Nissan Magnite Kuro: ಆಕರ್ಷಕ ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆ

ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಮೈಕ್ರೊ ಎಸ್ ಯುವಿ ಕಾರಿನಲ್ಲಿ ಹೊಸದಾಗಿ ಕುರೋ ಎಡಿಷನ್ ಬಿಡುಗಡೆ ಮಾಡಿದೆ.

Nissan Magnite Kuro: ಆಕರ್ಷಕ ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆ
ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆ
Follow us
Praveen Sannamani
|

Updated on:Oct 08, 2023 | 2:49 PM

ಹೊಸ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ನಿಸ್ಸಾನ್‌ ಇಂಡಿಯಾ(Nissan India) ಕಂಪನಿಯು ಮ್ಯಾಗ್ನೈಟ್ ಮೈಕ್ರೊ ಎಸ್ ಯುವಿ ಕಾರಿನಲ್ಲಿ ಹೊಸದಾಗಿ ಮ್ಯಾಗ್ನೈಟ್ ಕುರೋ(Magnite Kuro) ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. ರೂ. 8.27 ಲಕ್ಷದಿಂದ ರೂ.10.46 ಲಕ್ಷ ಬೆಲೆ ಹೊಂದಿದೆ.

ಮೈಕ್ರೊ ಎಸ್ ಯುವಿ ವಿಭಾಗದಲ್ಲಿ ಸದ್ಯ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಗ್ರಾಹಕರ ಆಕರ್ಷಣೆಗಾಗಿ ಕುರೋ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯ ಎಕ್ಸ್ ವಿ ವೆರಿಯೆಂಟ್ ಆಧರಿಸಿ ಅಭಿವೃದ್ದಿಗೊಂಡಿದೆ. ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿರುವ ಮ್ಯಾಗ್ನೈಟ್ ಕುರೋ ಆವೃತ್ತಿಯು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನೀರಿಕ್ಷೆಯಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಬೇಡಿಕೆ ಪಡೆದುಕೊಳ್ಳಬಹುದಾಗಿದೆ.

Nissan Magnite Kuro Edition (17)

ಹೊಸ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆಯೊಂದಿಗೆ ನಿಸ್ಸಾನ್ ಕಂಪನಿಯು ಈಗಾಗಲೇ ಅಧಿಕೃತ ಬುಕಿಂಗ್ ಆರಂಭಿಸಿದ್ದು, ಸ್ಪೋರ್ಟಿ ಗ್ರಿಲ್ ನೊಂದಿಗೆ ಮುಂಭಾಗ ಮತ್ತು ಹಿಂಬದಿಯ ಬಂಪರ್, ಸ್ಕಿಡ್ ಪ್ಲೇಟ್‌, ರೂಫ್ ರೈಲ್ಸ್, ಡೋರ್ ಹ್ಯಾಂಡಲ್ ಮತ್ತು ಹೆಡ್‌ಲೈಟ್ ಗಳಲ್ಲಿ ಕಪ್ಪು ಬಣ್ಣವನ್ನು ನೀಡಲಾಗಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಕಪ್ಪು ಬಣ್ಣವನ್ನು ನೀಡಲಾಗಿದ್ದು, ಡ್ಯಾಶ್ ಬೋರ್ಡ್, ಸ್ಟೀರಿಂಗ್ ವ್ಹೀಲ್, ಎಸಿ ವೆಂಟ್ಸ್ ಹೋಲ್ಡರ್ ಗಳು ಆಕರ್ಷಕವಾಗಿವೆ.

ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಿದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕುರೋ ಆವೃತ್ತಿಯಲ್ಲಿ ಹೊಸದಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡುತ್ತಿದ್ದು, ಕಪ್ಪು ಬಣ್ಣಕ್ಕೆ ಮತ್ತಷ್ಟು ಮೆರಗು ನೀಡಲು ರೆಡ್ ಬ್ರೇಕ್ ಕ್ಯಾಲಿಪರ್ ಮತ್ತು ಕುರೋ ಬ್ಯಾಡ್ಜ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದೆ.

Nissan Magnite Kuro Edition (18)

ಎಂಜಿನ್ ಮತ್ತು ಪರ್ಫಾಮೆನ್ಸ್ ಹೊಸ ಮ್ಯಾಗ್ನೈಟ್ ಕುರೋ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಇವು ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. 1.0 ಲೀಟರ್ ಎನ್ಎ ಪೆಟ್ರೋಲ್ ಮಾದರಿಯು 72 ಹಾರ್ಸ್ ಪವರ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸದರೆ 1.0 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 100 ಹಾರ್ಸ್ ಪವರ್ ಮತ್ತು 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಇನ್ನು ಸ್ಟ್ಯಾಂಡರ್ಡ್ ಮ್ಯಾಗ್ನೈಟ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್ ಗಳೊಂದಿಗೆ ಆರಂಭಿಕವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷದಿಂದ ರೂ.11.02 ಲಕ್ಷ ಬೆಲೆ ಹೊಂದಿದ್ದು, ಮ್ಯಾಗ್ನೈಟ್ ಕುರೋ ಎಡಿಷನ್ ಆಕರ್ಷಕ ಬೆಲೆ ಜೊತೆಗೆ ಹೆಚ್ಚಿನ ಫೀಚರ್ಸ್ ಹೊಂದಿದೆ ಎನ್ನಬಹುದು.

Published On - 2:02 pm, Sun, 8 October 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ