ಚಿತ್ರದುರ್ಗದಿಂದ ದಾವಣಗೆರೆ ನಡುವಿನ 72 ಕಿ.ಮೀ ಉದ್ದದ ಷಟ್ಪಥ ಹೆದ್ದಾರಿ ವಿಶೇಷತೆಗಳೇನು?
ಚಿತ್ರದುರ್ಗದಿಂದ ದಾವಣಗೆರೆಗೆ ಸಂಪರ್ಕಿಸುವ 72 ಕಿಮೀ ಉದ್ದದ ಹೊಸ ಆರು ಲೇನ್ ಹೆದ್ದಾರಿ ವಿಸ್ತರಣೆಯು ಇದೀಗ ವಾಹನಗಳ ಪ್ರಯಾಣಕ್ಕೆ ಮುಕ್ತವಾಗಿದೆ. ಈ ಮಾರ್ಗವು ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣವನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪರಿವರ್ತಿಸಲು ಸಹಕಾರಿಯಾಗುವ ನೀರಿಕ್ಷೆಗಳಿವೆ.
ಚಿತ್ರದುರ್ಗದಿಂದ ದಾವಣಗೆರೆಗೆ ಸಂಪರ್ಕಿಸುವ 72 ಕಿಲೋ ಮೀಟರ್ ಉದ್ದದ ಆರು ಪಥದ ಹೆದ್ದಾರಿಯು (6 Lane Highway) ಹಲವು ವಿಶೇಷತೆಗಳೊಂದಿಗೆ ನಿರ್ಮಾಣಗೊಂಡಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೊಸ ಹೆದ್ದಾರಿ ವಿಸ್ತರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇದು ಭಾರತದ ಹಣಕಾಸು ಮತ್ತು ಟೆಕ್ ಹಬ್‌ಗಳ ನಡುವಿನ ನಿರ್ಣಾಯಕ ಕೊಂಡಿ ಎಂದು ಉಲ್ಲೇಖಿಸಿದ್ದಾರೆ.
ಹಲವಾರು ವಿಶೇಷತೆಗಳೊಂದಿಗೆ ನಿರ್ಮಾಣವಾಗಿರುವ ಹೊಸ ಹೆದ್ದಾರಿಯ ಬಗೆಗೆ ನಿತಿನ್ ಗಡ್ಕರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, 1400 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಹೆದ್ದಾರಿಯ ನಿರ್ಮಾಣವು ಸುಸ್ಥಿರ ತಂತ್ರಗಳನ್ನು ಒಳಗೊಂಡಿದೆ ಎಂದಿದ್ದಾರೆ. ಕೇವಲ ಸಂಪರ್ಕ ದೃಷ್ಠಿ ಮೀರಿರುವ ಹೊಸ ಹೆದ್ದಾರಿಯಲ್ಲಿ ಪ್ರವಾಸಿಗರು ಕರ್ನಾಟಕದ ನೈಸರ್ಗಿಕ ಭೂದೃಶ್ಯಗಳನ್ನು ಪರಿಸರ ಸ್ನೇಹಿಯಾಗಿ ಅನುಭವಿಸಲು ಇದು ಒಂದು ಸುವರ್ಣಾವಕಾಶ ಎಂದಿದ್ದಾರೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೆದ್ದಾರಿಗಳ ನಿರ್ಮಾಣವನ್ನು ಪರಿಸರ ಸ್ನೇಹಿಯಾಗಿಸಲು ಮತ್ತು ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಿದೆ. ಹೀಗಾಗಿ ಚಿತ್ರದುರ್ಗದಿಂದ ದಾವಣಗೆರೆ ನಡುವಿನ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳಿಗೆ ಬಿಟುಮಿನಸ್ ಕಾಂಕ್ರೀಟ್ ಮತ್ತು ಮಿಲ್ಲಿಂಗ್ ವಸ್ತುಗಳಲ್ಲಿ ಪ್ಲಾಸ್ಟಿಕ್‌ನಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದೆ. ಈ ಉಪಕ್ರಮವು ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದ್ದು, ಇದು ಭವಿಷ್ಯದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
Traverse the breathtaking vistas along the 6-lane Chitradurga-Davangere stretch 🛣️, a lifeline linking Bangalore and Mumbai. This route isn’t just about reaching destinations; it’s a symphony of time-saving, fuel-efficient, and eco-friendly travel, weaving through Karnataka’s… pic.twitter.com/bBxNrJOSxW
— Nitin Gadkari (मोदी का परिवार) (@nitin_gadkari) May 6, 2024
ಇನ್ನು ರಾಷ್ಟ್ರೀಯ ಹೆದ್ದಾರಿ-75 ರ ಭಾಗವಾಗಿರುವ ಕರ್ನಾಟಕದ ನೆಲಮಂಗಲ ಮತ್ತು ದೇವಿಹಳ್ಳಿ ನಡುವಿನ ಹೆದ್ದಾರಿ ಯೋಜನೆಯ ಬಗೆಗೂ ನಿತಿನ್ ಗಡ್ಕರಿ ಅವರು ಪ್ರತಿಕ್ರಿಯೆಸಿದ್ದಾರೆ. ಈ ಯೋಜನೆಯು ಸಹ ಶೀಘ್ರದಲ್ಲಿಯೇ ಪೂರ್ಣಗೊಳಿಸುವುದರಿಂದ ಮುಂಬೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದಿದ್ದಾರೆ.