ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಕುರಿತಾಗಿ ಈಗಾಗಲೇ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಹೊಸ ಕಾರಿನ ಮತ್ತೊಂದು ಟೀಸರ್ ಚಿತ್ರವನ್ನು ಹಂಚಿಕೊಂಡಿದೆ. ಈ ಬಾರಿ ಹೊಸ ಕಾರಿನ ಹೆಡ್ ಲೈಟ್, ಡಿಆರ್ ಎಲ್ಎಸ್ ಮತ್ತು ಇಂಟಿರಿಯರ್ ಚಿತ್ರವನ್ನು ಹಂಚಿಕೊಂಡಿದ್ದು, ಹೊಸ ಕಾರನ್ನು 2024 ರ ವೇಳೆ ಬಿಡುಗಡೆ ಮಾಡುವ ಸುಳಿವು ನೀಡಿದೆ.
ಇವಿ ಕಾರಿನ ಬ್ಯಾಟರಿ ಮತ್ತು ಮೈಲೇಜ್
ಹೊಸ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗುತ್ತಿದ್ದು, ಬ್ಯಾಟರಿ ಸಾಮರ್ಥ್ಯದ ಕುರಿತಾಗಿ ಇನ್ನು ಕೆಲವು ಮಾಹಿತಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಿದೆ. ಹೊಸ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್ ಗೆ 500 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಬ್ಯಾಟರಿ ಆಯ್ಕೆಗಳನ್ನು ನೀಡಬಹುದಾಗಿದೆ.
ಹೊಸ ಇವಿ ವಾಹನಗಳಿಗೆ ಸ್ಥಳೀಯವಾಗಿ ಅಭಿವೃದ್ದಿಪಡಿಸಲಾದ ಬ್ಯಾಟರಿ ಪ್ಯಾಕ್ ನೀಡುವ ಉದ್ದೇಶದಿಂದ ಓಲಾ ಕಂಪನಿಯು ಈಗಾಗಲೇ ಅತಿದೊಡ್ಡ ಸೆಲ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಮೂಲಕ ಲೀಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ನೀರಿಕ್ಷೆ ಹೊಂದಿದೆ.
ಹೊಸ ಇವಿ ಕಾರುಗಳ ಉತ್ಪಾದನೆಯಲ್ಲಿ ವಾಣಿಜ್ಯ ವಾಹನಗಳು ಮತ್ತು ವೈಯಕ್ತಿಕ ಬಳಕೆಯ ವಾಹನ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಾಗುತ್ತಿದ್ದು, ಸ್ಥಳೀಯ ಬ್ಯಾಟರಿ ಪ್ಯಾಕ್ ಬಳಕೆಯಿಂದ ಕಾರುಗಳ ಬೆಲೆ ಕಡಿತವಾಗುವ ನೀರಿಕ್ಷೆಯಿದೆ. ಈ ಮೂಲಕ ಕಂಪನಿಯು ಬಜೆಟ್ ಬೆಲೆಯಲ್ಲೂ ಅತ್ಯುತ್ತಮ ಮೈಲೇಜ್ ರೇಂಜ್ ಮತ್ತು ಹೆಚ್ಚಿನ ಫೀಚರ್ಸ್ ಮಾದರಿಯ ಬಿಡುಗಡೆಗೆ ಪ್ರಯತ್ನಿಸುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮುಂಬರುವ 2024ರ ಕೊನೆಯಲ್ಲಿ ರಸ್ತೆಗಿಳಿಸುವ ಯೋಜನೆಯಲ್ಲಿದೆ.
ಇದನ್ನು ಓದಿ: ಪ್ರತಿ ಚಾರ್ಜ್ ಗೆ 590 ಕಿ.ಮೀ ಮೈಲೇಜ್ ಹೊಂದಿರುವ ಹೊಸ ಮರ್ಸಿಡಿಸ್ ಇಕ್ಯೂಇ ಅನಾವರಣ
ಡಿಸೈನ್ ಮತ್ತು ಫೀಚರ್ಸ್
ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಮತ್ತು ಪ್ರಮುಖ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ಇನ್ನು ಯಾವುದೇ ನಿಖರ ಮಾಹಿತಿಗಳನ್ನು ಬಹಿರಂಗಪಡಿಸದ ಓಲಾ ಎಲೆಕ್ಟ್ರಿಕ್ ಕಂಪನಿಯು ಟೀಸರ್ ಚಿತ್ರದ ಮೂಲಕ ಹೊಸ ಕಾರನ್ನು ಸ್ಪೋರ್ಟಿ ವಿನ್ಯಾಸದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಭಾರತೀಯ ಗ್ರಾಹಕರ ಅಭಿರುಚಿಗಳಿಗೆ ತಕ್ಕಂತೆ ಯುರೋಪಿನ್ ಕಾರುಗಳ ವಿನ್ಯಾಸದಲ್ಲಿ ಹೊಸ ಇವಿ ಕಾರನ್ನು ಬಿಡುಗಡೆ ಮಾಡಬಹುದಾಗಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ನಲ್ಲೂ ಗಮನಸೆಳೆಯಲಿದೆ.
2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿ ಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ.
ಇದನ್ನು ಓದಿ: ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!
ಭಾರೀ ಪ್ರಮಾಣದ ಹೂಡಿಕೆ ಮಾಡಿದ ಓಲಾ
ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆಯ ನಂತರ ಇವಿ ಕಾರುಗಳ ಬಿಡುಗಡೆಗಾಗಿ ಹಂತ-ಹಂತವಾಗಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುತ್ತಿದೆ.
ಈ ಮೂಲಕ ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಕಾರನ್ನು ಬಿಡುಗಡೆ ಮಾಡುವ ನೀರಿಕ್ಷೆ ಹೊಂದಿರುವ ಹೊಸ ಕಾರು ಕಾರು ಉತ್ಪಾದನಾ ವಲಯದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಳ್ಳಲಿದೆ.
Published On - 12:00 pm, Mon, 24 October 22