AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಮೈಲೇಜ್ ನೀಡುವ 4ಕೆವಿಹೆಚ್ ಬ್ಯಾಟರಿ ಪ್ಯಾಕ್ ಪ್ರೇರಿತ ಓಲಾ ಎಸ್1 ಎಕ್ಸ್ ಸ್ಕೂಟರ್ ಬಿಡುಗಡೆ

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಎಕ್ಸ್ ಆವೃತ್ತಿಯನ್ನು ವಿಸ್ತರಿತ ಬ್ಯಾಟರಿ ಪ್ಯಾಕ್ ಸೌಲಭ್ಯದೊಂದಿಗೆ ಬಿಡುಗಡೆ ಮಾಡಿದೆ.

ಭರ್ಜರಿ ಮೈಲೇಜ್ ನೀಡುವ 4ಕೆವಿಹೆಚ್ ಬ್ಯಾಟರಿ ಪ್ಯಾಕ್ ಪ್ರೇರಿತ ಓಲಾ ಎಸ್1 ಎಕ್ಸ್ ಸ್ಕೂಟರ್ ಬಿಡುಗಡೆ
ಓಲಾ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ
Praveen Sannamani
|

Updated on: Feb 02, 2024 | 6:35 PM

Share

ಎಲೆಕ್ಟ್ರಿಕ್ ಸ್ಕೂಟರ್ ಗಳ (Electric Scooters) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ತನ್ನ ಹೊಸ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಆರಂಭಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಎಕ್ಸ್ ಆವೃತ್ತಿಯಲ್ಲಿ ಒಟ್ಟು ಮೂರು ವೆರಿಯೆಂಟ್ ಗಳನ್ನು ಪರಿಚಯಿಸಿದಂತಾಗಿದ್ದು, ಈ ಹಿಂದೆ 2ಕೆವಿಹೆಚ್ ಮತ್ತು 3ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದೀಗ 4ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಬಿಡುಗಡೆ ಮಾಡಿದ್ದು, ಇದು ಎಸ್1 ಪ್ರೊ ಹೈ ಎಂಡ್ ಮಾದರಿಯಂತೆಯೇ ಮೈಲೇಜ್ ನೀಡಲಿದೆ.

2ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಇವಿ ಸ್ಕೂಟರ್ ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 79,999 ಬೆಲೆ ಹೊಂದಿದ್ದರೆ 3ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಇವಿ ರೂ. 89,999 ಬೆಲೆ ಹೊಂದಿದೆ. 4ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 1.10 ಲಕ್ಷ ಬೆಲೆ ಹೊಂದಿದ್ದು, ಇದು ಹೈ ಎಂಡ್ ಮಾದರಿಯು ಮೊದಲೆರಡು ವೆರಿಯೆಂಟ್ ಗಳಿಂತ ಹೆಚ್ಚುವರಿ 4 ಕೆಜಿಯೊಂದಿಗೆ ಒಟ್ಟಾರೆ 112 ಕೆ.ಜಿ ಒಟ್ಟಾರೆ ತೂಕ ಹೊಂದಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಕೈನೆಟಿಕ್ ಇ-ಲೂನಾ ಬಿಡುಗಡೆಗೆ ದಿನಾಂಕ ಫಿಕ್ಸ್

ಮೈಲೇಜ್ ಮತ್ತು ಚಾರ್ಜಿಂಗ್ ಅವಧಿ

4ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 190 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ 6 ಗಂಟೆ 30 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದ್ದು, ಎಸ್1 ಏರ್ ಮಾದರಿಯಲ್ಲಿರುವಂತೆ ಹಲವಾರು ಫೀಚರ್ಸ್ ಹೊಂದಿರಲಿದೆ.

ವಾರಂಟಿ ಮತ್ತು ಚಾರ್ಜಿಂಗ್  ನಿಲ್ದಾಣಗಳು

ಹೊಸ ಎಸ್1 ಸರಣಿ ಇವಿ ಸ್ಕೂಟರ್ ಗಳ ಖರೀದಿ ಮೇಲೆ ಓಲಾ ಎಲೆಕ್ಟ್ರಿಕ್ ಕಂಪನಿಯು 8 ವರ್ಷಗಳು ಅಥವಾ 8 ವರ್ಷಗಳ ಬ್ಯಾಟರಿ ವಾರಂಟಿ ಘೋಷಿಸಿದ್ದು, ಹೆಚ್ಚುವರಿ ಮೊತ್ತದೊಂದಿಗೆ 1 ಲಕ್ಷ ಕಿ.ಮೀ ಮತ್ತು 1.25 ಲಕ್ಷ ಕಿ.ಮೀ ತನಕ ವಿಸ್ತರಿತ ವಾಟಂಟಿಗಳನ್ನು ಸಹ ಪಡೆದುಕೊಳ್ಳಬಹುದು. 1 ಲಕ್ಷ ಕಿ.ಮೀ ವಾರಂಟಿಗಾಗಿ ರೂ. 4,999 ಬೆಲೆ ನಿಗದಿ ಮಾಡಿದ್ದರೆ 1.25 ಲಕ್ಷ ಕಿ.ಮೀ ಮೇಲಿನ ವಾರಂಟಿಗೆ ರೂ. 13,999 ಬೆಲೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ

ಇನ್ನು ಹೆಚ್ಚುತ್ತಿರುವ ಇವಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಸುಮಾರು ಈ ವರ್ಷಾಂತ್ಯಕ್ಕೆ 10 ಸಾವಿರ ಫಾಸ್ಟ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಮತ್ತು 600 ಸರ್ವಿಸ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ. ಸದ್ಯ 1 ಸಾವಿರ ಫಾಸ್ಟ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಯೋಜನೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇದು ಇವಿ ಸ್ಕೂಟರ್ ಖರೀದಿದಾರರಿಗೆ ಸಾಕಷ್ಟು ಅನುಕೂಲಕರವಾಗಲಿದೆ.