲ್ಲಿನ ವ್ಯತ್ಯಾಸವು ಅಂತಹಾ ಪ್ರಭಾವ ಬೀರದು. ಅಷ್ಟೇ ಅಲ್ಲ, ಸಂತಾನೋತ್ಪತ್ತಿ ವಿಷತ್ವ ಸಮಸ್ಯೆಗಳೂ ಬೆಂಜೀನ್, ಫಾರ್ಮಾಲ್ಡಿಹೈಡ್ ನಿಂದ ಉತ್ಪತ್ತಿಯಾಗುತ್ತದೆ.

Published On - 2:40 pm, Mon, 17 April 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ