ಉಚಿತ ಎಸಿ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದ ನಿಸ್ಸಾನ್ ಇಂಡಿಯಾ
ನಿಸ್ಸಾನ್ ಇಂಡಿಯಾ ಕಂಪನಿಯು ದೇಶಾದ್ಯಂತ 122 ಸೇವಾ ಕೇಂದ್ರಗಳ ಜಾಲದ ಮೂಲಕ ತನ್ನ ಗ್ರಾಹಕರ ಕಾರುಗಳಿಗೆ ಉಚಿತ ಎಸಿ ತಪಾಸಣೆ ಶಿಬಿರವನ್ನು ನಡೆಸುತ್ತಿದೆ.
ಹೊಸ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿರುವ ನಿಸ್ಸಾನ್ ಇಂಡಿಯಾ(Nissan India) ಕಂಪನಿಯು ಮಾರಾಟದ ನಂತರ ಗ್ರಾಹಕರ ಸೇವೆಯಲ್ಲೂ ಗಮನಸೆಳೆಯುತ್ತಿದ್ದು, ಕಂಪನಿಯು ಇದೀಗ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಉಚಿತ ಎಸಿ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದೆ.
ಭಾತದಲ್ಲಿ ಹೆಚ್ಚುತ್ತಿರುವ ಹೊಸ ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಳ ಸ್ಪರ್ಧೆಯಲ್ಲಿ ಉತ್ಕೃಷ್ಟ ಸೇವೆಗಳ ಮೇಲೆ ನಿರಂತರ ಗಮನ ಹರಿಸುತ್ತಿರುವ ನಿಸ್ಸಾನ್ ಇಂಡಿಯಾ ಕಂಪನಿಯು ತನ್ನೆಲ್ಲ ಗ್ರಾಹಕರ ಕಾರುಗಳಿಗೆ ಉಚಿತ ಎಸಿ ತಪಾಸಣೆ ಶಿಬಿರವನ್ನು ಘೋಷಿಸಿದೆ. ಎಸಿ ತಪಾಸಣೆ ಶಿಬಿರದಲ್ಲಿ ನಿಸ್ಸಾನ್ ಮತ್ತು ಡಟ್ಸನ್ ಕಾರುಗಳ ಮಾಲೀಕರು ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಅಥವಾ ನಿಸ್ಸಾನ್ ಇಂಡಿಯಾ ಅಧಿಕೃತ ವೆಬ್ ಸೈಟ್ ಮೂಲಕ ತಪಾಸಣೆಗಾಗಿ ಸೇವಾ ಸಮಯವನ್ನು ಸುಲಭವಾಗಿ ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ: ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!
ನಿಸ್ಸಾನ್ ಇಂಡಿಯಾ ಕಂಪನಿಯು ಉಚಿತ ಎಸಿ ತಪಾಸಣೆ ಶಿಬಿರವನ್ನು ದೇಶಾದ್ಯಂತ ಹರಡಿಕೊಂಡಿರುವ ತನ್ನ 122 ಸೇವಾ ಕೇಂದ್ರಗಳ ಜಾಲದ ಮೂಲಕ ಈಗಾಗಲೇ ಚಾಲನೆ ನೀಡಿದ್ದು, ಇದು ಜೂನ್ 15, 2023 ರವರೆಗೆ ನಡೆಸಲಿದೆ. ಈ ಶಿಬಿರದಲ್ಲಿ ನಿಸ್ಸಾನ್ ಕಂಪನಿಯು 20 ಅಂಶಗಳ ಉಚಿತ ತಪಾಸಣೆಯೊಂದಿಗೆ ಕಾರಿನ ಹೊರ ಭಾಗವನ್ನು ಉಚಿತವಾಗಿ ವಾಶ್ ಮಾಡಿಕೊಡುವ ಸೌಲಭ್ಯವನ್ನು ಒಳಗೊಂಡಿರುತ್ತದೆ.
ನಿಸ್ಸಾನ್ ಕಂಪನಿಯು ತರಬೇತಿ ಪಡೆದ ವೃತ್ತಿಪರ ಮೆಕ್ಯಾನಿಕ್ ತಂಡದೊಂದಿಗೆ ಎಸಿ-ತಪಾಸಣೆ ಶಿಬಿರಗಳನ್ನು ನಡೆಸುತ್ತಿದ್ದು, ಕಾರುಗಳಿಗೆ ಎಸಿ-ಸಂಬಂಧಿತ ಸೇವೆಗಳು ಅವಶ್ಯವಿದ್ದಲ್ಲಿ ಲೇಬರ್ ಸಂಬಂಧಿತ ವೆಚ್ಚಗಳ ಮೇಲೆ 20% ವರೆಗೆ ಮತ್ತು ಮೌಲ್ಯವರ್ಧಿತ ಸೇವೆಗಳ ಮೇಲೆ 10% ರಿಯಾಯಿತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಹೊಸ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾದ ಸಿಟ್ರನ್ ಇಂಡಿಯಾ
ಹೊಸ ಗ್ರಾಹಕರ ಸೇವಾ ಶಿಬಿರಗಳೊಂದಿಗೆ ನಿಸ್ಸಾನ್ ಕಂಪನಿಯು ತನ್ನ ಗ್ರಾಹಕರಿಗೆ ಒಟ್ಟು ಮಾಲೀಕತ್ವ ನಿರ್ವಹಣಾ ವೆಚ್ಚ ತಗ್ಗಿಸಲು ಪ್ರಯತ್ನಿಸುತ್ತಿದ್ದು, ಹೊಸ ಉಪಕ್ರಮ ಮೂಲಕ ಬ್ರ್ಯಾಂಡ್ ನಲ್ಲಿ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನಿಸ್ಸಾನ್ ಕಂಪನಿಯ ಗ್ರಾಹಕರ ಸೇವೆಗಳಲ್ಲಿ ಮತ್ತೊಂದು ಪ್ರಮುಖ ಆಕರ್ಷಕ ವೈಶಿಷ್ಟ್ಯತೆಯೆಂದರೆ ಕಾರುಗಳನ್ನ ಮರು ಮಾರಾಟ ಮಾಡಿದಾಗ ಹೊಸ ಮಾಲೀಕರಿಗೆ ಅಸ್ತಿತ್ವದಲ್ಲಿ ಗ್ರಾಹಕ ಸೇವಾ ಸೌಲಭ್ಯ ಪ್ಯಾಕೇಜ್ ವರ್ಗಾಯಿಸಬಹುದಾದ ಅಸಾಧಾರಣ ಪ್ರಯೋಜನಗಳನ್ನು ಖಾತ್ರಿಪಡಿಸುತ್ತದೆ.
Published On - 9:37 pm, Wed, 19 April 23